ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದೇಶ್ವರನ ಸನ್ನಿಧಾನದಲ್ಲಿ ಮಹಾ ಶಿವರಾತ್ರಿ ಪೂಜೆ: ವಾವ್ ಸಿದ್ದರಾಮಯ್ಯ, ಜಮೀರ್!

|
Google Oneindia Kannada News

ಕೊರೊನಾ ಎಲ್ಲಿ ಇದೆ ಎಂದು ನಮ್ಮನ್ನು ನಾವೇ ಪ್ರಶ್ನಿಸುವಂತೆ ಮಹಾ ಶಿವರಾತ್ರಿಯ ಪ್ರಯುಕ್ತ ಲಯಕರ್ತ ಎಂದೇ ಕರೆಯಲ್ಪಡುವ ಈಶ್ವರನ ಸನ್ನಿಧಾನಕ್ಕೆ ಎಲ್ಲೆಲ್ಲೂ ಭಕ್ತಸಾಗರವೇ ಬೆಂಗಳೂರಿನ ದೇವಾಲಯಕ್ಕೆ ಹರಿದು ಬಂದಿತ್ತು.

ಇನ್ನು, ನಗರದ ಪುರಾಣ ಪ್ರಸಿದ್ದ ದೇವಾಲಯಗಳಾದ ಹಲಸೂರು, ಕಾಡುಮಲ್ಲೇಶ್ವರ, ಗವಿ ಗಂಗಾಧರೇಶ್ವರ, ಚಾಮರಾಜಪೇಟೆಯ ಕಾಶಿ ವಿಶ್ವನಾಥ, ಮಹದೇಶ್ವರ, ಮಲ್ಲೇಶ್ವರಂ ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯಗಳಲ್ಲಂತೂ, ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದಿದ್ದರು.

ಸದನದಲ್ಲಿ ಅಂಗಿ ಬಿಚ್ಚಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪ್ರತಿಭಟನೆ: ಐಡಿಯಾ ಕೊಟ್ಟಿದ್ದು ಅದೇ ಪಕ್ಷದ ಶಾಸಕ! ಸದನದಲ್ಲಿ ಅಂಗಿ ಬಿಚ್ಚಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪ್ರತಿಭಟನೆ: ಐಡಿಯಾ ಕೊಟ್ಟಿದ್ದು ಅದೇ ಪಕ್ಷದ ಶಾಸಕ!

ರಾಜಕಾರಣಿಗಳು, ಸೆಲೆಬ್ರಿಟಿಗಳು ಈಶ್ವರನ ದರ್ಶನಕ್ಕೆ ಬಂದಿದ್ದರು. ಅದರಲ್ಲಿ ಚಿತ್ರನಟ ದರ್ಶನ್ ಮತ್ತು ಕೆಪಿಸಿಸಿ ಅಧ್ಯಕ್ಷ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ, ಸಿಎಂ ಬಿಎಸ್ವೈ ಕಾಡು ಮಲ್ಲೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಇನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚಾಮರಾಜಪೇಟೆಯಲ್ಲಿನ ಮಲೇ ಮಹದೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಈ ವೇಳೆ, ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡಾ ಹಾಜರಿದ್ದರು. ಇಲ್ಲಿ ಗಮನಿಸಬೇಕಾದ ವಿಚಾರವಿದೆ, ಸಾರ್ವಜನಿಕ ಜೀವನದಲ್ಲಿರುವವರು ಹೇಗಿರಬೇಕು ಎನ್ನುವುದನ್ನು ಇವರಿಬ್ಬರೂ ತೋರಿಸಿಕೊಟ್ಟಿದ್ದಾರೆ:

ಮಹಾಶಿವರಾತ್ರಿ: ಶಿವನ ದರ್ಶನ ಪಡೆದ ರಾಜ್ಯದ ಪ್ರಭಾವಿ ರಾಜಕಾರಣಿಗಳು! ಮಹಾಶಿವರಾತ್ರಿ: ಶಿವನ ದರ್ಶನ ಪಡೆದ ರಾಜ್ಯದ ಪ್ರಭಾವಿ ರಾಜಕಾರಣಿಗಳು!

 ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್

ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್

ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಈ ದೇವಸ್ಥಾನಕ್ಕೆ ಬಂದಾಗ ಅವರಿಗೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಮಹದೇಶ್ವರನ ಗರ್ಭಗುಡಿಯ ಮುಂದೆ ನಿಂತು ಈ ಇಬ್ಬರು ನಾಯಕರು ಸಾಂಪ್ರದಾಯಿಕವಾಗಿ ಅರ್ಚನೆ, ಪೂಜೆ ಸಲ್ಲಿಸುವ ವೇಳೆ ಚ್ಯುತಿ ತಪ್ಪಲಿಲ್ಲ. ಅರ್ಚಕರು ಇವರಿಬ್ಬರಿಂದಲೇ ಮಂಗಳಾರತಿ ಮಾಡಿಸಿದರು. ಆದರೆ, ಮಂಗಳಾರತಿ ಮಾಡಿದ ನಂತರ, ಸಿದ್ದರಾಮಯ್ಯ ನಾಚಿಸುವಂತೆ, ಜಮೀರ್ ಅವರು ಮೂರು ಬಾರಿ ಕೈಯಿಂದ ಮಂಗಳರಾತಿಯನ್ನು ದೇವರಿಗೆ ಸಲ್ಲಿಸುವ ಮೂಲಕ ಎಲ್ಲರೂ ಬಪ್ಪರೇ..ಎನ್ನುವಂತೆ ಮಾಡಿದರು.

