ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?

ಬಿಬಿಎಂಪಿ ಆಸ್ತಿ ತೆರಿಗೆಯನ್ನು ನಗದು ಇಲ್ಲವೇ ಡಿ.ಡಿ ರೂಪದಲ್ಲಿ ಅಥವಾ ಆನ್ ಲೈನ್ ಮೂಲಕವಷ್ಟೇ ಪಾವತಿಸಬಹುದಾಗಿದೆ. ಮೇ 30ರೊಳಗೆ ಪಾವತಿಸಿದರೆ ಶೇ 5ರಷ್ಟು ರಿಬೇಟ್ ಕೂಡಾ ಇದೆ.

By Mahesh
|
Google Oneindia Kannada News

ಬೆಂಗಳೂರು, ಮೇ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಆಸ್ತಿ ತೆರಿಗೆಯನ್ನು ನಗದು ಇಲ್ಲವೇ ಡಿ.ಡಿ ರೂಪದಲ್ಲಿ ಅಥವಾ ಆನ್ ಲೈನ್ ಮೂಲಕವಷ್ಟೇ ಪಾವತಿಸಬಹುದಾಗಿದೆ.

ಆನ್ ಲೈನ್ ಮೂಲಕ ಪಾವತಿ ವ್ಯವಸ್ಥೆಯನ್ನು ಈ ಬಾರಿ ಇನ್ನಷ್ಟು ಸರಳಗೊಳಿಸಲಾಗಿದೆ. ಮೇ 30ರೊಳಗೆ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಬೇಟ್ ಕೂಡಾ ಇದೆ. ಆದರೆ, ನಿಗದಿತ ಮೊತ್ತಕ್ಕಿಂತ ಕಡಿಮೆ ಅಥವಾ ಹೆಚ್ಚು ತೆರಿಗೆ ಪಾವತಿಸಿದರೆ ಮಾತ್ರ ಕಷ್ಟಕರ. ಆನ್ ಲೈನ್ ಪಾವತಿ ಬಗ್ಗೆ ವಿವರಣೆ ಮುಂದಿದೆ.

ಆನ್ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?ಆನ್ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?

ಪಾಲಿಕೆ ಕಚೇರಿಗಳಲ್ಲಿ 1000 ರೂ.ವರೆಗೆ ಮಾತ್ರ ನಗದು ಪಾವತಿಸಬಹುದಾಗಿದ್ದು, ಅದಕ್ಕಿಂತ ಹೆಚ್ಚು ಮೊತ್ತವಿದ್ದರೆ ಡಿ.ಡಿ ಮೂಲಕ ಸಲ್ಲಿಸಬೇಕು. ಆಯ್ದ ಬ್ಯಾಂಕ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಗದು ಪಾವತಿಗೆ ಮಿತಿ ನಿರ್ಬಂಧವಿಲ್ಲ. ಒಂಬತ್ತು ಬ್ಯಾಂಕ್ ‌ಗಳು, 91 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಸಹಾಯಕ ಕಂದಾಯಾಧಿಕಾರಿ ಕಚೇರಿಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ.

ಬಿಬಿಎಂಪಿ ವೆಬ್ ತಾಣದಲ್ಲಿ ಆಸ್ತಿ ವಿವರ ಗುರುತಿಸುವುದು ಹೇಗೆ?ಬಿಬಿಎಂಪಿ ವೆಬ್ ತಾಣದಲ್ಲಿ ಆಸ್ತಿ ವಿವರ ಗುರುತಿಸುವುದು ಹೇಗೆ?

