ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಜಗತ್ತು ಮಾಗಿಯ ಚಳಿಯಿಂದ ಹೊರಬಂದರೇನೇ ಬೆಂಗಳೂರು ಬ್ಯಾಕ್ ಆನ್ ಟ್ರ್ಯಾಕ್ !

|
Google Oneindia Kannada News

ಪ್ರಧಾನಿ ಮೋದಿ ಲಾಕ್ ಡೌನ್ ಘೋಷಣೆ ಮಾಡುವ ಮುನ್ನವೇ ಸಿಎಂ ಯಡಿಯೂರಪ್ಪ (ಮಾರ್ಚ್ 13) ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಣೆ ಮಾಡಿಯಾಗಿತ್ತು. ಇದಕ್ಕೆ ಮುನ್ನವೇ, ಐಟಿ ವಲಯದ ಹಲವು ಕಂಪೆನಿಗಳು ವರ್ಕ್ ಫ್ರಂ ಹೋಂ ಅನೌನ್ಸ್ ಮಾಡಿದ್ದವು. ಅಲ್ಲಿಂದ ಆರಂಭವಾದ ಈ ಕಂಪೆನಿಗಳ ವರ್ಕ್ ಫ್ರಂಹೋಂ ಇನ್ನೂ ಮುಗಿದಿಲ್ಲ, ಮುಗಿಯುವ ಲಕ್ಷಣಗಳೂ ಇಲ್ಲ..

ಕೊರೊನಾ ಹಾವಳಿಯಿಂದ ಜಗತ್ತು ತೆವಳುತ್ತಾ ಸಾಮಾನ್ಯದತ್ತ ಸಾಗುತ್ತಿದ್ದರೂ, ಬೆಂಗಳೂರು ನಗರಕ್ಕೆ ಗರಿಯಂತಿರುವ ಐಟಿ ಕಂಪೆನಿಗಳು ಸದ್ಯದ ಮಟ್ಟಿಗೆ ಕನಿಷ್ಟವೆಂದರೂ ಏಪ್ರಿಲ್ ವರೆಗೆ ವರ್ಕ್ ಫ್ರಂ ಹೋಂ ಮುಂದೂಡುವ ಸಾಧ್ಯತೆಯೇ ಹೆಚ್ಚು. ಸರ್ವರ್, ಸ್ವಿಚ್ ನಿರ್ವಹಣೆ ಮುಂತಾದ ಕಚೇರಿಯಿಂದಲೇ ಮಾಡಬೇಕಾಗಿರುವ ಕೆಲಸವನ್ನು ಹೊರತು ಪಡಿಸಿ ಸೇಫ್ (ಸುರಕ್ಷಿತ) ಮತ್ತು ಸೇವ್ (ಉಳಿತಾಯ) ಪಾಲಿಸಿ ಕಂಪೆನಿಗಳು ತೆಗೆದುಕೊಂಡಂತಿವೆ.

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 2.50 ಲಕ್ಷಕ್ಕೆ ಇಳಿಕೆದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 2.50 ಲಕ್ಷಕ್ಕೆ ಇಳಿಕೆ

ಇತರ ಉದ್ಯಮಗಳ ವಹಿವಾಟುಗಳು ಸುಧಾರಿಸುತ್ತಾ ಮುಂದಕ್ಕೆ ಹೋಗಲಾರಂಭಿಸಿವೆಯಾದರೂ ಅದಕ್ಕೆ ನಿರೀಕ್ಷಿತ ವೇಗ ಸಿಗುತ್ತಿಲ್ಲ. ಬೆಂಗಳೂರಿನ ಐಟಿ ಕಂಪೆನಿಗಳು ಕಚೇರಿಯಿಂದಲೇ ಯಾವಾಗ ಕಾರ್ಯಾರಂಭ ಮಾಡುತ್ತವೆಯೋ, ಆಗಲೇ ಹೆಚ್ಚಿನ ಉದ್ಯಮಗಳ ಚಟುವಟಿಕೆಗಳು ಗರಿಗೆದರುವುದು ಎನ್ನುವುದು ವ್ಯಾಪಾರಸ್ಥರ ಒಟ್ಟಾರೆ ಅಭಿಪ್ರಾಯ. ಇದಕ್ಕೆ ಕಾರಣ ಇಲ್ಲದಿಲ್ಲ.

ವಿಶ್ವದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲ್ಪಡುವ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ (ಕ್ಯಾಲಿಫೋರ್ನಿಯಾ) ನಗರವನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಐಟಿ ಹಬ್ ನತ್ತ ಬೆಂಗಳೂರು ದಾಪು ಹಾಕುತ್ತಿದ್ದಾಗ ಕೊರೊನಾ ಹಾವಳಿ ಈ ವೇಗಕ್ಕೆ ಬ್ರೇಕ್ ಹಾಕಿತು. ಭಾರತದ ಒಟ್ಟಾರೆ ಐಟಿ ರಫ್ತುವಿನಲ್ಲಿ ಶೇ. 40ರಷ್ಟು ಕೊಡುಗೆ ಬೆಂಗಳೂರಿನದ್ದು.

