ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್

ಬೆಂಗಳೂರಿನ ನಾಗರಿಕರಿಗೆ ಪ್ರತಿನಿತ್ಯ ಎದುರಾಗುವ ಸಮಸ್ಯೆಗಳತ್ತ ಗಮನ ಹರಿಸಿ, ಪರಿಹಾರ ಸೂಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಲ್ ಇನ್ ಒನ್ ಮೊಬೈಲ್ ಅಪ್ಲಿಕೇಷನ್ ಇದೆ. ಸಹಾಯವಾಣಿ ಅಪ್ಲಿಕೇಷನ್ ಬಳಸುವುದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಮೇ 24: ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರಿಗೆ ಪ್ರತಿನಿತ್ಯ ಎದುರಾಗುವ ಸಮಸ್ಯೆಗಳತ್ತ ಗಮನ ಹರಿಸಿ, ಪರಿಹಾರ ಸೂಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಲ್ ಇನ್ ಒನ್ ಮೊಬೈಲ್ ಅಪ್ಲಿಕೇಷನ್ ಆರಂಭಿಸಿ ವರ್ಷಗಳೇ ಕಳೆದಿವೆ. ಆದರೆ, ಆಪ್ ಬಳಕೆ ಮಾತ್ರ ಹೆಚ್ಚಿಲ್ಲ. ಬಿಬಿಎಂಪಿ ಸಹಾಯವಾಣಿ ಅಪ್ಲಿಕೇಷನ್ ಬಳಸುವುದು ಹೇಗೆ? ಇಲ್ಲಿದೆ ವಿವರಣೆ...

ನಾಗರಿಕರ ದೂರು ದುಮ್ಮಾನಗಳನ್ನು ಕೇಳಿಸಿಕೊಂಡು ಪರಿಹಾರ ಸೂಚಿಸಲು ಬಿಬಿಎಂಪಿ ಕಾಲ್ ಸೆಂಟರ್ 24/7 ಕಾರ್ಯನಿರ್ವಹಿಸುತ್ತದೆ. ನಾಗರಿಕರು ತಮ್ಮ ದೂರುಗಳನ್ನು ವೆಬ್ ಸೈಟ್, ಫೋನ್ ಕರೆ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಸಲ್ಲಿಸಬಹುದು.[ಪಬ್ಲಿಕ್ ಐ ಆಯುಧ ಬಳಸುವುದು ಹೇಗೆ?]

ಯಾವುದರ ಬಗ್ಗೆ ದೂರು ನೀಡಬಹುದು?: ಸುಮಾರು 20ಕ್ಕೂ ಅಧಿಕ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಆಪ್ಲಿಕೇಷನ್ ಮೂಲಕ ನೀಡಬಹುದು. ದೂರು ಮಾದರಿಗಳು ಲಭ್ಯವಿದೆ.[ಕುಂದುಕೊರತೆಗಳ ದೂರು ನೀಡಲು ಜನಹಿತ APP]

ತ್ಯಾಜ್ಯ ನಿರ್ವಹಣೆ, ಮೂಲ ಸೌಕರ್ಯ ಕೊರತೆ, ಕಟ್ಟಡ ನಿರ್ಮಾಣ, ತೆರಿಗೆ ಹಾಗೂ ಕಂದಾಯ ಇಲಾಖೆ, ಆರೋಗ್ಯ, ಮರ ಹಾಗೂ ಅರಣ್ಯ ಇಲಾಖೆ, ಸಾರ್ವಜನಿಕ ಸುರಕ್ಷತೆ, ಪರಿಸರ, ಭೂ ಕಬಳಿಕೆ, ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಬಹುದು.

ನಾಗರಿಕರ ನೆರವಿಗೆ ಅಪ್ಲಿಕೇಷನ್

ನಾಗರಿಕರ ನೆರವಿಗೆ ಅಪ್ಲಿಕೇಷನ್

ಬಿಬಿಎಂಪಿ ಸಹಾಯವಾಣಿ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಅಥವಾ ಆನ್ ಲೈನ್ ನಲ್ಲಿ ತ್ವರಿತವಾಗಿ ಅರ್ಜಿ ತುಂಬಿ ದೂರು ಸಲ್ಲಿಸಬಹುದು. ಇದಕ್ಕಾಗಿ ಈ ಲಿಂಕ್ ಬಳಸಿ

ಅಪ್ಲಿಕೇಷನ್ ಬಳಸಲು ಸದಸ್ಯರಾಗಿ ಲಾಗ್ ಇನ್ ಆಗಬಹುದು, ಅಥವಾ ಅತಿಥಿಯಾಗಿ ಹೆಸರು, ಇಮೇಲ್ ಅಥವಾ ಮೊಬೈಲ್ ಸಂಖ್ಯೆ ನೀಡಿ, ಒಟಿಪಿ ಪಡೆದು ಲಾಗ್ ಇನ್ ಆಗಬಹುದು.

