ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಕೇವಲ ಒಂದು ವಾರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಬರೋಬ್ಬರು 2.40 ಕೋಟಿ ರೂ ದಂಡ ಸಂಗ್ರಹಿಸಿದ್ದಾರೆ.

Recommended Video

ಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತ | Oneindia Kannada

ಇದು ಖುಷಿಯ ಸಂಗತಿಯೇನಲ್ಲ, ಯಾಕೆಂದರೆ ಅಷ್ಟು ಮಂದಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರ್ಯಾರಿಗೂ ತಮ್ಮ ಜೀವದ ಮೇಲೆ ಆಸೆಯೇ ಇಲ್ಲವೇ ಎನ್ನುವ ಪ್ರಶ್ನೆಯೂ ಕಾಡುತ್ತದೆ.

ರಾಜ್ಯದಲ್ಲಿ ಯಾವಾಗ ಟ್ರಾಫಿಕ್ ದಂಡವನ್ನು ಇಳಿಸುತ್ತಾರೆ ಎಂಬುವುದು ಮಾತ್ರ ಇರುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕಳೆದ 8 ದಿನಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 2.40 ಕೋಟಿ ಹಣ ದಂಡದ ರೂಪದಲ್ಲಿ ವಸೂಲಾಗಿದೆ.

ಕಳೆದ 8 ದಿನಗಳ ಅವಧಿಯಲ್ಲಿ 84,589 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದ 16,710 ಪ್ರಕರಣ, ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದ ಸಂಬಂಧ 10,977 ಪ್ರಕರಣಗಳು, ಸಿಗ್ನಲ್ ಜಂಪ್ 10,128 ಪ್ರಕರಣ, ನೋ ಪಾರ್ಕಿಂಗ್ 10,867 ಪ್ರಕರಣ, ಡ್ರಿಂಕ್ ಅಂಡ್ ಡ್ರೈವ್ ಅಡಿ 150 ಪ್ರಕರಣಗಳು ದಾಖಲಾಗಿದೆ.

ಒಟ್ಟು 60 ವಿವಿಧ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆ ಅಡಿ ದಂಡವನ್ನು ವಿಧಿಸಲಾಗುತ್ತಿದೆ. ದಿನವೊಂದಕ್ಕೆ ಸರಾಸರಿ 29 ಲಕ್ಷ ರೂ. ದಂಡದ ಹಣ ಸಂಗ್ರಹವಾಗುತ್ತಿದೆ. ಹೀಗೆ ಮುಂದುವರೆದರೆ ಟ್ರಾಫಿಕ್ ಪೊಲೀಸರ ಕಡೆಯಿಂದ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 8 ಕೋಟಿ ಆದಾಯ ಲಭಿಸಲಿದೆ.

ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಅಡಿ ಹೊಸ ನಿಯಮಗಳು ಅನ್ವಯವಾದ ಬಳಿಕ ಇದುವರೆಗೂ 84,589 ಪ್ರಕರಣಗಳು ದಾಖಲಾಗಿವೆ. ವಿಶೇಷ ಎಂದರೆ ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಕೇವಲ 150 ಪ್ರಕರಣಗಳು ಮಾತ್ರ ಇದುವರೆಗೂ ದಾಖಲಾಗಿವೆ.

ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಗಡ್ಕರಿ ಸಭೆ

ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಗಡ್ಕರಿ ಸಭೆ

ಸಾರಿಗೆ ನಿಯಮ ಉಲ್ಲಂಘನೆಗೆ ವಿಧಿಸಿದ್ದ ದಂಡ ಮೊತ್ತವನ್ನು ಕೆಲವು ರಾಜ್ಯಗಳು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಲ್ಲಾ ಸಿಎಂಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಿದ್ದಾರೆ.ಈಗಾಗಲೇ ಗಡ್ಕರಿಯವರು ಕಾನೂನು ಸಲಹೆ ಪಡೆದಿದ್ದಾರೆ. ನೂತನ ಮೋಟಾರು ವಾಹನ ಕಾಯ್ದೆಯಡಿಯಲ್ಲಿನ ದಂಡದ ಮೊತ್ತ ಕಡ್ಡಾಯವಲ್ಲ. ಅದರ ಪ್ರಮಾಣವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಮುಕ್ತ ಅವಕಾಶವಿದೆ. ರಾಜ್ಯ ಸರ್ಕಾರಗಳು ದಂಡದ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಈ ಹಿಂದೆ ತಿಳಿಸಿದ್ದರು.

ಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ

ದಂಡ ಮೊತ್ತ ಇಳಿಕೆಗೆ ಸಿಎಂ ಯಡಿಯೂರಪ್ಪ ಸೂಚನೆ

ದಂಡ ಮೊತ್ತ ಇಳಿಕೆಗೆ ಸಿಎಂ ಯಡಿಯೂರಪ್ಪ ಸೂಚನೆ

ಕರ್ನಾಟಕದಲ್ಲೂ ದಂಡ ಮೊತ್ತ ಇಳಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಇದೀಗ ಕರ್ನಾಕಟವೂ ದುಬಾರಿ ಟ್ರಾಫಿಕ್ ದಂಡದ ಮೊತ್ತವನ್ನು ಕಡಿತಗೊಳಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿತ್ತು. ಇದೀಗ ಕರ್ನಾಟಕ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದರೆ ಕರ್ನಾಟಕ ಸರ್ಕಾರ ಟ್ರಾಫಿಕ್ ದಂಡವನ್ನು ಎಷ್ಟು ಕಡಿತಗೊಳಿಸಿದೆ.

ಬೈಕ್ ಸವಾರನ ಮೇಲೆ ಪೊಲೀಸರ ಹಲ್ಲೆ

ಬೈಕ್ ಸವಾರನ ಮೇಲೆ ಪೊಲೀಸರ ಹಲ್ಲೆ

ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬೈಕ್ ಸವಾರನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ನಡುವೆ, ಹಲವು ರಾಜ್ಯಗಳಲ್ಲಿ ದಂಡದ ಪ್ರಮಾಣ ಇಳಿಸಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚರ್ಚಿಸಲು ಎಲ್ಲಾ ರಾಜ್ಯಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ. ಈ ಬೆಳವಣಿಯಿಂದ ರಾಜ್ಯದಲ್ಲಿ ಟ್ರಾಫಿಕ್ ದಂಡದ ಇಳಿಕೆ ಮಾಡುತ್ತಾರಾ ಎಂಬ ಅನುಮಾನ ಅನುಮಾನ ಮೂಡಿದೆ.

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

ಬೆಂಗಳೂರಲ್ಲಿ ಒಂದೇ ದಿನದಲ್ಲಿ 60 ಲಕ್ಷ ದಂಡ

ಬೆಂಗಳೂರಲ್ಲಿ ಒಂದೇ ದಿನದಲ್ಲಿ 60 ಲಕ್ಷ ದಂಡ

ಸೆ.12 ಬೆಳಗ್ಗೆ 10 ಗಂಟೆಯಿಂದ ಸೆ.13 ಬೆಳಗ್ಗೆ 10 ಅವಧಿಯಲ್ಲಿ ನಗರದಲ್ಲಿ 18,503 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಒಟ್ಟು 60,80,500 ರೂ. ದಂಡ ಸಂಗ್ರಹವಾಗಿದೆ.

English summary
In just a week, Bengaluru Traffic police have collected Rs 2.40 crore in fines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X