ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ವಂಚನೆಗೆ ಒಳಗಾದ ಕೂಡ್ಲೇ ಈ ಪ್ಲಾನ್ ಬಳಿಸಿ ಮೋಸದಿಂದ ಬಚಾವ್ ಆಗಿ

|
Google Oneindia Kannada News

ಬೆಂಗಳೂರು ಅ. 25: ರಾಜಧಾನಿ ಬೆಂಗಳೂರು ಸೈಬರ್ ವಂಚಕರ ಸ್ವರ್ಗ ವಾಗುತ್ತಿದೆ. ನಿವೃತ್ತ ಡಿಜಿಪಿ ಶಂಕರ್ ಬಿದರಿಗೆ ಯಾಮಾರಿಸಿದ ಖದೀಮರು ಇನ್ನು ಜನ ಸಾಮಾನ್ಯರನ್ನು ಬಿಡುತ್ತಾರೆಯೇ ? ಆದರೆ, ಸೈಬರ್ ಕ್ರಿಮಿನಲ್ ಗಳ ಮೋಸ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪಕ್ಷದಲ್ಲಿ "ಗೋಲ್ಡನ್ ಅವರ್" ಸೌಲಭ್ಯ ಬಳಿಸಿದರೆ ಕಳೆದುಕೊಂಡ ಹಣ ವಾಪಸು ಪಡೆಯಬಹುದು. ಬೆಂಗಳೂರು ಪೊಲೀಸರು ಪರಿಚಯಿಸಿರುವ "ಗೋಲ್ಡನ್ ಅವರ್" ಸೌಲಭ್ಯ ಪಡೆದರೆ ಸೈಬರ್ ವಂಚನೆಯಿಂದ ಕಳೆದುಕೊಂಡ ಹಣ ಪಡೆಯಲು ಅವಕಾಶವಿದೆ. ಗೋಲ್ಡನ್ ಅವರ್ ಬಳಕೆ ಕುರಿತ ಸಮಗ್ರ ವಿವರ ಇಲ್ಲಿದೆ ನೋಡಿ.

ಆನ್‌ಲೈನ್ ನಲ್ಲಿ ಮೋಸ: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸೈಬರ್ ವಂಚಕರು ಮುಗ್ಧರಿಗೆ ಸುಲಭವಾಗಿ ಮೋಸ ಮಾಡುವ ನಾನಾ ಹಾದಿ ಕಂಡು ಕೊಂಡಿದ್ದಾರೆ. ನೂರು ಮಂದಿಯಲ್ಲಿ ಹತ್ತು ಜನರಿಗೆ ಕನಿಷ್ಠ ಮೋಸ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಸೈಬರ್ ವಂಚಕರು ಎಲ್ಲೋ ಕೂತು ಕಾರ್ಯಾಚರಣೆ ನಡೆಸುವ ಕಾರಣದಿಂದ ಒಮ್ಮೆ ಹಣ ಕಳೆದುಕೊಂಡರೆ ಅದನ್ನು ವಾಪಸು ಪಡೆಯುವುದು ತುಂಬಾ ಕಷ್ಟ. ಹೀಗಾಗಿ ಬೆಂಗಳೂರು ಪೊಲೀಸರೇ ಸೈಬರ್ ವಂಚನೆಗೆ ಒಳಗಾದವರ ಹಣ ರಕ್ಷಿಸಲು "ಗೋಲ್ಡನ್ ಅವರ್" ಪರಿಚಯಿಸಿದ್ದಾರೆ. ಈ ಸೌಲಭ್ಯವನ್ನು ಘಟನೆ ನಡೆದು ಒಂದು ತಾಸಿನಲ್ಲಿ ಪಡೆದರೆ ಮೋಸ ಹೋದ ಹಣ ವಾಪಸು ಪಡೆಯಲು ಅವಕಾಶವಿರುತ್ತದೆ.

ಏನಿದು ಗೋಲ್ಡನ್ ಅವರ್:

