ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

22 ವರ್ಷ ನೀರಿನ ಬಿಲ್ ಕಟ್ಟದ ಬೆಂಗಳೂರು ವಿಜ್ಞಾನಿಯ ಕಥೆ!

ಕಳೆದ 22 ವರ್ಷಗಳಿಂದ ಇವರು ಬೆಂಗಳೂರು ಜಲಮಂಡಲಿಗೆ ನೀರಿನ ಬಿಲ್ ಕಟ್ಟಿಲ್ಲ. ಹಾಗಂಥ ಇವರೇನು ನೀರು ಕದ್ದು ಬಳಸುತ್ತಿಲ್ಲ. ಹಾಗಾದರೆ ಮನೆಯ ಉಪಯೋಗಕ್ಕೆ ಬೇಕಾದ ನೀರನ್ನು ಹೇಗೆ ಹೊಂದಿಸುತ್ತಾರೆ ಎನ್ನುವುದೇ ಈ ಕುತೂಹಲಕಾರಿ ಕಥೆ.

By ಮಾಧುರಿ ಅದ್ನಾಲ್
|
Google Oneindia Kannada News

ಬೆಂಗಳೂರು, ಮಾರ್ಚ್ 28: ಇವರು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ. ಕಳೆದ 22 ವರ್ಷಗಳಿಂದ ಇವರು ಬೆಂಗಳೂರು ಜಲಮಂಡಲಿಗೆ ನೀರಿನ ಬಿಲ್ ಕಟ್ಟಿಲ್ಲ. ಹಾಗಂಥ ಇವರೇನು ನೀರು ಕದ್ದು ಬಳಸುತ್ತಿಲ್ಲ. ಬಿಲ್ ಕಟ್ಟದೆ 22 ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಹಾಗಾದರೆ ಮನೆಯ ಉಪಯೋಗಕ್ಕೆ ಬೇಕಾದ ನೀರನ್ನು ಹೇಗೆ ಹೊಂದಿಸುತ್ತಾರೆ ಎನ್ನುವುದೇ ಈ ಕುತೂಹಲಕಾರಿ ಕಥೆ.

ಎ.ಆರ್. ಶಿವಕುಮಾರ್ ಕಳೆದ 22 ವರ್ಷಗಳಿಂದ ನೀರಿನ ಬಿಲ್ ಕಟ್ಟಲು ಹೋಗಿಲ್ಲ. ಇವರ ಮನೆಗೆ ಕಾವೇರಿ ನೀರಿನ ಸಂಪರ್ಕವೂ ಇಲ್ಲ. ಹಾಗಂತ ಇವರ ಮನೆಯಲ್ಲಿ ಬಾವಿಯಾಗಲೀ, ಬೋರ್ ವೆಲ್ ಆಗಲೀ ಇಲ್ಲ. ಹೀಗಿದ್ದೂ ಇವರು ತಮ್ಮ ದಿನ ನಿತ್ಯಕ್ಕೆ ಬೇಕಾದ ನೀರನ್ನು ಹೊಂದಿಸುತ್ತಾರೆ. ಇದಕ್ಕಾಗಿ ಇವರು ಕಂಡು ಕೊಂಡ ಉಪಾಯ ಮಳೆ ನೀರಿನ ಕೊಯ್ಲು.[ಬಿಬಿಎಂಪಿ ಬಜೆಟ್ : ಸ್ವಚ್ಛ, ಹಸಿರು ಬೆಂಗಳೂರಿನತ್ತ ಒಂದು ಹೆಜ್ಜೆ!]

ಮಳೆ ನೀರನ್ನು ಸಂಗ್ರಹಿಸಿ ಅದನ್ನೇ ವರ್ಷ ಪೂರ್ತಿ ತಮ್ಮ ಮನೆಯ ಉಪಯೋಗಕ್ಕೆ ಬಳಸುತ್ತಾರೆ ಎ.ಆರ್.ಶಿವಕುಮಾರ್.

ಮಳೆ ಕೊಯ್ಲು

ಮಳೆ ಕೊಯ್ಲು

ಶಿವಕುಮಾರ್ 1995ರಲ್ಲಿ ಮನೆ ಕಟ್ಟಿದರು. ಈ ಸಂದರ್ಭದಲ್ಲಿ ಸುತ್ತ ಮುತ್ತಲ ಮನೆಗಳಿಗೆ ಬರುತ್ತಿದ್ದ ನೀರಿನ ಬಿಲ್ ಅನ್ನು ಅಧ್ಯಯನ ಮಾಡಿದರು. ನಂತರ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯೊಂದು ಅವರ ಗಮನ ಸೆಳೆಯಿತು. 4 ಜನರಿರುವ ಕುಟುಂಬವೊಂದು ದಿನಕ್ಕೆ ಅಂದಾಜು 500 ಲೀಟರ್ ನೀರು ಬಳಕೆಗೆ ಸಾಕಾಗುತ್ತದೆ ಎಂಬುದು ಸಂಸ್ಥೆಯ ಸಂಶೋಧನೆಯಿಂದ ತಿಳಿದು ಬಂದಿತ್ತು. ನಂತರ ಕಳೆದ 100 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಲೆಕ್ಕ ಹಾಕಿದರು. ಇದನ್ನು ನೋಡಿದಾಗ ಅವರಿಗೆ ನಗರದಲ್ಲಿ ಬೀಳುವ ಮಳೆಯ ನೀರು ಗೃಹೋಪಯೋಗಿ ಬಳಕೆಗೆ ಸಾಕು ಎಂಬ ಅರಿವು ಬಂತು.['1300 ದಶಲಕ್ಷ ಲೀಟರ್‍ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ ಬಳಕೆ']

