ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಟಿಬಿ ನಾಗರಾಜ್ ಕೋಟ್ಯಧಿಪತಿಯಾಗಿದ್ದು ಹೇಗೆ?

|
Google Oneindia Kannada News

Recommended Video

ಎರಡು ವರ್ಷ 40 ರೂಪಾಯಿಗೆ ಕೆಲಸ ಮಾಡಿದ್ದ ಎಂಟಿಬಿ | Oneinida Kannada

ಬೆಂಗಳೂರು, ನವೆಂಬರ್ 20: ಎಂಟಿಬಿ ನಾಗರಾಜ್ ತಾವು ಕೋಟ್ಯಧಿಪತಿಯಾಗಿದ್ದು ಹೇಗೆ ಎಂಬ ವಿಚಾರವನ್ನು ಎಲ್ಲರ ಮುಂದಿಟ್ಟಿದ್ದಾರೆ.

ಉಪ ಚುನಾವಣೆಯಲ್ಲಿ ಹೊಸಕೋಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ಅವರ ಆಸ್ತಿ ಇನ್ನೂರು ಕೋಟಿ ರೂ ಹೆಚ್ಚಳ ಹೇಗಾಯಿತು ಎಂದು ಜನರು ಕೇಳುತ್ತಿದ್ದಾರೆ ಅದಕ್ಕೆ ಎಂಟಿಬಿಯವರೇ ನೀಡಿದ ಉತ್ತರ ಇಲ್ಲಿದೆ.

18 ತಿಂಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಬೆಳೆದಿದ್ದು ಎಷ್ಟು ಗೊತ್ತೇ?18 ತಿಂಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಬೆಳೆದಿದ್ದು ಎಷ್ಟು ಗೊತ್ತೇ?

ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇ ಹೊರತು ನನ್ನ ಸ್ವಾರ್ಥಕಲ್ಲ. ಇಂದು ದೊಡ್ಡ ದೊಡ್ಡ ಭಾಷಣ ಮಾಡುವ ನಾಯಕರು ನನ್ನ ಬಳಿ ಚುನಾವಣೆಗಳಿಗೆ ಹಣದ ಸಹಾಯವನ್ನು ಪಡೆದವರು. ಇವತ್ತಿನ ದಿನ ಅವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದಲ್ಲಿ ತಿಳಿಸಿದ್ದಾರೆ.

40 ರೂಪಾಯಿ ಕೆಲಸಕ್ಕೆ ಎರಡು ವರ್ಷ ಹೋಗಿದ್ದೆ

40 ರೂಪಾಯಿ ಕೆಲಸಕ್ಕೆ ಎರಡು ವರ್ಷ ಹೋಗಿದ್ದೆ

ನೇಗಿಲು ಉತ್ತಲು ಆಗದೆ ಎರಡು ವರ್ಷ 40 ರೂಪಾಯಿ ಕೆಲಸಕ್ಕೆ ಹೋಗಿದ್ದೆ.ನಾನು ಏಕಾಏಕಿ ಶ್ರೀಮಂತನಾದವನಲ್ಲ ಎಲ್ಲಾ ಕಷ್ಟವನ್ನೂ ಕಂಡಿದ್ದೇನೆ. ಆದರೆ ಅದನ್ನೂ ಯಾರ ಬಳಿಯೂ ಹೇಳಿಲ್ಲವಷ್ಟೇ, ಜನರಿಗೆ ಎಂಟಿಬಿ ಓರ್ವ ಶ್ರೀಮಂತ ಎನ್ನುವುದಷ್ಟೇ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಂದೆ 11 ಸಾವಿರಕ್ಕೆ ಲಾರಿ ಕೊಡಿಸಿದ್ರು