ಸಾಮಾನ್ಯವಾಗಿ ಹೃದಯಾಘಾತವಾದ ವೇಳೆ ಒಂದು ತಾಸಿನ ಒಳಗೆ ಅವರಿಗೆ ಚಿಕಿತ್ಸೆ ಕೊಡಿಸುವ ಅವಧಿಯನ್ನು ಗೋಲ್ಡನ್ ಅವರ್ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯುತ್ತಿದ್ದರು. ಬೆಂಗಳೂರು ಪೊಲೀಸರು ಸೈಬರ್ ವಂಚಕರ ಜಾಲಕ್ಕೆ ಕಡಿವಾಣ ಹಾಕಲು, ಜನ ಸಾಮಾನ್ಯರಿಗೆ ನೆರವಾಗಲು ಗೋಲ್ಡನ್ ಅವರ್ ಎಂಬ ಸೌಲಭ್ಯ ಪರಿಚಯಿಸಿದ್ದಾರೆ. ಯಾವುದೇ ವ್ಯಕ್ತಿ ಸೈಬರ್ ವಂಚನೆಗೆ ಒಳಗಾದ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ 112 ಗೆ ಕರೆ ಮಾಡಿ ಸೈಬರ್ ವಂಚನೆಗೆ ಒಗಗಾದ ಬಗ್ಗೆ ಸಮಗ್ರ ವಿವರ ನೀಡಿ ದೂರು ದಾಖಲಿಸಿದರೆ, ಸೈಬರ್ ವಂಚಕರ ಖಾತೆಗೆ ವರ್ಗಾವಣೆಯಾಗಿರುವ ಹಣವನ್ನು ಪೊಲೀಸರೇ ಬ್ಯಾಂಕ್‌ಗಳ ಜತೆ ಸಂವಹನ ಸಾಧಿಸಿ ಹಣ ವರ್ಗಾವಣೆಯಾಗದಂತೆ ತಡೆ ಹಿಡಿಯುತ್ತಾರೆ. ಆ ಬಳಿಕ ಪ್ರಕ್ರಿಯೆ ಮುಗಿಸಿ ವಾಪಸು ಹಣ ನಿಮ್ಮ ಖಾತೆಗೆ ಬರುವಂತೆ ಮಾಡುತ್ತಾರೆ. ಇದನ್ನೇ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.

How to Report within the Golden Hour can help you get your money back

ಒಂದು ತಾಸಿನೊಳಗೆ ಮಾತ್ರ ದೂರು ನೀಡಿದರೆ

ಸೈಬರ್ ವಂಚನೆಗೆ ಒಳಗಾದ ಒಂದು ತಾಸಿನೊಳಗೆ ಮಾತ್ರ ದೂರು ನೀಡಿದರೆ ಈ ಸೌಲಭ್ಯದಿಂದ ಅನುಕೂಲವಾಗಲಿದೆ. ಸಮಯ ಮೀರಿದರೆ ಪ್ರಯೋಜನ ವಾಗದು. ಹೀಗಾಗಿ ಸೈಬರ್ ವಂಚನೆಗೆ ಒಳಗಾದರೆ, ಮರು ಕ್ಷಣ ಆಲೋಚಿಸಿ ಕಾಲಹರಣ ಮಾಡದೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆ ಕೂಡಲೇ ಸಮೀಪದ ಪೊಲೀಸ್ ಠಾಣೆ ಅಥವಾ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಬೇಕು. ಈ ಮಲಕ ಸೈಬರ್ ವಂಚನೆಗೆ ಒಳಗಾದವರು ಕಳೆದುಕೊಂಡ ಹಣ ವಾಪಸು ಪಡೆಯಲು ಅನುಕೂಲವಾಗುತ್ತದೆ.

ಯಾವ ರೂಪದಲ್ಲಿ ಸೈಬರ್ ವಂಚಕರು ಮೋಸ ಮಾಡುತ್ತಾರೆ ಎಂಬುದರ ವಿವರ ಇಲ್ಲಿದೆ.

01 .OTP ಫ್ರಾಡ್:

ಮೊಬೈಲ್‌ಗೆ ಒಟಿಪಿ ಕಳುಹಿಸುವ ಮೂಲಕ ಮಾಡುವ ಮೋಸ. ಒಟಿಪಿ ಪಡೆದ ತಕ್ಷಣವೇ ಅಕೌಂಟ್‌ನಿಂದ ಹಣ ಗಯಾಬ್..

02 : OLX ಫ್ರಾಡ್:

ಒಎಲ್‌ಎಕ್ಸ್ ವಸ್ತುಗಳನ್ನು ವಸ್ತಗಳನ್ನು ತೋರಿಸಿ ವಂಚನೆ - ಮಿಲಿಟರಿ ಅಧಿಕಾರಿ ಕಡಿಮೆ ಬೆಲೆಗೆ ಬೈಕ್ ಇತರೆ ವಸ್ತು ಮಾರಾಟ ಸೋಗಿನಲ್ಲಿ ಮೋಸ.

