ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈ ಬಿಎಂಟಿಸಿ ಆಪ್ ಬಳಸುವುದು ಹೇಗೆ? ಏನಿದರ ಉಪಯೋಗ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ತನ್ನ ಪ್ರಯಾಣಿಕರಿಗಾಗಿ ಹೊಚ್ಚ ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.''ಮೈ ಬಿಎಂಟಿಸಿ'' ಮೊಬೈಲ್ ಅಪ್ಲಿಕೇಷನ್ ಮೂಲಕ ರಿಯಲ್ ಟೈಮಲ್ಲಿ ಬಿಎಂಟಿಸಿ ಬಸ್ ಬಗ್ಗೆ ಮಾಹಿತಿ ಪಡೆಯಬಹುದು.

ಬಿಎಂಟಿಸಿ ಬಸ್ ಗಳ ವೇಳಾಪಟ್ಟಿ, ಬಸ್ ಗಳು ಆಗಮಿಸುವ ಸಮಯ, ಸಮೀಪದ ಬಸ್ ನಿಲ್ದಾಣ, ಮಾರ್ಗಗಳ ಸಂಖ್ಯೆ ಮುಂತಾದ ಮಾಹಿತಿಗಳನ್ನು ಅಪ್ಲಿಕೇಷನ್ ಮೂಲಕ ಪಡೆಯಬಹುದು. 15 ವರ್ಷ ವಯಸ್ಸಿನ ನಿಹಾರ್ ಥಕ್ಕರ್ ಎಂಬ ತಜ್ಞ ವಿನ್ಯಾಸಗೊಳಿಸಿರುವ ಈ ಅಪ್ಲಿಕೇಷನ್ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ನೀಡಲಿದೆ ಎಂದು ಬಿಎಂಟಿಸಿ ಹೇಳಿದೆ.

ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಬಿಎಂಟಿಸಿ (ಜಾಗೃತ ಹಾಗೂ ಭದ್ರತಾ ಇಲಾಖೆ) ನಿರ್ದೇಶಕ ಅನುಪಮ್ ಅಗರವಾಲ್ ಅವರು ''ಮೈ ಬಿಎಂಟಿಸಿ ಮೊಬೈಲ್ ಆಪ್'' ಬಿಡುಗಡೆ ಮಾಡಿದರು. ಗೂಗಲ್ ಪ್ಲೇ ಸ್ಟೋರ್ ನಲ್ಲಿ MyBMTC app ಎಂದು ಸರ್ಚ್ ಮಾಡಿದರೆ ಬಿಎಂಟಿಸಿ ಅಧಿಕೃತ ಖಾತೆಯಲ್ಲಿರುವ ಅಪ್ಲಿಕೇಷನ್ ಓಪನ್ ಆಗುತ್ತದೆ. ಇದನು ನಿಮ್ಮ ಮೊಬೈಲಿಗೆ ಇಳಿಸಿಕೊಂಡು ಬಳಸಬಹುದು. ಸದ್ಯಕ್ಕೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ವುಳ್ಳ ಮೊಬೈಲ್ ಗಳಲ್ಲಿ ಮಾತ್ರ ಲಭ್ಯವಿದ್ದು, ಜನವರಿ ಅಂತ್ಯದೊಳಗೆ ಐಫೋನ್ ಗಳಲ್ಲೂ ಈ ಆಪ್ ಲಭ್ಯವಾಗಲಿದೆ.

ಹಳೆ ಅಪ್ಲಿಕೇಷನ್ ಬಂದ್ ಆಗಿದೆ

ಹಳೆ ಅಪ್ಲಿಕೇಷನ್ ಬಂದ್ ಆಗಿದೆ

ಜುಲೈ 2019ರಲ್ಲಿ ನಿಹಾರ್ ಈ ಮುಂಚೆ ಬಿಟ್ಟಿದ್ದ ಮೈ ಬಿಎಂಟಿಸಿ ಅಪ್ಲಿಕೇಷನ್ ಬಂದ್ ಮಾಡಿಸಲಾಯಿತು. ಎರಡು ವರ್ಷಗಳ ಅನಧಿಕೃತವಾಗಿ ಸಾರಿಗೆ ಸಂಸ್ಥೆಯ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಿದ್ದರು. ಸಾರಿಗೆ ಸಂಸ್ಥೆ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾದರೆ ದುರುಪಯೋಗವಾಗುವ ಶಂಕೆಯಿಂದ ಈ ಕ್ರಮ ಕೈಗೊಳ್ಳಲಾಯಿತು.

