• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಷಪ್ ಕಾಟನ್ ಶಾಲೆ ಹೊರಗೆ ವಿದ್ಯಾರ್ಥಿನಿಯರ ಭಾರೀ ಜಟಾಪಟಿ

|
Google Oneindia Kannada News

ಬೆಂಗಳೂರು ಮೇ 18: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸಿಕೊಡಲಾಗುತ್ತದೆ. ಆದರೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಹೊರಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರದಲ್ಲಿರುವಾಗಲೇ ಶಾಲಾ ಆವರಣದ ಹೊರಗೆ ಪರಸ್ಪರ ಹಿಂಸಾತ್ಮಕವಾಗಿ ಹಲ್ಲೆ ಮತ್ತು ನಿಂದನೆ ಮಾಡುತ್ತಿರುವುದು ಕಂಡುಬಂದಿದೆ.

ಬಿಷಪ್ ಕಾಟನ್ ಬಾಲಕಿಯರ ಶಾಲೆಯ ಹಲವಾರು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಮತ್ತು ಹಿಂಸಾತ್ಮಕವಾಗಿ ತಳ್ಳುವುದು ಕಂಡುಬಂದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಆಘಾತಕಾರಿ ಘಟನೆಯ ವಿಡಿಯೋದಲ್ಲಿ ಹಿಂಸಾತ್ಮಕ ಘರ್ಷಣೆಗೆ ಪೋಷಕರು ಸೇರುವುದನ್ನು ತೋರಿಸಲಾಗಿದೆ. ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಹೊಡೆಯಲು ಕೋಲುಗಳನ್ನು ಬಳಸಿರುವುದು ಕಂಡುಬಂದಿದೆ ಮತ್ತು ಒಬ್ಬ ವಿದ್ಯಾರ್ಥಿಯು ಮಹಿಳೆಯನ್ನು ಹಿಂಸಾತ್ಮಕವಾಗಿ ಕೂದಲಿನಿಂದ ಮೆಟ್ಟಿಲುಗಳ ಕೆಳಗೆ ಎಳೆಯುವುದನ್ನು ಕಾಣಬಹುದು.

ಪ್ರತ್ಯಕ್ಷದರ್ಶಿಗಳು ಹೇಳುವಂತೆ ಹಿಂಸಾತ್ಮಕ ಘರ್ಷಣೆಯು ಅನೇಕ ಮೂಗೇಟುಗಳನ್ನು ಉಂಟುಮಾಡಿದೆ. ಇದರ ಹಿಂದಿನ ಕಾರಣ ತಿಳಿದುಬಂದಿಲ್ಲ ಮತ್ತು ಶಾಲೆಯು ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

   ಪ್ರವಾಹದಿಂದ ತತ್ತರಿಸಿದ ಅಸ್ಸಾಂ:ಸಂಕಷ್ಟದಲ್ಲಿ ಸಿಲುಕಿದ 4 ಲಕ್ಷಕ್ಕೂ ಹೆಚ್ಚು ಜನ | Oneindia Kannada

   English summary
   Several girl students of Bishop Cotton Girls' school were seen throwing punches, pulling each other's hair and pushing violently.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X