ಕೊಯ್ಲು ಹೇಗೆ?

ಕೊಯ್ಲು ಹೇಗೆ?

ಮನೆಯಲ್ಲಿ ನಿರ್ಮಿಸಲಾದ ಬೃಹತ್ ಟ್ಯಾಂಕಿಗೆ ಅತ್ಯಾಧುನಿಕ 'ಪಾಪ್ ಅಪ್' ಫಿಲ್ಟರನ್ನು ಅಳವಡಿಕೆ ಮಾಡಲಾಗುತ್ತದೆ. ಈ ಪಾಪ್ ಅಪ್ ಫಿಲ್ಟರಿನಲ್ಲಿ ಬೆಳ್ಳಿಯ ಹಾಳೆ ಇರುತ್ತದೆ. ಇದು ಸಂಗ್ರಹಿಸಲಾದ ಮಳೆ ನೀರಿನಲ್ಲಿರುವ ಕಲ್ಮಶಗಳನ್ನೆಲ್ಲಾ ತೆಗೆಯುತ್ತದೆ.

ಬೇರೆ ದೇಶಗಳಲ್ಲೂ ಇದೆ

ಬೇರೆ ದೇಶಗಳಲ್ಲೂ ಇದೆ

ಮಳೆ ನೀರಿನ ಕೊಯ್ಲು ವಿಧಾನವನ್ನು ಆಫ್ರಿಕಾ, ಯೂರೋಪ್ ಸೇರಿದಂತೆ ಹಲವಾರು ದೇಶಗಳಲ್ಲಿ ಬಳಸಲಾಗುತ್ತದೆ. ಭಾರತ ಸರಕಾರದ ಜತೆ ಸೇರಿಕೊಂಡು ಈ ಯೋಜನೆ ನಿರ್ಮಿಸಲು ನಾರ್ವೆ ಸರಕಾರ ಈಗಾಗಲೇ ಒಪ್ಪಂದವನ್ನೂ ಮಾಡಿಕೊಂಡಿದೆ.

ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಶಿವಕುಮಾರ್

ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಶಿವಕುಮಾರ್

ಕೇಂದ್ರ ಸರಕಾರದ ರಾಷ್ಟ್ರೀಯ ಅನ್ವೇಷಣೆ ಪ್ರಶಸ್ತಿ, ಕರ್ನಾಟಕ ಸರಕಾರದ ಅಮೂಲ್ಯ ಪ್ರಶಸ್ತಿ, ರೋಟರಿ ಇಂಟರ್ನ್ಯಾಷನಲ್ ನ ಸಿಟಿಜನ್ ಎಕ್ಸ್ರಾಡಿನರಿ ಪ್ರಶಸ್ತಿಗಳು ಶಿವಕುಮಾರ್ ಗೆ ಸಂದಿವೆ. ತಮ್ಮ ಮಳೆ ನೀರಿನ ಕೊಯ್ಲು ಅವರಿಗೆ ಬಿಲ್ ಉಳಿಸಿದ್ದಲ್ಲದೇ ಹಲವು ಪ್ರಶಸ್ತಿಗಳನ್ನೂ ತಂದುಕೊಟ್ಟಿದೆ.

ಲಾಭಗಳು

ಲಾಭಗಳು

ಸದ್ಯ ಕರ್ನಾಟಕ ಸರಕಾರ ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಕಾಯ್ದೆಗೆ ತಿದ್ದುಪಡಿ ತಂದಿದ್ದು ಬೆಂಗಳೂರು ವ್ಯಾಪ್ತಿಯ 2400 ಚದರ ಅಡಿಗಿಂತ ಹೆಚ್ಚಿನ ವಿಸ್ತಾರದ ಮನೆ ಮತ್ತು ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಮಾಡುವುದನ್ನು ಕಡ್ಡಾಯಗೊಳಿಸಿದೆ.

English summary
A senior scientist at the Karnataka State Council of Science and Technology at Indian Institute of Science, A R Shivkumar hasn't paid his water bill for 22 years. Yes, its true. Shivkumar is not new to this concept.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X