ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಪೌಂಡ್‌ಗೆ ಮೂತ್ರ ಮಾಡುವವರೇ ಎಚ್ಚರ...!

|
Google Oneindia Kannada News

ಬೆಂಗಳೂರು, ಜನವರಿ 13: ಮಹಾನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ದಿನನಿತ್ಯ ಹೈರಾಣಾಗುತ್ತವೆ. ಅದರಲ್ಲೂ, ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುವವರದೇ ದೊಡ್ಡ ತಲೆನೋವು ಪಾಲಿಕೆಗಳಿಗೆ.

'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿ, ನಗರವನ್ನು ಗಬ್ಬೆಬ್ಬಿಸುವವರಿಗೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಚ್ಚರಿ ಎನ್ನುವಂತಹ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ಸ್ಥಳದಲ್ಲಿ ಬಹಿರಂಗ ಮೂತ್ರ ವಿಸರ್ಜನೆ ಮಾಡದಿರಲಿ ಎಂದು ಬಿಬಿಎಂಪಿ, ಬೆಂಗಳೂರಿನ ಐದು ಕಡೆ ಕಾಂಪೌಂಡ್‌ಗಳಿಗೆ ದೊಡ್ಡ ದೊಡ್ಡ ಕನ್ನಡಿಗಳನ್ನು ಅಳವಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಮೂತ್ರ ಮಾಡುವವರು ಇನ್ನುಂದೆ ಕನ್ನಡಿಯಲ್ಲಿ ತಮ್ಮನ್ನೇ ತಾವು ನೋಡಿಕೊಳ್ಳಬೇಕಿದೆ!

ಏಕೆ ಈ ಕ್ರಮ?

ಏಕೆ ಈ ಕ್ರಮ?

ಅಂತಾರಾಷ್ಟ್ರೀಯ ಮಟ್ಟದಲ್ಲಿಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿಗೆ ಒಂದು ಅಪಪ್ರಚಾರವೂ ಬೆನ್ನುಬಿದ್ದಿದೆ. "ಗಾರ್ಡನ್ ಸಿಟಿ ಅಲ್ಲ ಗಾರ್ಬೇಜ್ ಸಿಟಿ' ಎಂದು ಹಲವರು ಮೂದಲಿಸುತ್ತಿದ್ದಾರೆ. ಈ ಕಳಂಕವನ್ನು ತೊಡೆದು ಹಾಕಲು ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡರೂ, ಸ್ವಚ್ಛತೆಯಲ್ಲಿ ಅಂದುಕೊಂಡಷ್ಟು ಸಾಧಿಸುವಲ್ಲಿ ಹಿಂದೆ ಬಿದ್ದಿದೆ. ಸ್ವಚ್ಛತೆಗೆ ಅಡ್ಡಿ ಆಗಿರುವ ಸಾರ್ವಜನಿಕ ಕಪೌಂಡ್‌ಗಳಿಗೆ ಮೂತ್ರ ಮಾಡುವುದನ್ನು ತಡೆಗಟ್ಟಲು ಬಿಬಿಎಂಪಿ ಸಾರ್ವಜನಿಕ ಉಚಿತ ಮೂತ್ರಾಲಯಗಳನ್ನು ಸಾಕಷ್ಟು ಸ್ಥಾಪಿಸಿದೆ. ಆದರೂ, ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಮೂತ್ರ ವಿಸರ್ಜನೆ ನಡೆಯುತ್ತಿದೆ. ಇದನ್ನು ಹತ್ತಿಕ್ಕಲು ಹಾಗೂ ಸ್ವಚ್ಛ ಸರ್ವೇಕ್ಷಣೆ 2020 ರ ಅಂಗವಾಗಿ ಕಾಂಪೌಂಡ್‌ಗೆ ಕನ್ನಡಿಗಳನ್ನು ಅಳವಡಿಸುವ ವಿನೂತನ ಕ್ರಮವನ್ನು ಬಿಬಿಎಂಪಿ ಕೈಗೊಂಡಿದೆ.

