ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿ

By Nayana
|
Google Oneindia Kannada News

ಬೆಂಗಳೂರು, ಜು.20: ಬಿಎಂಟಿಸಿ ಬಸ್‌ಪಾಸುಗಳನ್ನು ಪಡೆಯಬೇಕಾದರೆ ಈ ಮೊದಲು ಬಿಎಂಟಿಸಿ ಕಚೇರಿಗಳಿಗೆ ಹೊಗಿ ಪಡೆಯಬೇಕಿತ್ತು, ಆದರೆ ಇನ್ನುಮುಂದೆ ಕುಳಿತಲ್ಲಿಂದಲೇ ಪಡೆಯಬಹುದಾಗಿದೆ.

ಬಸ್‌ಪಾಸ್‌ ಅಪೇಕ್ಷಿಸುವವರು ಮೊಬೈಲ್‌ನಲ್ಲಿ 161 ಡಯಲ್‌ ಮಾಡಬೇಕು ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯನ್ನು ಆಯ್ಕೆಮಾಡಿಕೊಳ್ಳಬೇಕು ನಂತರ ಬಿಎಂಟಿಸಿ ಸರ್ವೀಸ್‌ಗಾಗಿ 6 ನಂಬರ್‌ ಆಯ್ಕೆಮಾಡಿಕೊಳ್ಳಬೇಕು. ಅದರಲ್ಲಿ ನಂಬರ್‌ ವಿದ್ಯಾರ್ಥಿಗಳ ಬಸ್‌ಪಾಸ್‌ ಪಡೆಯಲು 2 ನ್ನು ಆಯ್ಕೆ ಮಾಡಿಕೊಳ್ಳಬೇಕು.

ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ

ಇದರಿಂದ ವಿದ್ಯಾರ್ಥಿಗಳ ಮೊಬೈಲ್ ಮೂಲಕ ವೆಬ್‌ಲಿಂಕ್‌ನ್ನು ಕಳುಹಿಸಲಾಗುತ್ತದೆ ಬಳಿಕ ಆ ಅರ್ಜಿಯಲ್ಲಿ ಹೆಸರು, ಉಳಿದ ದಾಖಲೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅಥವಾ www.mybmtc.com ಭೇಟಿ ನೀಡಿ ಪಾಸ್‌ಪಡೆಯಬಹುದು.

BMTC passes phone call or click away

ಅದರಲ್ಲಿರುವ ಇ ಫಾರ್ಮ್‌ನಲ್ಲಿ ಎನ್‌ರೋಲ್‌ಮೆಂಟ್‌ ನಂಬರ್‌ ನಮೂದಿಸಬೇಕಾಗುತ್ತದೆ, ಹಾಗೆಯೇ ವಿದ್ಯಾರ್ಥಿಗಳು ತಮ್ಮ ಪೋಷಕರ ಮೊಬೈಲ್‌ ನಂಬರ್‌, ಇ-ಮೇಲ್‌ ಐಡಿ ನಮೂದಿಸಬೇಕಾಗುತ್ತದೆ. ಅಪ್ಲಿಕೇಷನ್‌ನ್ನು ಜು.31ರೊಳಗೆ ಸಲ್ಲಿಸಬೇಕಾಗುತ್ತದೆ.

ಪ್ರತಿ ವರ್ಷ 33.250 ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, 60 ಸಾವಿರ ಪ್ರೌಢಶಾಲೆ ವಿದ್ಯಾರ್ಥಿಗಳು, 1.05 ಲಕ್ಷ ಪಿಯು ವಿದ್ಯಾರ್ಥಿಗಳು, 95 ಸಾವಿರ ಕಾಲೇಜು ವಿದ್ಯಾರ್ಥಿಗಳು, 80 ಸಾವಿರ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳು ಪಡೆಯಲಿದ್ದಾರೆ

ಈ ವರ್ಷದಲ್ಲಿ ಈವರೆಗೆ ಶಿಕ್ಷಣ ಇಲಾಖೆಯ ಎಸ್‌ಎಟಿಎಸ್‌ನಲ್ಲಿ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ ವೆಬ್‌ಫೇಸ್‌ ಮತ್ತು ಮೊಬೈಲ್‌ ಇಂಟರ್‌ಫೇಸ್‌ ಮತ್ತು ಮೊಬೈಲ್‌ ಇಂಟರ್‌ಫೇಸ್‌ ಮೂಲಕ 59 ಸಾವಿರ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿದ್ದಾರೆ.

English summary
Students can now apply for BMTC passes through e-forms and not only through their educational institutions. Those who want passes should dial 161, select Kannada or English language, select 6 for BMTC services and then select 2 for student passes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X