ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಪ್ರಭು ಕೆಂಪೇಗೌಡ ಜಯಂತಿ ಬಗ್ಗೆ ಬೆಂಗಳೂರಿಗರಿಗೆ ಎಷ್ಟು ಗೊತ್ತು?

|
Google Oneindia Kannada News

Recommended Video

Nadaprabhu Kempegowda Jayanthi 2018 : ಈ ದಿನದ ಬಗ್ಗೆ ಬೆಂಗಳೂರಿಗರಿಗೆ ಎಷ್ಟು ಗೊತ್ತು?

ಬೆಂಗಳೂರು, ಜೂನ್ 27: ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ಸರ್ಕಾರ ಜೂನ್ 27ರಂದು ಆಚರಿಸುತ್ತಿದೆ.

ಬೆಂಗಳೂರು ವಿಶ್ವಮಟ್ಟದಲ್ಲಿ ಇಂದು ಮಾನ್ಯತೆ ಪಡೆದಿದೆ. ಇಲ್ಲಿನ ಪರಿಸರ, ವಾತಾವರಣ, ಬಡಾವಣೆಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಸುಮಾರು 500 ವರ್ಷದ ಹಿಂದೆ ಕೆಂಪೇಗೌಡ ನೀಡಿದ ಕೊಡುಗೆ ಮಹತ್ವದ್ದು.

ಕೆಂಪೇಗೌಡ ಜಯಂತಿ: ಪರಂಪರೆ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿದ ಸರ್ಕಾರಕೆಂಪೇಗೌಡ ಜಯಂತಿ: ಪರಂಪರೆ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿದ ಸರ್ಕಾರ

ಕೆಂಪೇಗೌಡರ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕ್ರಮಗಳಿಂದಲೇ ಅದು ಇಂದು ಬೃಹತ್ ನಗರವಾಗಿ ಬೆಳೆದಿದೆ. ಆದರೆ, ಕೆಂಪೇಗೌಡರ ಬಗ್ಗೆ ಬೆಂಗಳೂರಿನ ಜನರಿಗೆ ಎಷ್ಟು ತಿಳಿದಿದೆ?

ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೋದರೆ ಸಿಗುವ ಉತ್ತರಗಳು ನಿರಾಶೆ ಮೂಡಿಸುತ್ತವೆ.

ಕೆಂಪೇಗೌಡ ಜಯಂತಿ ನೆಪದಲ್ಲಿ 'ಒನ್ ಇಂಡಿಯಾ' ಕೆಂಪೇಗೌಡರ ಕುರಿತು ಬೆಂಗಳೂರಿನ ಜನರಿಗೆ ಕೆಲವು ಪ್ರಶ್ನೆಗಳನ್ನು ಕೇಳಿತು. ಅದಕ್ಕೆ ಬಹುತೇಕ ಜನರು ಉತ್ತರ ಹೇಳಲು ತಡಬಡಾಯಿಸಿದರು.

how much benglurians know kempegowda?

ಜೂನ್ 27ರ ವಿಶೇಷ ಏನು ಎಂಬ ಪ್ರಶ್ನೆಗೆ ಅನೇಕರಿಗೆ ಉತ್ತರವೇ ತಿಳಿದಿರಲಿಲ್ಲ. ಕೆಲವು ವಿದ್ಯಾರ್ಥಿಗಳು ಕೆಂಪೇಗೌಡ ಜಯಂತಿ ಎಂದು ಸರಿಯಾದ ಉತ್ತರ ನೀಡಿದರು.

ಕೆಂಪೇಗೌಡ ವಸ್ತು ಸಂಗ್ರಹಾಲಯಕ್ಕೆ ದೊರೆಯಲಿದೆ ಡಿಜಿಟಲ್‌ ಸ್ಪರ್ಶಕೆಂಪೇಗೌಡ ವಸ್ತು ಸಂಗ್ರಹಾಲಯಕ್ಕೆ ದೊರೆಯಲಿದೆ ಡಿಜಿಟಲ್‌ ಸ್ಪರ್ಶ

ಇನ್ನು ಕೆಲವರು ಕೆಂಪೇಗೌಡರ ಜಯಂತಿ ಎಂಬುದನ್ನು ಕೇಳಿ ಅಚ್ಚರಿಪಟ್ಟುಕೊಂಡರು. ಅದರ ಬಗ್ಗೆ ಕ್ಲೂ ಇಲ್ಲ. ಅದು ಯಾವುದಕ್ಕೆ ಸಂಬಂಧಿಸಿದ್ದು ಎಂಬ ಮರುಪ್ರಶ್ನೆ ಮುಂದಿಟ್ಟರು.

ಕೆಲವರು ಬೆಂಗಳೂರಿನ ಮೊದಲ ಹೆಸರು ಬೆಂದಕಾಳೂರು ಎಂಬುದನ್ನು ಈ ವೇಳೆ ನೆನಪಿಸಿಕೊಂಡರು. ಹೆಚ್ಚಿನವರಿಗೆ ಕೆಂಪೇಗೌಡರು ಹುಟ್ಟಿದ್ದು ಯಾವಾಗ ಎನ್ನುವುದು ತಿಳಿದಿರಲಿಲ್ಲ.

ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಕುರಿತು ಪ್ರಾಥಮಿಕ ಮಾಹಿತಿಯ ಕೊರತೆ ಇಲ್ಲದಿರುವುದು ಕಂಡುಬಂತು. ಕೆಂಪೇಗೌಡರು ಬೆಂಗಳೂರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ನೆನಪನ್ನು ಶಾಶ್ವತವಾಗಿ ಇರಿಸಲು ಸರ್ಕಾರ ಅವರ ಹೆಸರಿನಲ್ಲಿ ಸಾಕಷ್ಟು ಸಂಸ್ಥೆಗಳನ್ನು ಕಟ್ಟಿಸಿದ್ದಾರೆ ಎಂದು ಹಿರಿಯರೊಬ್ಬರು ನೆನಪಿಸಿಕೊಂಡರು.

English summary
On the day of Nada Prabhu Kempegowda Jayanti, One India has put some questions to the citizens of Bengaluru about Kempegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X