ತಂದೆ 11 ಸಾವಿರಕ್ಕೆ ಲಾರಿ ಕೊಡಿಸಿದ್ರು

ತಂದೆ ನನ್ನ ಕಷ್ಟ ನೋಡಲಾರದೆ 1971ರಲ್ಲಿ 11 ಸಾವಿರಕ್ಕೆ ಒಂದು ಲಾರಿಯನ್ನು ಕೊಡಿಸಿದ್ದರು. ಅದಕ್ಕೆ ಮಂಜುನಾಥಸ್ವಾಮಿ ಎಂದು ಹೆಸರಿಟ್ಟಿದ್ದೆ. ಅಂದಿನಿಂದಲೂ ಇಂದಿನವರೆಗೂ ಮಂಜುನಾಥಸ್ವಾಮಿ ರಾಜಕೀಯವಾಗಿ, ವ್ಯಾಪಾರವಾಗಿ ಬೆಳೆಸಿದ್ದಾನೆ. ದೇವರು ಹಣೆಬರಹದಲ್ಲಿ ಏನು ಬರೆದಿರುತ್ತಾನೋ ಅದೇ ಆಗುತ್ತದೆ. ನಾನು ಕಷ್ಟಪಟ್ಟು ದುಡಿದಿದ್ದೀನಿ ಅದಕ್ಕೆ ದೇವರು ನನಗೆ ಪ್ರತಿಫಲ ನೀಡಿದ್ದಾನೆ ಎಂದು ಹೇಳಿದರು.

ನಾನು ಹೆಚ್ಚಾಗಿ ತಿರುಪತಿ ವೆಂಕಟೇಶ್ವರ ಸ್ವಾಮಿ ಮತ್ತು ಧರ್ಮಸ್ಥಳ ಮಂಜುನಾಥಸ್ವಾಮಿಯನ್ನು ನಂಬುತ್ತೇನೆ. ನನಗೆ ದೈವದ ಮೇಲೆ ತುಂಬಾ ನಂಬಿಕೆ ಇದೆ. ಆದರೆ ವರ್ಷದಲ್ಲಿ ಎರಡು ಬಾರಿ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ. ಇದರಿಂದ ಯಾವುದೇ ಉಪಯೋಗವಿಲ್ಲ. ಮನಸ್ಸು ಪರಿಶುದ್ಧವಾಗಿರಬೇಕು ಎಂದು ಹೇಳಿದರು.

ಅನರ್ಹ ಶಾಸಕರ ಅಕೌಂಟಿಗೆ ಬಿದ್ದ ದುಡ್ಡೆಷ್ಟು? ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ ಕಾಂಗ್ರೆಸ್ಅನರ್ಹ ಶಾಸಕರ ಅಕೌಂಟಿಗೆ ಬಿದ್ದ ದುಡ್ಡೆಷ್ಟು? ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ ಕಾಂಗ್ರೆಸ್

ಯಾರನ್ನು ಯಾಮಾರಿಸಿಲ್ಲ, ಸುಳ್ಳು ಹೇಳಿಲ್ಲ

ಯಾರನ್ನು ಯಾಮಾರಿಸಿಲ್ಲ, ಸುಳ್ಳು ಹೇಳಿಲ್ಲ

ನಾನು ಯಾರನ್ನೂ ಯಾಮಾರಿಸಿಲ್ಲ ಸುಳ್ಳು ಹೇಳಿಲ್ಲ, ರಾಜಕೀಯದಲ್ಲಿ ದುಟ್ಟು ಮಾಡಿಲ್ಲ.ಯಾರಾದರೂ ಹಣ ಕೊಟ್ಟರೆ ಅದನ್ನು ನನ್ನ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ನೀಡಿದ್ದೇನೆ ಎಂದರು.

ಎಷ್ಟೇ ಕೋಟಿ ಸರದಾರನಾದ್ರೂ ತೆರಿಗೆ ಕಟ್ಟಿದ್ದೇನೆ

ಎಷ್ಟೇ ಕೋಟಿ ಸರದಾರನಾದ್ರೂ ತೆರಿಗೆ ಕಟ್ಟಿದ್ದೇನೆ

ನಾನು ಎಷ್ಟೇ ಕೋಟಿ ಸರದಾರನಾಗಿದ್ದರೂ ಕಟ್ಟಬೇಕಾದ ಟ್ಯಾಕ್ಸ್‌ನ್ನು ಕಾಲಕಾಲಕ್ಕೆ ಕಟ್ಟಿದ್ದೇನೆ. 10 ಸಾವಿರ ರೂಪಾಯಿಗಳ ಸಾಲಮನ್ನಾ ಮಾಡುವ ಯೋಜನೆಗಳಿಂದ ರೈತರ ಕಷ್ಟ ಪರಿಹಾರ ಆಗುವುದಿಲ್ಲ. ರೈತರಿಗೆ ಶಾಶ್ವತ ಪರಿಹಾರವನ್ನು ನೀಡುವ ಕೆಲಸವಾಗಬೇಕು ಎಂದು ಹೇಳಿದರು.

English summary
MTB Nagaraj himself claims how he became the millionaire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X