 ದೇವಾಲಯದಿಂದ ಹೊರ ಬಂದ ನಂತರ, ತಾಳ ಬಡಿದ ಸಿದ್ದರಾಮಯ್ಯ

ದೇವಾಲಯದಿಂದ ಹೊರ ಬಂದ ನಂತರ, ತಾಳ ಬಡಿದ ಸಿದ್ದರಾಮಯ್ಯ

ದೇವಾಲಯದಿಂದ ಹೊರ ಬಂದ ನಂತರ, ತಾಳವನ್ನು ಬಡಿಯುವ ಮೂಲಕ, ನನ್ನ ಹೆಸರಿನಲ್ಲೇ ರಾಮ ಇದ್ದಾನೆ ಎನ್ನುವ ಸಿದ್ದರಾಮಯ್ಯನವರು, ಸಾರ್ವಜನಿಕ ಜೀವನದಲ್ಲಿ ಇರುವವರು ಹೇಗೆ ಇರಬೇಕು ಎನ್ನುವ ಒಂದು ಸ್ಯಾಂಪಲ್ ಅನ್ನು ನೀಡಿದ್ದಾರೆ. ಹಿಂದುತ್ವ ಎನ್ನುವುದು ಬಿಜೆಪಿಯ ಕಾಪಿರೈಟ್ ಅಲ್ಲ ಎನ್ನುವ ಅರ್ಥ ಬರುವಂತೆ ಸಿದ್ದರಾಮಯ್ಯ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ.

 ಜಮೀರ್ ಅವರ ಸ್ಕ್ರೀನ್ ಪ್ರೆಸೆನ್ಸ್

ಜಮೀರ್ ಅವರ ಸ್ಕ್ರೀನ್ ಪ್ರೆಸೆನ್ಸ್

ಇಲ್ಲಿ ಗಮನಿಸಬೇಕಾದ ವಿಚಾರ ಇನ್ನೊಂದು ಏನಂದರೆ, ಸಿನಿಮೀಯ ಭಾಷೆಯಲ್ಲಿ ಹೇಳುವುದಾದರೆ ಜಮೀರ್ ಅವರ ಸ್ಕ್ರೀನ್ ಪ್ರೆಸೆನ್ಸ್. ಕ್ಯಾಮೆರಾ ಕಣ್ಣು ತನ್ನನ್ನೇ ನೋಡುತ್ತಿದ್ದಾಗ ಹೇಗೆ ಇರಬೇಕು ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಜಮೀರ್ ಚೆನ್ನಾಗಿ ಅರಿತಿದ್ದಾರೆ. ಅದಕ್ಕೆ ಶಿವರಾತ್ರಿ ಪೂಜೆಗೆ ದೇವಸ್ಥಾನದಲ್ಲಿ ಜಮೀರ್ ನಡೆದುಕೊಂಡ ರೀತಿ ಒಂದು ಉದಾಹರಣೆ. ಇದಲ್ಲದೇ, ಗವಿ ಗಂಗಾಧರೇಶ್ವರ, ಆಜಾದ್ ನಗರ ವಾರ್ಡಿನಲ್ಲಿರುವ ಬೀರೇಶ್ವರ ದೇವಾಲಯ, ಛಲವಾದಿಪಾಳ್ಯ ವಾರ್ಡಿನಲ್ಲಿರುವ ಅರುಣಾಚಲೇಶ್ವರ ಸ್ವಾಮಿ ದೇವಾಲಯಕ್ಕೂ ತೆರಳಿ ಜಮೀರ್ ಪೂಜೆ ಸಲ್ಲಿಸಿದ್ದರು.

Recommended Video

ಗವಿ ಗಂಗಾಧರೇಶ್ವರನ ದರ್ಶನ ಪಡೆದ ಡಿಕೆಶಿ..! | Oneindia Kannada
 ಸಾರ್ವಜನಿಕ ಜೀವನದಲ್ಲಿರುವವರು ಹೇಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ

ಸಾರ್ವಜನಿಕ ಜೀವನದಲ್ಲಿರುವವರು ಹೇಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ

ಜಮೀರ್ ಕೆಲವು ದಿನಗಳ ಹಿಂದೆ, ತಮ್ಮ ಕ್ಷೇತ್ರದ ವ್ಯಾಪ್ತಿಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೂ ತೆರಳಿ ಅಲ್ಲಿ ಅನ್ನದಾನಕ್ಕೆ ದೇಣಿಗೆ ನೀಡಿದ್ದರು. ಕ್ಯಾಮರಾ ಹಿಂದೆ ಏನೇ ಇರಲಿ ಈ ಇಬ್ಬರು ಸಾರ್ವಜನಿಕ ಜೀವನದಲ್ಲಿರುವ ನಾಯಕರು, ಎಲ್ಲಿ ಹೇಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎನ್ನುವುದು ಮಾತ್ರ ಸತ್ಯ.

English summary
How Politicians Should Be In Public Life: Siddaramaiah And Zameer Ahmed Khan Shows In Shivaratri Pooja At Mahadeshwara Temple, Chamarajpet, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X