ಕೊರೊನಾ ಸೋಂಕಿಗೆ ಕೆಂಪಿರುವೆ ಚಟ್ನಿ ಮದ್ದಂತೆ... ಕೊರೊನಾ ಸೋಂಕಿಗೆ ಕೆಂಪಿರುವೆ ಚಟ್ನಿ ಮದ್ದಂತೆ...

ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ವೇತನ ಪ್ಯಾಕೇಜ್

ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ವೇತನ ಪ್ಯಾಕೇಜ್

ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ವೇತನ ಪ್ಯಾಕೇಜ್ ಜೊತೆಗೆ ಇತರ ಭತ್ಯೆ, ಸೌಲಭ್ಯಗಳನ್ನೂ ಒದಗಿಸುತ್ತವೆ. ಅದರಲ್ಲಿ ಕ್ಯಾಬ್ ಸೇವೆಗಳೂ ಒಂದು. ಸಾವಿರಾರು ಕಾರುಗಳನ್ನು ಕಂಪೆನಿಗಳು ಟ್ರಾವೆಲ್ ಏಜೆನ್ಸಿಗಳ ಜೊತೆಗೆ ಟೈಅಪ್ ಮಾಡಿಕೊಂಡಿರುತ್ತವೆ. ಇದಲ್ಲದೇ, ಸ್ವಂತ ಟ್ರಾನ್ಸಪೋರ್ಟೇಶನ್ ಮೂಲಕ ಬರುವವರ ಸಂಖ್ಯೆಯೂ ಲೆಕ್ಕವಿಲ್ಲದಷ್ಟಿರುತ್ತದೆ. ಹಾಗಾಗಿ, ವರ್ಕ್ ಫ್ರಂ ಹೋಂನಿಂದಾಗಿ ಈ ವಲಯವನ್ನೇ ನಂಬಿಕೊಂಡವರ ಬದುಕು ಮತ್ತೆ ಹಿಂದಿನಂತೆ ಆಗಬೇಕಾದರೆ ಐಟಿ ಕಂಪೆನಿಗಳು ಕಚೇರಿಯಿಂದ ಕಾರ್ಯಾರಂಭ ಮಾಡಬೇಕಾಗುತ್ತದೆ.

ಪ್ರವಾಸೋದ್ಯಮ ಮತ್ತು ಮನೋರಂಜನೆ

ಪ್ರವಾಸೋದ್ಯಮ ಮತ್ತು ಮನೋರಂಜನೆ

ಐಟಿ ಕಂಪೆನಿಗಳ ವರ್ಕ್ ಫ್ರಂ ಹೋಂ ನಿರ್ಧಾರದಿಂದಾಗಿ ನಷ್ಟ ಅನುಭವಿಸುತ್ತಿರುವ ಮತ್ತೊಂದು ಉದ್ಯಮ ಎಂದರೆ ಅದು ಪ್ರವಾಸೋದ್ಯಮ ಮತ್ತು ಮನೋರಂಜನೆ. ಹೆಚ್ಚಿನ ಉದ್ಯೋಗಿಗಳು ತಮ್ಮ ಊರು ಸೇರಿಕೊಂಡು ಅಲ್ಲಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಐಟಿ ಕಂಪೆನಿಗಳು ಕಚೇರಿಯಲ್ಲೇ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಾರಾಂತ್ಯದಲ್ಲಿ ಇದ್ದ ಜನದಟ್ಟಣಿ ಈಗ ಇಲ್ಲದಾಗಿದೆ. ಜೊತೆಗೆ, ಸಿನಿಮಾ ರಂಗವೂ ವೇಗ ಪಡೆದುಕೊಳ್ಳಬೇಕಾದರೆ, ಐಟಿ ಕಂಪೆನಿಗಳು ಕಚೇರಿಯಿಂದ ಕೆಲಸ ನಿರ್ವಹಿಸಲು ಶುರು ಮಾಡಿದ ಮೇಲೆ ಮಾತ್ರ ಎನ್ನುವುದು ಮಾಲ್/ಸಿಂಗಲ್ ಸ್ಕ್ರೀನ್ ಚಿತ್ರಮಂದಿರದವರ ಅಭಿಪ್ರಾಯ.