ಶಾಲಾ ವಿದ್ಯಾರ್ಥಿ ನಿಹಾರ್ ಥಕ್ಕರ್

ಶಾಲಾ ವಿದ್ಯಾರ್ಥಿ ನಿಹಾರ್ ಥಕ್ಕರ್

ಶಾಲಾ ವಿದ್ಯಾರ್ಥಿ ನಿಹಾರ್ ಥಕ್ಕರ್ ತಮ್ಮ ಈ ಹಿಂದಿನ ಅಪ್ಲಿಕೇಷನ್ ಬಂದ್ ಮಾಡಿದ ಬಳಿಕ, ಸುಧಾರಿತ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿ ಸಾರಿಗೆ ಸಂಸ್ಥೆಗೆ ನೀಡಿದ್ದಾರೆ. ಈ ಆಪ್ ನಲ್ಲಿ ಡೈನಾಮಿಕ ಅಂಶಗಳನ್ನು ಸೇರಿಸಲಾಗಿದೆ. ದರ ಪಟ್ಟಿ, ಮಹಿಳೆಯರಿಗೆ ತುರ್ತು ಸಂದರ್ಭದಲ್ಲಿ ಕರೆ ಸೌಲಭ್ಯ, ಬಸ್ ಬುಕ್ಕಿಂಗ್ ಎಲ್ಲವೂ ಇದೆ. ಗೂಗಲ್ ಮ್ಯಾಪ್ ನಂತೆ ಬಸ್ ಗಳನ್ನು ಲೈವ್ ಟ್ರ್ಯಾಕ್ ಮಾಡಬಹುದು. ಮಿಕ್ಕಂತೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ಮಾಹಿತಿ ಲಭ್ಯವಿದೆ.

ಕನ್ನಡದಲ್ಲಿ ಆಪ್ ಯಾವಾಗ ಲಭ್ಯ

ಕನ್ನಡದಲ್ಲಿ ಆಪ್ ಯಾವಾಗ ಲಭ್ಯ

ಸದ್ಯ ಬಿಡುಗಡೆಯಾಗಿರುವ ಅಪ್ಲಿಕೇಷನ್ ಇಂಗ್ಲೀಷ್ ನಲ್ಲಿದ್ದು, ಆಂಡ್ರಾಯ್ಡ್ ಮೊಬೈಲ್ ನಲ್ಲಿ ಬಳಸಬಹುದು. ಸುಮಾರು 65 ಸಾವಿರ ಬಸ್ ಗಳ ಮಾಹಿತಿಯನ್ನು ಒಳಗೊಂಡಿದೆ. ಜನವರಿ ತಿಂಗಳ ಅಂತ್ಯಕ್ಕೆ ಐಫೋನ್ ನಲ್ಲಿ ಲಭ್ಯವಾಗಲಿದ್ದು, ಕನ್ನಡ ಭಾಷೆಯಲ್ಲೂ ಲಭ್ಯವಾಗಲಿದೆ ಎಂದು ಬಿಎಂಟಿಸಿ ವಕ್ತಾರರು ಹೇಳಿದ್ದಾರೆ.

ಪ್ರಯಾಣಿಕರನ್ನು ಸೆಳೆಯಲು ಯತ್ನ

ಪ್ರಯಾಣಿಕರನ್ನು ಸೆಳೆಯಲು ಯತ್ನ

ಪ್ರಯಾಣಿಕರನ್ನು ಸೆಳೆಯಲು ಯತ್ನಿಸುತ್ತಿರುವ ಬಿಎಂಟಿಸಿ ಕಳೆದ ಕೆಲವು ವರ್ಷಗಳಿಂದ ಪ್ರಯಾಣಿಕರ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ. 2014-15ರಲ್ಲಿ 51.3 ಲಕ್ಷ ಇದ್ದದ್ದು 2018-19 ರಲ್ಲಿ 36 ಲಕ್ಷ ರುಕ್ಕೆ ಕುಸಿದಿದೆ. ಈ ಅಪ್ಲಿಕೇಷನ್ ಮೂಲಕ ಪ್ರಯಾಣಿಕರು ತಮ್ಮ ದೂರು ಹಾಗೂ ಸಲಹೆಗಳನ್ನು ನೀಡಬಹುದು ಎಂದು ಬಿಎಂಟಿಸಿ ಹೇಳಿದೆ.

English summary
Bangalore Metropolitan Transport Corporation (BMTC) has launched 'MyBMTC mobile app'(beta version) developed by 15 year old Nihar Thakkar. This app help citizens get real-time information. How to install and use MyBMTC app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X