• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ವೆಬ್ ತಾಣದಲ್ಲಿ ಆಸ್ತಿ ವಿವರ ಗುರುತಿಸುವುದು ಹೇಗೆ?

By Mahesh
|

ಬೆಂಗಳೂರು, ಅಕ್ಟೋಬರ್ 03: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತನ್ನ ಗ್ರಾಹಕರಿಗೆ ಆಸ್ತಿ ವಿವರವನ್ನು ಸುಲಭವಾಗಿ ಗುರುತಿಸಲು ಹಾಗೂ ಅಗತ್ಯ ಮಾರ್ಪಾಟು ಮಾಡಲು ನೆರವಾಗಲು ಜಿಐಎಸ್ ಆಧಾರಿತ ಮ್ಯಾಪಿಂಗ್ ವ್ಯವಸ್ಥೆ ಕಲ್ಪಿಸಿದೆ.

ಜಿಐಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ(GEPTIS) ಬಿಬಿಎಂಪಿಯ ಆಂತರಿಕ ವೆಬ್ ಪೋರ್ಟಲ್ ಆಗಿದ್ದು, ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಆಸ್ತಿಗಳ (ವಾಣಿಜ್ಯ ಹಾಗೂ ವಸತಿ) ವಿವರಗಳನ್ನು ಸರಳವಾಗಿ ನಿಮ್ಮ ಮುಂದಿಡುತ್ತದೆ.

ಆನ್ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?

ವಾರ್ಡ್, ಪ್ರದೇಶವಾರು ಕಟ್ಟಡಗಳನ್ನು ಪಿಐಡಿ ಆಧಾರ ಮೇಲೆ ಜಿಐಎಸ್ ನಕ್ಷೆಯಲ್ಲಿ ಸುಲಭವಾಗಿ ಹುಡುಕ ಬಹುದಾಗಿದೆ. ಕಂದಾಯ ಗಳಿಕೆ, ಸಾಲಗಾರರು, ಆಸ್ತಿ ವಿವರ, ತೆರಿಗೆ ಬಾಕಿ ವಿವರಗಳು ಲಭ್ಯವಾಗಲಿದೆ.

ಮೇಯರ್ ಸಂಪತ್ ರಾಜ್ ಪರಿಚಯ

ಜಿಐಎಸ್ ಆಧಾರಿತ ನಕ್ಷೆಯಲ್ಲಿ ತಮ್ಮ ಅಸ್ತಿಯನ್ನು ಗುರುತಿಸಲು ನಾಗರಿಕರು ನೋಂದಣಿಯಾಗಬೇಕಾಗುತ್ತದೆ. ನೋಂದಣಿಯಾಗುವುದು ಹೇಗೆ? ಮುಂದೆ...

ಜಿಐಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ

ಜಿಐಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ

ಜಿಐಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ(GEPTIS) ಬಿಬಿಎಂಪಿಯ ಆಂತರಿಕ ವೆಬ್ ಪೋರ್ಟಲ್ ಆಗಿದ್ದು, ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಆಸ್ತಿಗಳ (ವಾಣಿಜ್ಯ ಹಾಗೂ ವಸತಿ) ವಿವರಗಳನ್ನು ಸರಳವಾಗಿ ನಿಮ್ಮ ಮುಂದಿಡುತ್ತದೆ.

ವಾರ್ಡ್, ಪ್ರದೇಶವಾರು ಕಟ್ಟಡಗಳನ್ನು ಪಿಐಡಿ ಆಧಾರ ಮೇಲೆ ಜಿಐಎಸ್ ನಕ್ಷೆಯಲ್ಲಿ ಸುಲಭವಾಗಿ ಹುಡುಕಬಹುದಾಗಿದೆ.

ಬಿಬಿಎಂಪಿ ವೆಬ್ ತಾಣಕ್ಕೆ ಲಾಗಿನ್ ಆಗಿ

ಬಿಬಿಎಂಪಿ ವೆಬ್ ತಾಣಕ್ಕೆ ಲಾಗಿನ್ ಆಗಿ

ಬಿಬಿಎಂಪಿ ವೆಬ್ ತಾಣಕ್ಕೆ ಲಾಗಿನ್ ಆಗಿ:

ಜಿಐಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ(GEPTIS) ಬಿಬಿಎಂಪಿಯ ಆಂತರಿಕ ವೆಬ್ ಪೋರ್ಟಲ್ (bbmp.gov.in/geptis)

ಫೈರ್ ಫಾಕ್ಸ್, ಕ್ರೋಮ್, ಇಂಟರ್ನೆಟ್ ಎಕ್ಸ್ ಪ್ಲೋರರ್ (10ನೇ ಆವೃತ್ತಿ ನಂತರ) ನಲ್ಲಿ ಇದು ಸುಲಭವಾಗಿ ತೆರೆಯಲಿದೆ. ಸ್ಮಾರ್ಟ್ ಫೋನ್ ಬ್ರೌಸರ್ ಗಳಲ್ಲೂ ಇದು ಲಭ್ಯ.

