ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನವಶ್ಯಕ ವಿವಾದ ಮೈಮೇಲೆಳೆದುಕೊಂಡ ವೆಂಕಟ್ ಮುಖಕ್ಕೆ ಮಸಿ

|
Google Oneindia Kannada News

ಬೆಂಗಳೂರು, ನವೆಂಬರ್. 18: ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹುಚ್ಚ ವೆಂಕಟ್ ಅವರಿಗೆ ದಲಿತ ಸಂಘಟನೆಗಳು ಮಸಿ ಬಳಿದಿವೆ.

ಬಿಗ್ ಬಾಸ್ ರಿಯಾಲಿಟಿ ಶೋ ದಿಂದ ಹೊರಬಂದ ಮೇಲೆ ವೆಂಕಟ್ ಪ್ರತಿದಿನ ಸುದ್ದಿ ವಾಹಿನಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್ 17 ರಂದು ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸಂವಿಧಾನ, ಕಾನೂನು ಬಗ್ಗೆ ಮಾತನಾಡುತ್ತ ವೆಂಕಟ್ ಅವಾಚ್ಯ ಶಬ್ದವೊಂದನ್ನು ಬಳಕೆ ಮಾಡಿದ್ದರು. ಈ ಮೂಲಕ ದಲಿತರು ಮತ್ತು ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಬುಧವಾರ ಸಂಜೆ ಕಸ್ತೂರ ಬಾ ರಸ್ತೆ ಬಳಿ ಮಸಿ ಬಳಿದಿವೆ.[ಟಿವಿ ಚಾನಲ್ಲಿನಲ್ಲಿ ಮತ್ತೆ ಕನಲಿ ಕೆಂಡವಾದ 'ಹುಚ್ಚ' ವೆಂಕಟ್]

bengaluru

ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ ನಂತರ ವೆಂಕಟ್ ಅವರನ್ನು ನವೆಂಬರ್ 14 ರಂದು ಶೋ ದಿಂದ ಹೊರಕ್ಕೆ ಹಾಕಲಾಗಿತ್ತು. ಇದಾದ ನಂತರ ವೆಂಕಟ್ ಪ್ರತಿದಿನ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟ್ ಸಮಾಜ ಘಾತಕ ಹೇಳಿಕೆ ನೀಡುತ್ತಿದ್ದಾರೆ ಎಂದು ಪೊಲೀಸ್ ದೂರು ಸಹ ದಾಖಲಾಗಿದೆ. ಅಲ್ಲದೇ ಚಲನ ಚಿತ್ರ ಮಂಡಳಿಗೂ ವಕೀಲರೊಬ್ಬರು ದೂರು ಸಲ್ಲಿಕೆ ಮಾಡಿದ್ದಾರೆ.[ಹುಚ್ಚ ವೆಂಕಟ್ ನ ಬೈಯ್ಯೋರು ಇದ್ದಾರೆ ಸ್ವಾಮಿ..!]

ಬಿಗ್ ಬಾಸ್ ಶೋ ಸಮಾಜದ ದಾರಿ ತಪ್ಪಿಸುತ್ತಿದೆ. ಇದನ್ನು ನಿಷೇಧ ಮಾಡುವ ಬಗ್ಗೆಯೂ ಚರ್ಚೆ ಮಾಡಬೇಕು ಎಂದು ವಿಧಾನಪರಿಷತ್ ನಲ್ಲೂ ಬುಧವಾರ ಚರ್ಚೆ ನಡೆದಿದೆ. ಸಮಾಜಕ್ಕೆ ಒಳ್ಳೆಯದನ್ನು ಹೇಳಬೇಕಾದ ಮಾಧ್ಯಮಗಳು ಸಲ್ಲದ ವಿಷಯವನ್ನು ವೈಭವೀಕರಣ ಮಾಡುತ್ತಿವೆ ಎಂಬ ವಿಷಯ ಚರ್ಚೆಯಾಗಿದೆ.[ಬಿಗ್ ಬಾಸ್ ರಿಯಾಲಿಟಿ ಶೋ ರದ್ದು ಮಾಡಲು ಪತ್ರ]

English summary
Huccha Venkat, who has been evicted from Bigg Boss Kannada 3 reality show, face was smeared by black ink by some Dalit institutions on November 18 evening at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X