ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರನ್ನು ಕೊಲೆಗಾರರಿದ್ದಲ್ಲಿಗೆ ಕೊಂಡೊಯ್ದ ಒಂದು ಟಿ ಶರ್ಟ್

|
Google Oneindia Kannada News

ಬೆಂಗಳೂರು, ಏ.11: ದಿನಗೂಲಿ ನೌಕರ ಸತ್ಯಶೀಲನ್ ಬಾಣಸವಾಡಿಯಲ್ಲಿರುವ ಮುಖ್ಯ ರಸ್ತೆಯಲ್ಲಿರುವ ಕೊಳವೊಂದರಲ್ಲಿ ಬಿದ್ದು ಮೃತಪಟ್ಟಿದ್ದರು.

ಮೊದ ಮೊದಲು ಆತ ಕುಡಿದ ಮತ್ತಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಎದೆಯ ಹಿಂಬದಿ ಇರಿತದಿಂದಾಗಿ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.

ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್ ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್

ಎಲ್ ಮಾರ್ಕ್ ಇರುವ ಬಿಳಿ ಬಣ್ಣದ ಟಿ ಶರ್ಟ್ ಒಂದು ಕೊಲೆಗಾರರವರೆಗೆ ಪೊಲೀಸರನ್ನು ಸುಲಭವಾಗಿ ಕರೆದೊಯ್ದಿತ್ತು. ಆ ಕೊಳದ ಸುತ್ತಮುತ್ತಲಿರುವ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಬೈಕಿನಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಸತ್ಯಶೀಲನ್ ಅವರ ಬಳಿ ಮದ್ಯದ ಬಾಟಲಿ ಕೊಡುವಂತೆ ಕೇಳಿದ್ದಾರೆ, ಅದನ್ನು ನೀಡದ ಕಾರಣ ಸತ್ಯಶೀಲನ್ ಅವರ ಎದೆಯ ಹಿಂಬದಿಗೆ ಇರಿದು ಅಲ್ಲಿಂದ ಪರಾರಿಯಾಗಿದ್ದು ತಿಳಿದುಬಂದಿತ್ತು.

How T-shirt helped cops crack man’s murder case

ಕೊಲೆಗಾರರ ಪೈಕಿ ಓರ್ವ ಅಂದು ಬಿಳಿ ಬಣ್ಣದ ಟಿ ಶರ್ಟ್ ಧರಿಸಿದ್ದ ಎನ್ನುವುದು ಗೊತ್ತಾಗಿತ್ತು. ಬಳಿಕ ಆ ಬಿಳಿ ಟಿ ಶರ್ಟ್ ಧರಿಸುವ ವ್ಯಕ್ತಿ ಎಲ್ಲೆಲ್ಲಿ ಹೋಗಿದ್ದ ಕೊಲೆಗಾರರ ಜಾಡು ಹಿಡಿದು ಪೊಲೀಸರು ತೆರಳಿ ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
When the body of Satyasheelan, a 46-year-old daily-wage laborer, was found in a pool of blood on Banasawadi Main Road, east Bengaluru, on March 24 night, police initially thought the drunk man died after a fatal fall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X