ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೊರೊನಾ ವಿರುದ್ಧ ಹೋರಾಡಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಆದರೆ ಅಗತ್ಯ ವಸ್ತುಗಳ ಪೂರೈಕೆಯನ್ನು ನಿಲ್ಲಿಸಿಲ್ಲ. ಈ ನಡುವೆ ಬಹುತೇಕ ಆನ್ ಲೈನ್ ಡೆಲಿವರಿ ಕಂಪನಿಗಳು ಕೂಡ ಬಂದ್ ಆಗಿದ್ದವು. ಇದರಿಂದ ಜನರಿಗೆ ಅಗತ್ಯ ವಸ್ತುಗಳ ಕೊಂಡುಕೊಳ್ಳುವುದು ಸಮಸ್ಯೆಯಾಗಿತ್ತು. ಆದರೆ, ಸಮಸ್ಯೆಗೆ ಪರಿಹಾರ ಕಂಡುಕೊಂಡ ಬೆಂಗಳೂರು ಪೊಲೀಸರು ಇ- ಪಾಸ್ ವಿತರಣೆ ಆರಂಭಿಸಿದರು.

ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆನ್ ಲೈನ್ ಡೆಲಿವರಿ ಮಾಡುವ ಸುಮಾರು 25ಕ್ಕೂ ಅಧಿಕ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

Fact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿFact Check: ಪಿಎಂ ಕೇರ್ಸ್ ದೇಣಿಗೆ ನೀಡುವ ಮುನ್ನ ಫೇಕ್ ಐಡಿ ಬಗ್ಗೆ ಗಮನಿಸಿ

ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ ಎಂದು ಪೊಲೀಸರು ಸೂಚಿಸಿದ್ದಾರೆ.

ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

ಆದರೆ, ಈ ಕುರಿತಂತೆ ಅನೇಕ ಗೊಂದಲ, ಪ್ರಶ್ನೆಗಳು ಮೂಡಿತ್ತು. ಹೀಗಾಗಿ ಹಿರಿಯ ಪತ್ರಕರ್ತೆ ಫಾಯೆ ಡಿಸೋಜಾ ಅವರು ಡಿಸಿಪಿ ಇಶಾಪಂತ್ ಜೊತೆ ವಿಡಿಯೋ ಸಂಭಾಷಣೆ ನಡೆಸಿದ ಪ್ರಶ್ನೋತ್ತರ ಇಲ್ಲಿದೆ.

ಅಗತ್ಯ ವಸ್ತು ಖರೀದಿಗಾಗಿ ಪಾಸ್ ಬೇಡ

ಅಗತ್ಯ ವಸ್ತು ಖರೀದಿಗಾಗಿ ಪಾಸ್ ಬೇಡ

ಫಾಯೆ ಡಿಸೋಜಾ: ಅಗತ್ಯ ವಸ್ತು ಖರೀದಿಗಾಗಿ ದಿನನಿತ್ಯ ಮನೆಯಿಂದ ಹೊರಗೆ ಹೋಗಲು ಪಾಸ್ ಅಗತ್ಯವಿದೆಯೆ? ಪೊಲೀಸರ ಪೂರ್ವ ಅನುಮತಿ ಅಗತ್ಯವೇ?

ಡಿಸಿಪಿ ಇಶಾ ಪಂತ್: ಖಂಡಿತ ಇಲ್ಲ, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ದಿನಸಿ, ಮೆಡಿಸನ್ ಖರೀದಿಗಾಗಿ ಮನೆ ಹತ್ತಿರದ ಅಂಗಡಿಗೆ ಹೋಗುವವರಿಗೆ ಯಾವುದೇ ಪಾಸ್ ಅಗತ್ಯವಿಲ್ಲ. ಸೂಪರ್ ಮಾರ್ಕೆಟ್ ದಿನದ 24 ಗಂಟೆ ಓಪನ್ ಮಾಡಬಹುದು ಎಂದು ಡಿಸಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಪಾಸ್ ಇಲ್ಲದೆ ಎಷ್ಟು ದೂರ ಹೋಗಿ ಬಹುದು

ಪಾಸ್ ಇಲ್ಲದೆ ಎಷ್ಟು ದೂರ ಹೋಗಿ ಬಹುದು

2. ಎಷ್ಟು ದೂರ ಕ್ರಮಿಸಬಹುದು

ಇಶಾ ಪಂತ್: ಪಾಸ್ ಅಗತ್ಯವಿಲ್ಲ ಎಂದು ದೂರ ದೂರ ಸಂಚರಿಸುವುದು ಸರಿಯಲ್ಲ. ಮನೆ ಬಳಿಯಲ್ಲೇ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವುದು ಒಳ್ಳೆಯದು.

3. ಪೋಷಕರು ನಗರದ ಇನ್ನೊಂದು ಕಡೆ ಇದ್ದರೆ ಹೋಗಿ ಭೇಟಿಯಾಗಬಹುದಾ?

ಇಶಾ ಪಂತ್: ವಯೋವೃದ್ಧರು ಮನೆಯಲ್ಲೇ ಇರಬೇಕು ಎಂದು ಕೇಳಿಕೊಳ್ಳಲಾಗಿದೆ. ಅಗತ್ಯ ವಸ್ತು, ಮೆಡಿಸಿನ್ ಅಗತ್ಯವಿದ್ದರೆ ಸಹಾಯವಾಣಿಗೆ ಕರೆ ಮಾಡಬಹುದು.

4. ಲಾಠಿ ಚಾರ್ಜ್ ಬಗ್ಗೆ ಏನು ಹೇಳುತ್ತೀರಾ?

