ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮಿಷನ್ ಸರ್ಕಾರ ಎಂದಿದ್ದ ಮೋದಿ ಎಷ್ಟು ಕಮಿಷನ್ ಪಡೆದಿದ್ದಾರೆ: ಸಿದ್ದರಾಮಯ್ಯ ಪ್ರಶ್ನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 13: ತಮ್ಮ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದಿದ್ದ ಮೋದಿ ಅವರಿಗೆ ಸಿದ್ದರಾಮಯ್ಯ ಅವರು 'ನೀವೆಷ್ಟು ಕಮಿಷನ್ ಪಡೆದಿದ್ದೀರಿ?' ಎಂದು ಪ್ರಶ್ನೆ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಎಚ್‌ಎಎಲ್‌ ನೌಕರರೊಡನೆ ಸಂವಾದ ನಡೆಸಿದ ಬೆನ್ನಲ್ಲೆ ಟ್ವಿಟ್ಟರ್‌, ಫೇಸ್‌ಬುಕ್‌ ನಲ್ಲಿ ಮೋದಿ ಅವರಿಗೆ ಪ್ರಶ್ನೆಗಳ ಬಾಣಗಳನ್ನು ಸಿದ್ದರಾಮಯ್ಯ ಎಸೆಯುತ್ತಿದ್ದಾರೆ.

ಆಧಾರ ರಹಿತವಾಗಿ ನಮ್ಮ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದ ಮೋದಿ ಅವರೇ, ರಫೆಲ್‌ ಒಪ್ಪಂದಕ್ಕೆ ಅಂಬಾನಿಯಿಂದ ನೀವು ಪಡೆದ ಕಮಿಷನ್ ಎಷ್ಟು? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ನಿಮ್ಮಂತಹಾ ಮಹಾನ್ ಭಾಷಣಕಾರರೇ ರಫೆಲ್‌ ಆರೋಪದ ಬಗ್ಗೆ ಮೌನವಾದರೆ ಹೇಗೆ? ಎಂದು ಮೋದಿ ಅವರ ಕಾಲೆಳೆದಿದ್ದಾರೆ ಸಿದ್ದರಾಮಯ್ಯ. ಅವರು ಹಾಕಿರುವ ಪೋಸ್ಟ್‌ಗೆ ರಾಹುಲ್‌ ವಿತ್‌ ಎಚ್‌ಎಎಲ್‌ ಎಂಬ ಹ್ಯಾಷ್‌ಟ್ಯಾಗ್ ಸಹ ಜೋಡಿಸಿಕೊಂಡಿದ್ದಾರೆ.

ಬಂಡವಾಳ ಶಾಹಿಗಳಿಗಾಗಿ ವಿದೇಶ ಯಾತ್ರೆ

ಬಂಡವಾಳ ಶಾಹಿಗಳಿಗಾಗಿ ವಿದೇಶ ಯಾತ್ರೆ

ದೇಶದ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಜನ ಸೇವೆ ಮಾಡಲಿಲ್ಲ ನೀವು

ಜನ ಸೇವೆ ಮಾಡಲಿಲ್ಲ ನೀವು

ಪ್ರಧಾನ ಸೇವಕರಾಗಿ ಜನ ಸೇವೆಯನ್ನು ಮಾಡಲಿಲ್ಲ, ಚೌಕಿದಾರರಾಗಿ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ಬಗ್ಗೆಯಾದರೂ ಮಾತನಾಡಿ ಎಂದು ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಅಂಬಾನಿಗೆ ತೋರುತ್ತಿರುವ ನಿಷ್ಠೆ ದೇಶಕ್ಕೆ ತೋರಿ

ಅಂಬಾನಿಗೆ ತೋರುತ್ತಿರುವ ನಿಷ್ಠೆ ದೇಶಕ್ಕೆ ತೋರಿ

ರಫೆಲ್ ಡೀಲ್‌ನಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗೆಗೆ ತೋರಿದ್ದರೆ ಡಾಲರ್ ಮೌಲ್ಯ ಇಂದು ರೂ.74ರ ಗಡಿ ದಾಟುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಮೋದಿ ಅವರಿಗೆ ಕುಟುಕಿದ್ದಾರೆ.

ಎಚ್‌ಎಎಲ್‌ಗೆ ವಿಶ್ವದಲ್ಲಿಯೇ ಗೌರವವಿದೆ

ಎಚ್‌ಎಎಲ್‌ಗೆ ವಿಶ್ವದಲ್ಲಿಯೇ ಗೌರವವಿದೆ

ಎಚ್‌ಎಎಲ್‌ ಬಗ್ಗೆ ವಿಶ್ವದಲ್ಲಿಯೇ ಗೌರವ ಇದೆ, ದೇಶಕ್ಕಾಗಿ ಅನೇಕ ಯುದ್ಧ ವಿಮಾನಗಳನ್ನು ನಿರ್ಮಿಸಿದ ಗೌರವ ಅದಕ್ಕಿದೆ ಆದರೆ ಎಚ್‌ಎಎಲ್‌ಗೆ ನೀಡಿದ್ದ ಒಪ್ಪಂದವನ್ನು ಬಿಜೆಪಿಯು ಕಿತ್ತುಕೊಂಡು ಅಂಬಾನಿಗೆ ಕೊಟ್ಟಿದೆ ಇದೆಲ್ಲ ಮೋದಿ ಅವರ ಒಪ್ಪಿಗೆ ಇಲ್ಲದೆ ಆಗುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಂಡವಾಳ ಶಾಹಿಗಳಿಗಾಗಿ ವಿದೇಶ ಯಾತ್ರೆ

ಬಂಡವಾಳ ಶಾಹಿಗಳಿಗಾಗಿ ವಿದೇಶ ಯಾತ್ರೆ

ದೇಶದ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಜನ ಸೇವೆ ಮಾಡಲಿಲ್ಲ ನೀವು

ಜನ ಸೇವೆ ಮಾಡಲಿಲ್ಲ ನೀವು

ಪ್ರಧಾನ ಸೇವಕರಾಗಿ ಜನ ಸೇವೆಯನ್ನು ಮಾಡಲಿಲ್ಲ, ಚೌಕಿದಾರರಾಗಿ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ಬಗ್ಗೆಯಾದರೂ ಮಾತನಾಡಿ ಎಂದು ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

English summary
Siddaramaiah asks Modi that how much commission will you receive from Ambani after handover the Rafale deal. He asks questions to Modi through twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X