ದೂರ್ ನೀಡಲು ಅಪ್ಲಿಕೇಷನ್

ದೂರ್ ನೀಡಲು ಅಪ್ಲಿಕೇಷನ್

ಸುಮಾರು 20ಕ್ಕೂ ಅಧಿಕ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಆಪ್ಲಿಕೇಷನ್ ಮೂಲಕ ನೀಡಬಹುದು. ದೂರು ಮಾದರಿಗಳು ಲಭ್ಯವಿದೆ. ಲಭ್ಯ ಪಟ್ಟಿಯಲ್ಲಿ ನಿಮ್ಮ ಆಯ್ಕೆಯನ್ನು ಸೂಚಿಸಬಹುದು ಅಥವಾ ಪಟ್ಟಿಯಲ್ಲಿಲ್ಲ ದೂರು ನಿಮ್ಮದಾದರೆ ಕೆಳಗಿರುವ ಪಟ್ಟಿ ಒತ್ತಿ ಮುಂದಕ್ಕೆ ಚಲಿಸಬಹುದು. ಸಿದ್ದ ಮಾದರಿ ದೂರುಗಳ ಪಟ್ಟಿ ನಿಮಗೆ ಸಿಗುತ್ತದೆ.

ದೂರು ನೀಡುವುದು ಹೀಗೆ

ದೂರು ನೀಡುವುದು ಹೀಗೆ

ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್, ದೂರಿನ ಸ್ಚರೂಪ, ಚಿತ್ರಗಳನ್ನು ಅಪ್ ಲೋಡ್ ಮಾಡಬಹುದು. ಜತೆಗೆ ದೂರಿಗೆ ಸಂಬಂಧಿಸಿದ ಲೊಕೇಷನ್(ವಾರ್ಡ್ ವಿವರ ಇದ್ದರೆ ಇನ್ನೂ ಒಳ್ಳೆಯದು) ಹಾಕಿದರೆ ಒಳ್ಳೆಯದು. ದೂರಿನ ಪ್ರತಿ ಮುನ್ನೋಟ ವೀಕ್ಷಣೆ submit ಬಟನ್ ಒತ್ತಬಹುದು. ದೂರು ಸಲ್ಲಿಸಿದ ಬಳಿಕ ದೂರಿನ ಬಗ್ಗೆ ಕೈಗೊಂಡಿರುವ ಕ್ರಮವನ್ನು ಟ್ರ್ಯಾಕ್ ಮಾಡಬಹುದು. ಅಪ್ ನಲ್ಲೇ ಇದಕ್ಕೆ ಸೌಲಭ್ಯ ಒದಗಿಸಲಾಗಿದೆ.

ನಾಗರಿಕರಿಗೆ ಸಹಾಯವಾಣಿ

ನಾಗರಿಕರಿಗೆ ಸಹಾಯವಾಣಿ

* ಬಿಬಿಎಂಪಿ ಸಂಪರ್ಕ ಹೊಂದಲು : 94806 85700 ವಾಟ್ಸಪ್ ನಂಬರ್ (ಕೇವಲ ಸಂದೇಶ ಕಳಿಸಲು ಮಾತ್ರ ಬಳಸಿ)
* ಬಿಬಿಎಂಪಿ ಮೇಯರ್ ಅಧಿಕೃತ ಟ್ವಿಟ್ಟರ್ ಐಡಿ: https://twitter.com/BBMP_MAYOR
* ಇ-ಮೇಲ್ ಮೂಲಕ ಸಂಪರ್ಕಿಸಲು : [email protected]
* ಬಿಬಿಎಂಪಿ ಫೇಸ್ ಬುಕ್ ಲಿಂಕ್ ಬಳಸಿ ಮಾಹಿತಿ ಪಡೆದುಕೊಳ್ಳಿ.

English summary
BBMP Sahaaya (Help) is an easy and user friendly citizen centric Service interface, serves as one central system to report grievance across 20+ departments like Road Infrastructure, Waste Management, Building Plans, Tax and Revenue departments, Health, Pest & Animal Control etc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X