ಆಸ್ತಿ ತೆರಿಗೆ ಪಾವತಿ ಮಾಡುವ ವಿಚಾರದಲ್ಲಿ ಗೊಂದಲಗಳಿದ್ದರೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿಯನ್ನು ಆರಂಭಿಸಿದೆ. 080 2297 5555/080 2266 0000 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ, ಕಂದಾಯ ವಿಭಾಗದ ಅಧಿಕಾರಿಗಳು ಕರೆ ಸ್ವೀಕರಿಸಿ ಗೊಂದಲ ಬಗೆಹರಿಸುತ್ತಾರೆ

ಡಿ.ಡಿ ಅಥವಾ ಚಲನ್ ಪಡೆದುಕೊಳ್ಳಿ

ಡಿ.ಡಿ ಅಥವಾ ಚಲನ್ ಪಡೆದುಕೊಳ್ಳಿ

ಬಿಬಿಎಂಪಿಯ ಯಾವುದೇ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವಂತಿಲ್ಲ. ಬೆಂಗಳೂರು ಒನ್ ಕೇಂದ್ರದಲ್ಲಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಪಾಲಿಕೆ ಇನ್ನೂ ಒದಗಿಸಿಲ್ಲ. ಆನ್‌ಲೈನ್ ಮೂಲಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಗದು, ಡಿ.ಡಿ ಅಥವಾ ಪೇ-ಆರ್ಡರ್‌ ಮೂಲಕ ತೆರಿಗೆ ಪಾವತಿ ಮಾಡಬಹುದಾಗಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ? ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?

ವೆಬ್ ಸೈಟ್ ನಲ್ಲಿದೆ ಪೂರ್ಣ ಮಾಹಿತಿ

ವೆಬ್ ಸೈಟ್ ನಲ್ಲಿದೆ ಪೂರ್ಣ ಮಾಹಿತಿ

ತೆರಿಗೆ ಪಾವತಿ ಮಾಡಲು ಜನರು ಅರ್ಜಿ ನಮೂನೆ ಮತ್ತು ಚಲನ್‌ಗಳನ್ನು ಆನ್‌ಲೈನ್‌ನಲ್ಲಿಯೇ ಪಡೆದುಕೊಳ್ಳಬೇಕು. bbmp.gov.in ಅಥವಾ bbmptax.karnataka.gov.in ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿ ಮಾಡುವ ಬಗ್ಗೆ ಮಾಹಿತಿ ಇದೆ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿ ವಿಭಾಗದಲ್ಲಿ ಪಿಐಡಿ ಸಂಖ್ಯೆ ನೋಂದಣಿ ಮಾಡಿದರೆ. ಕಳೆದ ಬಾರಿ ತುಂಬಿದ ಕಟ್ಟಿದ ಮಾಹಿತಿ ಸಿಗುತ್ತದೆ. ಸ್ವತ್ತಿನಲ್ಲಿ ಏನಾದರೂ ಬದಲಾವಣೆ ಮಾಡಲಾಗಿದ್ದರೆ ಪರಿಷ್ಕರಣೆಗೂ ಅವಕಾಶ ನೀಡಲಾಗಿದೆ.

ಇದಕ್ಕೆ ಪ್ರತ್ಯೇಕ ಸೇವಾ ಶುಲ್ಕವಿರುವುದಿಲ್ಲ

ಇದಕ್ಕೆ ಪ್ರತ್ಯೇಕ ಸೇವಾ ಶುಲ್ಕವಿರುವುದಿಲ್ಲ

ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಲು ನೆಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ನೀಡಲಾಗಿದೆ. ಯಾವುದೇ ಬ್ಯಾಂಕಿನ ಮಾಸ್ಟರ್‌ ಹಾಗೂ ವೀಸಾ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ ಮೂಲಕವೂ ಪಾವತಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಪ್ರತ್ಯೇಕ ಸೇವಾ ಶುಲ್ಕವಿರುವುದಿಲ್ಲ. ಜನರು ಆನ್‌ಲೈನ್ ಮೂಲಕ ಚಲನ್‌ ಡೌನ್‌ಲೋಡ್ ಮಾಡಿಕೊಂಡು, ಕೆನರಾ ಬ್ಯಾಂಕ್‌ನ ಬೆಂಗಳೂರು ನಗರದ 175 ಶಾಖೆಗಳಲ್ಲಿ ಎಲ್ಲಿ ಬೇಕಾದರೂ ಪಾವತಿ ಮಾಡಬಹುದು. ಚೆಕ್‌ ಮೂಲಕ ತೆರಿಗೆ ಕಟ್ಟಿದರೆ, ನಗದೀಕರಣದ ಬಳಿಕ ರಶೀದಿ ದೊರೆಯುತ್ತದೆ. ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಪಾವತಿಸಬಹುದು

ಆನ್ ಲೈನ್ ಪಾವತಿ ಹೇಗೆ?