ಇಶಾ ಪಂತ್: ನಗರ ಪೊಲೀಸ್ ಆಯುಕ್ತರು, ಈಗಾಗಲೇ ಲಾಠಿ ತೆಗೆದುಕೊಂಡು ಹೋಗಬಾರದು ಎಂದು ತಿಳಿಸಿದ್ದಾರೆ.

ಈ ಪಾಸ್ ಪಡೆಯುವುದು ಹೇಗೆ?

ಈ ಪಾಸ್ ಪಡೆಯುವುದು ಹೇಗೆ?

5. ಇ ಪಾಸ್ ಯಾರಿಗೆ ಅಗತ್ಯವಿದೆ?

ಗೃಹ ಸಚಿವಾಲಯ(MHA)ದ ಸೂಚನೆಯ ಮೇರೆಗೆ ಯಾವ ಸಂಸ್ಥೆಗಳು ಓಪನ್ ಮಾಡಬಹುದು ಯಾವುದು ಬಂದ್ ಆಗಬಹುದು ಎಂಬುದು ಸ್ಪಷ್ಟವಾಗಿದೆ. ಆದೇಶದಲ್ಲಿ ಸೂಚಿಸಿದಂತೆ, ದಿನಸಿ, ಡೆಲವರಿ ಬಾಯ್ಸ್, ಟೆಲಿಕಾಂ, ವೈದ್ಯಕೀಯ, ಡೇಟಾ ಸೆಂಟರ್, ಬ್ಯಾಂಕ್, ವಿಮೆ, ಕೆಲವು ಸೆಕ್ಯುರಿಟಿ ಏಜೆನ್ಸಿ ಕಾರ್ಯ ನಿರ್ವಹಿಸಲು ಅನುಮತಿ ಇದ್ದು ,ಎಲ್ಲರಿಗೂ ಪಾಸ್ ಅಗತ್ಯವಿದೆ.

6. ಈ ಪಾಸ್ ಪಡೆಯುವುದು ಹೇಗೆ?

ಇ ಪಾಸ್ ಪಡೆಯಲು ಬಯಸುವವರು ಸಂಬಂಧ ಪಟ್ಟ 8 ಡಿಸಿಪಿ ಕಚೇರಿಗಳಲ್ಲಿ ಪಡೆದುಕೊಳ್ಳಬಹುದು. ವಾಹನ ಹಾಗೂ ವೈಯಕ್ತಿಕ ಪಾಸ್ ಪಡೆಯಬಹುದು. ಇಲ್ಲಿ ತನಕ 1 ಲಕ್ಷ 10 ಸಾವಿರ ಪಾಸ್ ವಿತರಿಸಲಾಗಿದೆ. ಈಗ ಆನ್ ಲೈನ್ ನಲ್ಲಿ ಇ ಪಾಸ್ ವಿತರಣೆ ಆರಂಭವಾಗಿದೆ. ಇದಲ್ಲದೆ ಎಮರ್ಜೆನ್ಸಿ ಪಾಸ್ ಪಡೆದುಕೊಳ್ಳಬಹುದು, ಇದು ಒಂದು ಗಂಟೆ, ನಾಲ್ಕು ಗಂಟೆ, ಒಂದು ದಿನದ ಮಟ್ಟಿನ ಪಾಸ್ ಆಗಿರುತ್ತದೆ.

ಆನ್ ಲೈನ್ ನಲ್ಲಿ ಇ ಪಾಸ್ ಪಡೆಯುವುದು ಹೇಗೆ

ಆನ್ ಲೈನ್ ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವೆಬ್ ತಾಣದಲ್ಲಿ ಇಪಾಸ್ ಪಡೆಯಲು ಲಿಂಕ್ ಸಿಗಲಿದೆ. ಇಲ್ಲದಿದ್ದರೆ ನೇರವಾಗಿ ಮೈಗೇಟ್.ಕಾಂ ಭೇಟಿ ಕೊಡಿ. ನಿಮ್ಮ ಸಂಸ್ಥೆಗೆ ಪಾಸ್, ವೈಯಕ್ತಿಕ ಪಾಸ್ ಪಡೆಯಲು ಆರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಒಂದು ಬಾರಿಗೆ 100 ಸದಸ್ಯರನ್ನುಳ್ಳ ಸಂಸ್ಥೆಗೆ ಪಾಸ್ ಪಡೆದುಕೊಳ್ಳಬಹುದು.

ಕರ್ನಾಟಕ ರಾಜ್ಯ ಪೊಲೀಸ್ ಈ ಉಚಿತ ತಂತ್ರಾಂಶವನ್ನು ಬಳಕೆದಾರರಿಗೆ ನಿರ್ಮಿಸಿದ್ದಾರೆ. ಈ ಸೇವೆಯನ್ನು ನೀಡುತ್ತಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಮತ್ತು ಹೇಗಿದೆಯೋ ಹಾಗೆ ಬಳಕೆಗೆ ಉದ್ದೇಶಿಸಲಾಗಿದೆ. ಕರ್ನಾಟಕ ರಾಜ್ಯ ಪೋಲಿಸ್ ಯಾವುದೇ ಸಂದರ್ಭಗಳಲ್ಲಿ ತಂತ್ರಾಂಶದ ಮಾಹಿತಿಯನ್ನು (Data) ಯಾವುದೇ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದಿಲ್ಲ.

English summary
Bhaskar Rao, Commissioner of Police-Bengaluru has finally announced that it will soon issue duty passes to those partners delivering essential services performers who may not have a valid ID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X