ಟು ಲೆಟ್' ಬೋರ್ಡ್ ಗಳು ಕಾಣಸಿಗುತ್ತವೆ

ಟು ಲೆಟ್' ಬೋರ್ಡ್ ಗಳು ಕಾಣಸಿಗುತ್ತವೆ

ಎಷ್ಟೋ ಕಂಪೆನಿಗಳು ಬಾಗಿಲು ಮುಚ್ಚಿವೆ, ಐಟಿ ಕಂಪೆನಿಗಳೇ ಹೆಚ್ಚಾಗಿರುವ ಹೊಸೂರು ರಸ್ತೆ, ಬೆಳ್ಳಂದೂರು, ಔಟರ್ ರಿಂಗ್ ರೋಡ್, ವೈಟ್ ಫೀಲ್ಡ್ ಮುಂತಾದ ಕಡೆ ಸಾಲು 'ಟು ಲೆಟ್' ಬೋರ್ಡ್ ಗಳು ಕಾಣಸಿಗುತ್ತವೆ. ಜೊತೆಗೆ, ಸಾವಿರ ಸಾವಿರ ಮನೆಗಳೂ ಖಾಲಿಬಿದ್ದಿವೆ. ಹೊಸಹೊಸ ಅಪಾರ್ಟ್ಮೆಂಟುಗಳು ಸೇಲಾಗದೆ ಕೂತಿವೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮವೂ ನೆಲಕಚ್ಚಿವೆ.

ನಷ್ಟ ಅನುಭಸುತ್ತಿರುವ ಮತ್ತೊಂದು ಉದ್ಯಮವೆಂದರೆ ಅದು ಹೊಟೇಲ್

ನಷ್ಟ ಅನುಭಸುತ್ತಿರುವ ಮತ್ತೊಂದು ಉದ್ಯಮವೆಂದರೆ ಅದು ಹೊಟೇಲ್

ಇನ್ನು, ವರ್ಕ್ ಫ್ರಂ ಹೋಂನಿಂದಾಗಿ ನಷ್ಟ ಅನುಭಸುತ್ತಿರುವ ಮತ್ತೊಂದು ಉದ್ಯಮವೆಂದರೆ ಅದು ಹೊಟೇಲ್. ಐಟಿ ಕಂಪೆನಿಗಳು ತಮ್ಮ ಕಚೇರಿಯ ಆವರಣದಲ್ಲೇ ಫುಡ್ ಸ್ಟಾಲ್ ಹಾಕಲು ಅನುಮತಿ ಕೊಟ್ಟಿರುತ್ತವೆ. ವಿವಿಧ ಮಾದರಿಯ ತಿಂಡಿ ತಿನುಸುಗಳ ಸ್ಟಾಲ್ ಅನ್ನು ಇಲ್ಲಿ ಹಾಕಲಾಗಿರುತ್ತದೆ. ಈಗ ಅದ್ಯಾವುದೂ ಇಲ್ಲದಾಗಿದೆ. ಇದನ್ನೇ ನಂಬಿದವರು ಬೇರೆ ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಐಟಿ ಜಗತ್ತು ಮಾಗಿಯ ಚಳಿಯಿಂದ ಹೊರಬಂದರೇನೇ ಬೆಂಗಳೂರು ಬ್ಯಾಕ್ ಆನ್ ಟ್ರ್ಯಾಕ್ !

ಐಟಿ ಜಗತ್ತು ಮಾಗಿಯ ಚಳಿಯಿಂದ ಹೊರಬಂದರೇನೇ ಬೆಂಗಳೂರು ಬ್ಯಾಕ್ ಆನ್ ಟ್ರ್ಯಾಕ್ !

ಇನ್ನು, ಭದ್ರತೆ, ಹೌಸ್ ಕೀಪಿಂಗ್, ಮೈನ್ಟೇನೆನ್ಸ್, ಎಲೆಕ್ಟ್ರಿಶಿಯನ್ ಮುಂತಾದ ಸೇವೆ ನೀಡುವ ಸಂಸ್ಥೆಗಳು, ಸ್ಟೇಶನರಿ, ಹೌಸ್ ಕೀಪಿಂಗ್ ಮೆಟೀರಿಯಲ್ಸ್ ಸಪ್ಲೈ ಮಾಡುವ ಸಂಸ್ಥೆಗಳಿಗೂ ವ್ಯಾಪಾರ ಇಲ್ಲದಂತಾಗಿದೆ. ಇದನ್ನು ನಂಬಿಕೊಂಡ ಸಿಬ್ಬಂದಿಗಳಿಗೂ ತೊಂದರೆಯಾಗಿದೆ. ಒಟ್ಟಿನಲ್ಲಿ, ಐಟಿ ಕಂಪೆನಿಗಳು, ಕಚೇರಿಯಿಂದ ಕೆಲಸ ನಿರ್ವಹಿಸಲು ಆರಂಭಿಸಿದರೆನೇ ಇದನ್ನು ನಂಬಿಕೊಂಡಿರುವ ಇತರ ಉದ್ಯಮಗಳು ಮತ್ತು ಬೆಂಗಳೂರು ಮತ್ತೆ ಹಿಂದಿನ ಟ್ರ್ಯಾಕಿಗೆ ಬರುವುದು.

Recommended Video

ಅವ್ರು ನಾಶ ಆಗಿ ಹೋಗ್ತಾರೆ ಅಂತ ಹೇಳಿದ್ದು ಯಾರಿಗೆ ?? | Manjunath HS | Youth Congress Interview Part 2

English summary
How Other Business Effected Due To IT Companies Work From Home Option,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X