How to Report within the Golden Hour can help you get your money back

03 : ವಾಟ್ಸ್ ಆಪ್ ಮತ್ತು ಫೇಸ್ ಬುಕ್ ವಿಡಿಯೋ ಕಾಲ್:

ವಾಟ್ಸ್ ಆಪ್ ಅಥವಾ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಳ್ಳುವುದು - ಸ್ನೇಹ ಗಳಿಸಿ ವಿಡಿಯೋ ಕಾಲ್ ಪ್ರಚೋದನೆ - ವಿಡಿಯೋ ರೆಕಾರ್ಡ್ ಮಾಡಿ ಅಥವಾ ಮಾರ್ಫ್ ಮಾಡಿ ಬ್ಲಾಕ್ ಮೇಲ್ ಮಾಡುವುದು - ಆ ಮೂಲಕ ಹಣ ಪೀಕುವುದು.

04 : ಡೆಬಿಟ್ ಕಾರ್ಡ್ ಅಥವಾ ಕ್ರೆಡಿಕ್ ಕಾರ್ಡ್ ಸ್ಕಿಮಿಂಗ್:

ATM ಅಥವಾ ಕೆಲ ವ್ಯಕ್ತಿಗಳು ಸ್ಕಿಮಿಂಗ್ ಅಳವಡಿಕೆ - ಡೇಟಾ ಕಳವು ಮಾಡಿ ಆ ಡೇಟ ಬಳಸಿ ನಕಲಿ ಕಾರ್ಡ್ ತಯಾರಿ - ನಕಲಿ ಕಾರ್ಡ್ ಮೂಲಕ ಖಾತೆಯಲ್ಲಿರುವ ಹಣಕ್ಕೆ ಕನ್ನ ಹಾಕುವುದು.

05 : ಲಿಂಕ್ ಫ್ರಾಡ್:

ಮೊಬೈಲ್‌ಲಿಂಕ್‌ಗಳನ್ನು ಕಳುಹಿಸುತ್ತಾರೆ - ಆ ಲಿಂಕ್ ಓಪನ್ ಮಾಡಿ ಮಾಹಿತಿ ತುಂಬಿದ್ರೆ ಹಣವೆಲ್ಲಾ ಖಾಲಿ ಮಾಡುತ್ತಾರೆ.

How to Report within the Golden Hour can help you get your money back

06 . ಗಿಫ್ಟ್ ಫ್ರಾಡ್:

ಮೊಬೈಲ್‌ಗೆ ಗಿಫ್ಟ್ ಮಾಹಿತಿ ರವಾನೆ - ಗಿಫ್ಟ್ ಪಡೆಯಲು ಲಾಟರಿ ಹಣ ಪಡೆಯಲು ಟ್ಯಾಕ್ಸ್ ಕಟ್ಟಬೇಕು ಎಂಬ ಮಾಹಿತಿ. ಹಣ ಹಾಕಿಸಿಕೊಂಡು ಗಿಫ್ಟ್ ನೀಡದ ನಾಮ ಗ್ಯಾರಂಟಿ.

07. ಇನ್ವೆಸ್ಟಮೆಂಟ್ ಮತ್ತು ಟ್ರೇಡಿಂಗ್ App:

ಇನ್ವೆಸ್ಟ್‌ಮೆಂಟ್ ಮಾಡಿದ್ರೆ ಡಬಲ್ ಹಣ ಗ್ಯಾರಂಟಿ - ಮನೆಯಲ್ಲೇ ಕೆಲಸ ಕೈತುಂಬಾ ಸಂಬಳದ ಆಶ್ವಾಸನೆ - App ಡೌನ್‌ಲೌಡ್ ಮಾಡಿ ಮಾಹಿತಿ ನೀಡಿದ್ರೆ ಅಕೌಂಟ್ ಖಾಲಿ ಖಾಲಿ.

How to Report within the Golden Hour can help you get your money back

08 : ಮ್ಯಾಟ್ರಿಮೋರಿಯಲ್ ಫ್ರಾಡ್:

ಅಂದ ಚಂದದ ಹುಡುಗಿ ಅಥವಾ ಹುಡುಗನ ಪ್ರೋಫೈಲ್ ರೆಡಿ - ಆ ಪ್ರೊಫೈಲ್ ನೋಡಿ ಚಾಟಿಂಗ್ ಸ್ಟಾರ್ಟ್ ಮಾಡಿದ್ರೆ ಯಾಮಾರಿಸ್ತಾರೆ - ಚಂದದ ಮಾತನಾಡುತ್ತಲೇ ಹಣ ಪೀಕುವ ಕಿರಾತಕರಿದ್ದಾರೆ.