ಜಿಐಎಸ್ ಆಧಾರಿತ ನಕ್ಷೆ

ಜಿಐಎಸ್ ಆಧಾರಿತ ನಕ್ಷೆ

ಜಿಐಎಸ್ ಆಧಾರಿತ ನಕ್ಷೆಯಲ್ಲಿ ತಮ್ಮ ಅಸ್ತಿಯನ್ನು ಗುರುತಿಸಲು ನಾಗರಿಕರು ನೋಂದಣಿಯಾಗಬೇಕಾಗುತ್ತದೆ. ಲಾಗಿನ್ ಪುಟಕ್ಕೆ ಹೋಗಿ ನೋಂದಣಿಯಾಗಿ

ನಿಮ್ಮ ಹೆಸರು, ಮೊಬೈಲ್ ಫೋನ್ ದಾಖಲಿಸಿ

ಮೊಬೈಲಿಗೆ ಬರುವ ಒಟಿಪಿಯನ್ನು ದಾಖಲಿಸಿ

ನಿಮ್ಮ ಇಮೇಲ್ ಐಡಿ ನಮೂದಿಸಿ, ಪಾಸ್ ವರ್ಡ್ ಹಾಕಿ ಸೇವ್ ಮಾಡಿ

ಬಿಬಿಎಂಪಿ ವೆಬ್ ತಾಣ ಲಾಗಿನ್ ಹೇಗೆ

ಬಿಬಿಎಂಪಿ ವೆಬ್ ತಾಣ ಲಾಗಿನ್ ಹೇಗೆ

ನಿಮ್ಮ ಮೊಬೈಲ್ ಸಂಖ್ಯೆಯನ್ನು ಯೂಸರ್ ನೇಮ್ ಆಗಿ ಪರಿಗಣಿಸಲಾಗುತ್ತದೆ. ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ದಾಖಲಿಸಿ ಲಾಗಿನ್ ಆಗಿ. ಪಾಸ್ವರ್ಡ್ ಮರೆತು ಹೋಗಿದ್ದರೆ, ಲಾಗಿನ್ ಪುಟಕ್ಕೆ ಹೋಗಿ, ಮತ್ತೊಮ್ಮೆ ನೋಂದಾಯಿತ ಮೊಬೈಲ್ ಫೋನ್ ದಾಖಲಿಸಿ, ರಹಸ್ಯ ಪ್ರಶ್ನೆಗೆ ಉತ್ತರಿಸಿ ಒಟಿಪಿ ಪಡೆಯಿರಿ, ನಂತರ ಹೊಸ ಪಾಸ್ವರ್ಡ್ ದಾಖಲಿಸಿ.

ಆಸ್ತಿ ವಿವರ ಹುಡುಕಾಟ ಹೇಗೆ?

ಆಸ್ತಿ ವಿವರ ಹುಡುಕಾಟ ಹೇಗೆ?

ಒಮ್ಮೆ ಯಶಸ್ವಿಯಾಗಿ ಲಾಗಿನ್ ಆದ ಮೇಲೆ ನಕ್ಷೆಯಲಿ ಪಾಲಿಗಾನ್ ಮಾದರಿಯಲ್ಲಿ ಆಸ್ತಿಗಳನ್ನು ಕಾಣಬಹುದು. ನಿಮ್ಮ ಆಸ್ತಿಗೆ ಇರುವ ಪ್ರತ್ಯೇಕ ಗುರುತಿನ ಸಂಖ್ಯೆ(ಪಿಐಡಿ) ಬಳಸಿ ನಕ್ಷೆಯಲ್ಲಿ ನ ಆಸ್ತಿ ವಿವರ ಪಡೆದುಕೊಳ್ಳಿ. ಇದರಲ್ಲಿ ನಿಮ್ಮ ಹಳೆ ಪಿಐಡಿ ನಂಬರ್, ಆಸ್ತಿ ಯಾರ ಹೆಸರಿನಲ್ಲಿದೆ, ವಿಳಾಸ, ತೆರಿಗೆ ಪಾವತಿ ಮುಂತಾದ ವಿವರ ಸಿಗಲಿದೆ.

ಪಿಐಡಿ ಅಲ್ಲದೆ ಎಸ್ಎಎಸ್ ಅಪ್ಲಿಕೇಷನ್ ನಂಬರ್ ಬಳಸಿ ಲಾಗಿನ್ ಆಗಬಹುದು. ಆಸ್ತಿ ಐಡಿ ಹಾಗೂ ಮೊಬೈಲ್ ನಂಬರ್ ಹೊಂದಿಕೆಯಾಗದಿದ್ದರೆ ಪೂರ್ಣ ವಿವರಗಳು ಸಿಗುವುದಿಲ್ಲ. ಆಸ್ತಿ ಯಾರ ಹೆಸರಿನಲ್ಲಿ ಎಂಬ ಮಾಹಿತಿಯೂ ಸಿಗುವುದಿಲ್ಲ.

ಇಲಾಖೆಗೆ ದೂರು ಸಲ್ಲಿಸುವುದು ಹೇಗೆ

ಇಲಾಖೆಗೆ ದೂರು ಸಲ್ಲಿಸುವುದು ಹೇಗೆ

ನಿಮ್ಮ ಆಸ್ತಿ ವಿವರವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅದರಲ್ಲಿ ಯಾವುದೇ ಬದಲಾವಣೆ ಬೇಕಿದ್ದಲ್ಲಿ ಕೂಡಲೇ ಈ ಬಗ್ಗೆ ಎಆರ್ ಒ ಕಚೇರಿಗೆ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಮ್ಯಾಪಿಂಗ್ ನಲ್ಲಿ ದೋಷ, ಆಸ್ತಿ ವಿವರದಲ್ಲಿ ಬದಲಾವಣೆ ಎಲ್ಲವನ್ನು ವಾರ್ಡ್ ಕಚೇರಿಗೂ ತಲುಪಿಸಿ ಸರಿಪಡಿಸಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
GIS Enabled Property Tax Information System(GETPTIS) is a BBMP Internal portal that provides comprehensive mapping of all properties within BBMP jurisdiction. Registered Citizen can view their properties on GIS Map and may submit feedback to Revenue Department about any corrections to mapping
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more