ಎಲ್ಲೆಲ್ಲಿ ಅಳವಡಿಕೆ?

ಎಲ್ಲೆಲ್ಲಿ ಅಳವಡಿಕೆ?

ಸದ್ಯ ಬೆಂಗಳೂರಿನಲ್ಲಿ ಹೆಚ್ಚು ಜನಸಂದಣಿ ಇರುವ ಐದು ಸ್ಥಳಗಳಲ್ಲಿ ಸಾರ್ವಜನಿಕ ಕಾಂಪೌಂಡ್‌ಗಳಿಗೆ ಕಳೆದ ಭಾನುವಾರ ದೊಡ್ಡ ಕನ್ನಡಿಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಸಾರ್ವಜನಿಕರು ಬಹಿರಂಗ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಪರಿಗಣಿಸಿ ಕನ್ನಡಿ ಹಾಕಲಾಗಿದೆ. ಮುಂದೆ ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಇವುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

೧) ಕೆ ಆರ್ ಮಾರುಕಟ್ಟೆಯ ಇಎಎಸ್‌ಐ ಆಸ್ಪತ್ರೆ ಬಳಿ

೨) ಇಂದಿರಾನಗರದ ಎಳನೀರು ಮಂಡಿಯ ಬಳಿ

೩) ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಬಳಿ

೪) ಚರ್ಚ್ ಸ್ಟ್ರೀಟ್

೫) ಕ್ವೀನ್ಸ್ ರಸ್ತೆ, ಕಾಂಗ್ರೆಸ್‌ ಕಚೇರಿ ಬಳಿ

'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...

8x4 ಅಡಿ ಅಳತೆಯ ಕನ್ನಡಿ

8x4 ಅಡಿ ಅಳತೆಯ ಕನ್ನಡಿ

ಕಾಂಪೌಂಡ್‌ಗಳಿಗೆ ಅಳವಡಿಸಲಾಗಿರುವ ಈ ಕನ್ನಡಿಗಳು 8x4 ಅಡಿ ಅಳತೆಯನ್ನು ಹೊಂದಿದ್ದು, ಒಂದು ಕನ್ನಡಿ ಬೆಲೆ 50 ಸಾವಿರ ರುಪಾಯಿ ಇದೆ. ಕನ್ನಡಿ ಅಳವಡಿಸಿರುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಒಂದು ವೇಳೆ ಅಲ್ಲಿ ಯಾರಾದರೂ ಮೂತ್ರ ವಿಸರ್ಜನೆ ಮಾಡಿದರೆ, ಪೊಲೀಸರು ಅವರನ್ನು ಬಂಧಿಸಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಕನ್ನಡಿಗೆ ಕ್ಯೂ ಆರ್ ಕೋಡ್‌ ಅಳವಡಿಸಲಾಗಿದ್ದು, ಮೂತ್ರ ವಿಸರ್ಜಿಸಬೇಕಾದವ ಆ ಕೋಡ್‌ನ್ನು ಮೊಬೈಲ್‌ನಲ್ಲಿ ಸ್ಯ್ಕಾನ್ ಮಾಡಿದರೆ, ಹತ್ತಿರದ ಸಾರ್ವಜನಿಕ ಶೌಚಾಲಯವನ್ನು ಅದು ತೋರಿಸಲಿದೆ.

419 ಸಾರ್ವಜನಿಕ ಶೌಚಾಲಯ

419 ಸಾರ್ವಜನಿಕ ಶೌಚಾಲಯ

"ಕನ್ನಡಿ ಅಳವಡಿಸಲಾಗಿರುವ ಸ್ಥಳಗಳಲ್ಲೂ ಸಾರ್ವಜನಿಕ ಶೌಚಾಲಯಗಳಿವೆ. ಆದರೆ, ಕೆಲವರು ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟಲು ಪ್ರಾಯೋಗಿಕವಾಗಿ ಈ ಹೊಸ ಉಪಾಯ ಕಂಡುಕೊಂಡಿದ್ದೇವೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 419 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ 162 ಇ-ಟಾಯ್ಲೇಟ್‌ಗಳು ಸಹ ಇವೆ. ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ' ಎಂದು ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲಕುಮಾರ್ ತಿಳಿಸಿದ್ದಾರೆ.

