ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಸ್ ವೈದ್ಯರ ಕೆಲಸ ನಿಲ್ಲಿಸಿದ ವಾಟ್ಸಪ್ ಸಂದೇಶ!

|
Google Oneindia Kannada News

ಬೆಂಗಳೂರು, ಜ. 30: ನಾವು ನೆಚ್ಚಿಕೊಂಡಿರುವ ವಾಟ್ಸಪ್ ಮೆಸೇಜ್ ಗಳು ಕೆಲವೊಮ್ಮೆ ಎಂಥ ಆವಾಂತರ ಸೃಷ್ಟಿ ಮಾಡಬಲ್ಲವು ಎಂಬುದಕ್ಕೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಗುರುವಾರ ಸಾಕ್ಷಿಯಾಗಿದೆ.

ವಾಟ್ಸಫ್ ನಲ್ಲಿ ಹರಿದು ಬಂದ ಸಂದೇಶವೊಂದು ಅನೇಕರಲ್ಲಿ ಆತಂಕ ಉಂಟುಮಾಡಿದ್ದಲ್ಲದೇ, ವೈದ್ಯರ ಕೆಲಸಕ್ಕೂ ಅಡ್ಡಿ ಉಂಟುಮಾಡಿತ್ತು. ಮಗುವೊಂದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್ ಆಸ್ಪತ್ರೆಗೆ ಜನವರಿ 27 ರಂದು ಸಂಜೆ ದಾಖಲಾಗಿದೆ. ದಯವಿಟ್ಟು ಈ ಮೆಸೇಜ್ ನ್ನು ನಿಮ್ಮ ಸ್ನೇಹಿತರಿಗೆ ತಲುಪಿಸಿ ಮಗುವಿನ ಪಾಲಕರಿಗೆ ಸುದ್ದಿ ತಿಳಿಸಿ' ಎಂಬ ಸಂದೇಶ ಇಷ್ಟೆಲ್ಲಾ ಆವಾಂತರ ಉಂಟುಮಾಡಿತ್ತು.[ವೆಬ್ ಸೈಟ್ ನಿಂದ ವಾಟ್ಸಪ್ ಬಳಸುವುದು ಹೇಗೆ?]

benguluru

ಕೆಲವೇ ಕ್ಷಣದಲ್ಲಿ ಸಂದೇಶ ನೂರಾರು ಗ್ರೂಪ್ ಗಳಿಗೆ ರವಾನೆಯಾಯಿತು. ಕಿಮ್ಸ್ ನ ಕೆಲ ವೈದ್ಯರಿಗೂ ಮೆಸೇಜ್ ಬಂತು. ಆದರೆ ಈ ರೀತಿಯ ಪ್ರಕರಣ ದಾಖಲಾದ ಬಗ್ಗೆ ಸ್ವತಃ ಕಿಮ್ಸ್ ಸಿಬ್ಬಂದಿಗೇ ಮಾಹಿತಿಯಿರಲಿಲ್ಲ. ಆದರೂ ವೈದ್ಯರು ಮತ್ತು ಸಿಬ್ಬಂದಿ ತಮ್ಮ ಎಲ್ಲ ಕೆಲಸ ಬದಿಗಿಟ್ಟು ಮಗುವನ್ನು ಹುಡುಕಲು ಮುಂದಾದರು.

ಸಂಜೆ ಕರ್ತವ್ಯದಲ್ಲಿದ್ದಾಗ ಇಂಥ ಸಂದೇಶವೊಂದು ನನಗೆ ತಲುಪಿತು. ಕೂಡಲೇ ಎಲ್ಲ ವೈದ್ಯರಿಂದ ಮಾಹಿತಿ ಪಡೆದೆ. ಅಲ್ಲದೇ ನಮ್ಮ ಎಲ್ಲ ಸಿಬ್ಬಂದಿ ಕರೆದುಕೊಂಡು ಸುಮಾರು ಎರಡು ಗಂಟೆ ಕಾಲ ಮಗುವಿಗಾಗಿ ಹುಡುಕಾಟ ನಡೆಸಿದೆವು ಎಂದು ಮಕ್ಕಳ ತಜ್ಞ ಡಾ. ಪರಾಸ್ ಕೆ ಘಟನೆಯನ್ನು ಬಿಚ್ಚಿಡುತ್ತಾರೆ.[ಅಷ್ಟಕ್ಕೂ ಎಫ್‌ಬಿ-ವಾಟ್ಸಪ್ ಖರೀದಿಸಿದ್ದು ಎಷ್ಟಕ್ಕೆ?]

ನಾವು ಆ ಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಇಡಿ ಆಸ್ಪತ್ರೆಯನ್ನು ಜಾಲಾಡಿದೆವು. ನಂತರ ಇದೊಂದು ಸುಳ್ಳು ಸಂದೇಶ ಎಂಬುದು ಅರಿವಿಗೆ ಬಂತು. ಆದರೆ ಇಂಥದ್ದೇ ಪ್ರಕರಣ ಮುಂಬೈನಲ್ಲಿ ನಡೆದಿದೆ. ಯಾರೋ ಕಿಡಿಗೇಡಿಗಳು ಬೆಂಗಳೂರು ಎಂಬುದಾಗಿ ಮೆಸೇಜ್ ಹರಿಯಬಿಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ನಕಲಿ ಸಂದೇಶದಿಂದ ನಮ್ಮ ಅಮೂಲ್ಯ ಸಮಯ ವ್ಯರ್ಥ್ಯವಾಯಿತು ಎಂದು ಕಿಮ್ಸ್ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ. ಸುರೇಶ್ ಬೇಸರದಿಂದ ಹೇಳಿದರು.

English summary
WhatsApp is a convenient tool to stay connected and spread information, but on Wednesday, it also resulted in waste of time and resources at a busy hospital. Aa WhatsApp message was forwarded among thousands of people in the city as well as scores of doctors and other medical staff at Kempegowda Institute of Medical Sciences (KIMS) hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X