ಆನ್ ಲೈನ್ ಪಾವತಿ ಹೇಗೆ?

ಪ್ರಾಪರ್ಟಿ ಟ್ಯಾಕ್ಸ್ ತಾಣಕ್ಕೆ ಭೇಟಿ ಕೊಟ್ಟ ಬಳಿಕ ನಿಮ್ಮ ಪಿಐಡಿ ನಂಬರ್ ಅಥವಾ ಎಸ್ಎಎಸ್ ಅರ್ಜಿ ನಂಬರ್ ಆಯ್ಕೆ ಮಾಡಿಕೊಂಡು ಅರ್ಜಿ ಸಂಖ್ಯೆ ನಮೂದಿಸಿದರೆ ನಿಮ್ಮ ತೆರಿಗೆ ವಿವರ ಸಿಗಲಿದೆ. ಕಳೆದ ಬಾರಿ ತುಂಬಿದ ಕಟ್ಟಿದ ಮಾಹಿತಿ ಸಿಗುತ್ತದೆ. ಸ್ವತ್ತಿನಲ್ಲಿ ಏನಾದರೂ ಬದಲಾವಣೆ ಮಾಡಲಾಗಿದ್ದರೆ ಪರಿಷ್ಕರಣೆಗೂ ಅವಕಾಶ ನೀಡಲಾಗಿದೆ.ನ್ ಲೈನ್ ನಲ್ಲಿ ಬ್ರೋಸರ್ ಮೋಝಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬಳಸಿ ತೆರಿಗೆ ಪಾವತಿಸುವುದು ಸುರಕ್ಷಿತ ವಿಧಾನವಾಗಿದೆ.

ಸಹಾಯವಾಣಿ ಲಭ್ಯ

ಸಹಾಯವಾಣಿ ಲಭ್ಯ

ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಕಚೇರಿಗೆ ಕರೆ ಮಾಡಿ ತೆರಿಗೆ ಲೆಕ್ಕ ಕೇಳಿ ಪಡೆಯಿತಿ. ಅಥವಾ ಆನ್ ಲೈನ್ ನಲ್ಲಿ ತೆರಿಗೆ ಲೆಕ್ಕ ಹಾಕಲು ಈ ಲಿಂಕ್ ಬಳಸಿ

ಬ್ಯಾಂಕ್ ಗಳಲ್ಲೂ ಕಟ್ಟಬಹುದು

ಬ್ಯಾಂಕ್ ಗಳಲ್ಲೂ ಕಟ್ಟಬಹುದು

ಒಂಬತ್ತು ಬ್ಯಾಂಕ್ ಗಳಲ್ಲಿ 336 ಶಾಖೆಗಳು ಆಸ್ತಿದಾರರ ಅನುಕೂಲಕ್ಕಾಗಿ ಒಂಬತ್ತು ಬ್ಯಾಂಕ್ ‌ಗಳಲ್ಲಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಐಡಿಬಿಐ, ಕೆನರಾ, ಕಾರ್ಪೋರೇಷನ್, ಐಎನ್ ‌ಜಿ ವೈಶ್ಯ, ಕೋಟಕ್ ಮಹೀಂದ್ರ, ಇಂಡಸ್ ಇಂಡ್, ಎಸ್ ಬ್ಯಾಂಕ್, ಇಂಡಿಯನ್ ಓವರ್ ‌ಸೀಸ್, ಎಚ್ ‌ಡಿಎಫ್ ‌ಸಿ ಬ್ಯಾಂಕ್ ‌ಗಳ ಒಟ್ಟು 336 ಶಾಖೆಗಳಲ್ಲಿ ತೆರಿಗೆ ಪಾವತಿಸಬಹುದಾಗಿದೆ.

English summary
How to pay BBMP Property Tax Online? : Bruhat Bangalore Mahanagara Palike (BBMP) made it easy to pay property tax by using their online system. How to pay property tax, here is procedure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X