09. ಮ್ಯಾಜಿಕ್ ಬ್ರಿಗ್ಸ್ ಫ್ರಾಡ್:

ಮ್ಯಾಜಿಕ್ ಬ್ರಿಗ್ಸ್ ಜಾಹಿರಾತು ನಂಬಬೇಡಿ: ಮಿಲಿಟರಿ ಅಧಿಕಾರಿ ಸೋಗಿನಲ್ಲಿ ಮಹಾಮೋಸ ಮಾಡುತ್ತಾರೆ ಸೈಬರ್ ಕ್ರಿಮಿನಲ್‌ಗಳು.

10 . ರಿಮೋಟ್ ಆಕ್ಸಸ್ ಫ್ರಾಡ್:

ರಿಮೋಟ್ ಆಕ್ಸಸ್ ಇರೋ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸ್ತಾರೆ - ಮೊಬೈಲ್‌ನಲ್ಲೇ ಎಲ್ಲಾ ಕಂಟ್ರೋಲ್ ತಗೊಂಡು ಅಕೌಂಟಿಗೆ ಕನ್ನ ಹಾಕ್ತಾರೆ.

How to Report within the Golden Hour can help you get your money back

11. ಜಾಬ್ ಫ್ರಾಡ್:

ಪಬ್ಲಿಕ್ ಸ್ಥಳದಲ್ಲಿ ಉದ್ಯೋಗ ಜಾಹೀರಾತು - ಜಾಹೀರಾತಿನಲ್ಲಿ ಭರಪೂರ ಸಂಬಳದ ಆಶ್ವಾಸನೆ - ಕರೆ ಮಾಡಿದಾಗ ಹಣ ಹಾಕಿದ್ರೆ ಕೆಲಸ ಕೊಡಿಸುವ ಮಾತು - ಆ ಮಾತು ನಂಬಿ ಹಣ ಹಾಕಿದ್ರೆ ಹಣ ಮತ್ತು ಕೆಲಸ ಎರಡು ಲಾಸ್.

12. ಕಸ್ಟಮರ್ ಕೇರ್ ಫ್ರಾಡ್ :

ಹಣ ಕಳೆದುಕೊಂಡಾಗ ಕಸ್ಟಮರ್ ಕೇರ್ ನಂಬರ್ ಹುಡುಕುತ್ತೀರ. ನಕಲಿ ಖಾತೆಗಳ ಮೂಲಕ ಕಸ್ಟಮರ್ ಕೇರ್ ನಂಬರ್ ಸಿಗುತ್ತೆ. ಆ ನಂಬರ್‌ಗೆ ಕರೆ ಮಾಡಿ ಅಕೌಂಟ್ ಡಿಟೈಲ್ಸ್ ಕೊಟ್ಟರೇ ನಿಮ್ಮ ಉಳಿದ ಹಣವೂ ಎಗರಿಸ್ತಾರೆ.

ಸೈಬರ್ ಪೊಲೀಸರಿಗೆ ದೂರು ನೀಡಿ:

ಸೈಬರ್ ವಂಚನೆಗೆ ಒಳಗಾದ ಕೂಡಲೇ 112 ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮೋಸ ಹೋದ ಬಗ್ಗೆ ಮೊದಲು ಮಾಹಿತಿ ನೀಡಿ. ಕೂಡಲೇ ಸಮೀಪದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಸಾಧ್ಯವಾದರೆ ಒಂದು ತಾಸಿನಲ್ಲಿ ಈ ಕಾರ್ಯ ಮುಗಿಸಿ. ಪೊಲೀಸ್ ನಿಯಂತ್ರಣ ಕಚೇರಿಗೆ ಮಾಹಿತಿ ನೀಡಿದ ಕೂಡಲೇ ಸೈಬರ್ ವಂಚಕರ ಖಾತೆಗೆ ರವಾನೆಯಾಗಿರುವ ಹಣವನ್ನು ಪೊಲೀಸರು ತಡೆ ಹಿಡಿಯುತ್ತಾರೆ. ಸೈಬರ್ ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಮೋಸ ಹೋಗಿದ ತಕ್ಷಣ ಕಾಲಹರಣ ಮಾಡದೇ ಗೋಲ್ಡನ್ ಅವರ ಬಳಿಸಿ ಸೇಫ್ ಆಗುವುದೊಂದೆ ಇರುವ ಏಕೈಕ ಪರಿಹಾರ.

Recommended Video

ಭಾರತವನ್ನು ಸೋಲಿಸಿದ್ರೂ ಪಾಕ್ ಆಟಗಾರರು ಸಂಭ್ರಮ ಪಡ್ಲೇ ಇಲ್ಲ!! ಯಾಕೆ? | Oneindia Kannada

English summary
Here we explaining what is Golden Hour in Cyber crime and How to Report within the Golden Hour can help you get your money back. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X