ಶೌಚಾಲಯ ನಿರ್ಮಿಸಬಹುದಿತ್ತಲ್ಲಾ

ಶೌಚಾಲಯ ನಿರ್ಮಿಸಬಹುದಿತ್ತಲ್ಲಾ

ಬಿಬಿಎಂಪಿಯ ಈ ವಿನೂತನ ಐಡಿಯಾಕ್ಕೆ ಕೆಲವರು ಟ್ವಿಟರ್‌ನಲ್ಲಿ ಮೇಯರ್ ಎಂ ಗೌತಮ್ ಕುಮಾರ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರೇ, ಇನ್ನೂ ಕೆಲವರು ಕನ್ನಡಿ ಅಳವಡಿಸುವ ದುಡ್ಡಿನಲ್ಲಿ ಶೌಚಾಲಯವನ್ನೇ ನಿರ್ಮಿಸಬಹುದಿತ್ತಲ್ಲಾ? ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಬಹುದೊಡ್ಡ ಆಘಾತವನ್ನಂತೂ ನೀಡಿದೆ. ಇನ್ಮುಂದೆ ಬೆಂಗಳೂರಿನಲ್ಲಿ ಕಪೌಂಡ್‌ಗಳಿಗೆ ಮೂತ್ರ ವಿಸರ್ಜನೆ ಮಾಡುವವರು ಬಹಳ ಎಚ್ಚರದಿಂದ ಇರಬೇಕಾಗಿದೆ.

ಸ್ವಚ್ಚ ಸರ್ವೇಕ್ಷಣೆಯಲ್ಲಿ ಕಳಪೆ Rank

ಸ್ವಚ್ಚ ಸರ್ವೇಕ್ಷಣೆಯಲ್ಲಿ ಕಳಪೆ Rank

ಸ್ವಚ್ಛ ಸರ್ವೇಕ್ಷಣೆಯ ಭಾಗವಾಗಿ ಕಾಂಪೌಂಡ್‌ಗಳಿಗೆ ಕನ್ನಡಿಗಳನ್ನು ಬಿಬಿಎಂಪಿ ಅಳವಡಿಸುತ್ತಿದೆ. 2019 ರಲ್ಲೂ ಸ್ವಚ್ಚ ಸರ್ವೇಕ್ಷಣೆ ನಡೆದಿತ್ತು. ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 20 ನಗರಗಳನ್ನು ದೇಶದ ಸ್ವಚ್ಚ ನಗರಗಳು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಮಧ್ಯಪ್ರದೇಶದ ಇಂದೋರ್ 2019 ರ ದೇಶದ ನಂಬರ್ 1 ಸ್ವಚ್ಚ ನಗರವಾಗಿತ್ತು. ಅಂಬಿಕಾಪುರ ಎರಡನೇ ಸ್ಥಾನ ಪಡೆದಿದ್ದರೇ, ಕರ್ನಾಟಕದ ಮೈಸೂರು ಮೂರನೇ ಸ್ಥಾನ ಪಡೆದಿತ್ತು. ಬೆಂಗಳೂರಿಗೆ 194 ನೇ ಸ್ಥಾನ ಲಭಿಸಿ, ಸ್ವಚ್ಚತೆಯಲ್ಲಿ ಬೆಂಗಳೂರು ಹಿಂದೆ ಬಿದ್ದಿದೆ ಎಂಬುದು ಜಗಜ್ಜಾಹೀರಾಗಿತ್ತು.

English summary
Huge Mirrors Installation At Public Compounds By BBMP. It is avoiding for the open Urinating at public places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X