ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್‌ಗಯಾರ್‌ ರೇಪ್‌ ಪ್ರಕರಣ: ವರದಿ ಕೇಳಿದ ಕೇಂದ್ರ

By Ashwath
|
Google Oneindia Kannada News

ನವದೆಹಲಿ, ಆ.6: ನಗರದ ವಿಬ್‌‌ಗಯಾರ್‌ ಶಾಲೆಯ ವಿದ್ಯಾರ್ಥಿ‌ನಿ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಸಂಬಂಧ ವರದಿ ನೀಡುವಂತೆ ಆ ಶಾಲೆಗೆ ಮಾನ್ಯತೆ ನೀಡಿರುವ ಕೌನ್ಸಿಲ್‌ ಆಫ್‌ ಇಂಡಿಯನ್‌ ಸ್ಕೂಲ್‌ ಸರ್ಟಿ‌ಫಿಕೇಟ್‌ ಎಕ್ಸಾಮಿನೇಷನ್‌‌(ಸಿಐಎಸ್‌ಸಿಇ) ಕೇಳಿದೆ.

ವಿಬ್‌‌ಗಯಾರ್‌ ಶಾಲೆಗೆ ನೀಡಿರುವ ಮಾನ್ಯತೆ ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸಿಐಎಸ್‌ಸಿಇಗೆ ಶಿಫಾರಸು ಮಾಡಿದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದೂ ಮಾನವ ಸಂಪನ್ಮೂಲ ಸಚಿವಾಲಯ ಸಿಐಎಸ್‌ಸಿಇಯನ್ನು ಪ್ರಶ್ನಿಸಿದೆ.[ಪೋಷಕರಿಗೆ ಸುಳ್ಳು ಮಾಹಿತಿ ನೀಡಿದ ವಿಬ್‌ಗಯಾರ್‌ ಶಾಲೆ]

 vibgyor

ಐಸಿಎಸ್‌ಇ ಪಠ್ಯದಲ್ಲಿ ಪಾಠಮಾಡಲು ಸಿಐಎಸ್‌‌ಸಿಇ ನೀಡುವ ಪ್ರಮಾಣ ಪತ್ರ ಅಗತ್ಯವಾಗಿದ್ದು, ಈ ಪ್ರಮಾಣ ಪತ್ರವನ್ನು ಸಿಐಎಸ್‌‌ಸಿಇ ನೀಡಿದ ಮುಂದಿನ ವರ್ಷದಿಂದ ಪ್ರಮಾಣ ಪತ್ರ ಪಡೆದ ಶಾಲೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಬೋಧನೆ ಮಾಡಬಹುದಾಗಿದೆ.[ಬಳ್ಳಾರಿ ಪ್ರತಿಭಾವಂತ ವಿದ್ಯಾರ್ಥಿಯ ಬೆನ್ನುತಟ್ಟಿದ ಸ್ಮೃತಿ]

ಈ ಹಿಂದೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಕರ್ನಾಟಕದ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರಿಗೆ ವಿಬ್‌‌ಗಯಾರ್‌ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ತೆಗೆದುಕೊಂಡ ಕ್ರಮಗಳು, ಶಾಲೆಯ ಆಡಳಿತ ಮಂಡಳಿ ವೈಫಲ್ಯ ಮುಂತಾದ ವಿಚಾರಗಳ ಕುರಿತು ವಿವರವಾದ ವರದಿ ನೀಡುವಂತೆ ಕೇಳಿತ್ತು.[ವಿಬ್‌‌ಗಯಾರ್‌ ಅತ್ಯಾಚಾರ ಪ್ರಕರಣ : ವರದಿ ಕೇಳಿದ ಕೇಂದ್ರ]

English summary
Expressing concern about the incident that occurred in a Bangalore school, the human resource development ministry Tuesday wrote to the Council of Indian School Certificate Examination (C
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X