ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಹ್ಯಾಕರ್‌ಗಳು ಸೈನಿಕರಿಗೆ ಗೌರವ ಸಲ್ಲಿಸಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಜನವರಿ, 07: ಪಠಾಣ್ ಕೋಟ್ ನಲ್ಲಿ ದೇಶಕ್ಕೆ ಪ್ರಾಣ ತೆತ್ತ ಸೈನಿಕರಿಗೆ ಭಾರತದ ತಂತ್ರಜ್ಞರು ಹೊಸ ಬಗೆಯಲ್ಲಿ ಗೌರವ ಸೂಚಿಸಿದ್ದಾರೆ. ಅಲ್ಲದೇ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ. ಕೇರಳ ಮೂಲದ ಗುಂಪೊಂದು 7 ಪಾಕಿಸ್ತಾನಿ ಅಂತರ್ಜಾಲ ತಾಣವನ್ನು ಹ್ಯಾಕ್ ಮಾಡಿ ಮುಯ್ಯಿ ತೀರಿಸಿಕೊಂಡಿದೆ.

ಜನವರಿ 6 ರಂದು ಪಾಕಿಸ್ತಾನದ ಬಾರ್ ಕೌನ್ಸಿಲ್ ವೆಬ್ ತಾಣ ಸೇರಿದಂತೆ ಏಳು ತಾಣಗಳನ್ನು ಹ್ಯಾಕ್ ಮಾಡಿ ಇದನ್ನು ನಿರಂಜನ್ ಅವರ 18 ತಿಂಗಳ ಮಗುವಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.[ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]

india

ಇಂಡಿಯನ್ ಬ್ಲ್ಯಾಕ್ ಹಾಟ್ಸ್ ಹೆಸರಿನ ಗುಂಪು, ನಾವು ಪಾಕಿಸ್ತಾನದ ವೆಬ್ ತಾಣದ ಯಾವುದೇ ಸಂಗತಿ ಡಿಲೀಟ್ ಮಾಡಿಲ್ಲ. ಆದರೆ ನಿರಂಜನ್ ಅವರ ಮಗಳ ಫೋಟೋವನ್ನು ಎಲ್ಲ ಕಡೆ ಅಪ್ ಲೋಡ್ ಮಾಡಿದ್ದೆವು ಎಂದು ತಿಳಿಸಿದ್ದಾರೆ.

ಇದು ಪಾಕಿಸ್ತಾನಕ್ಕೆ ಮತ್ತು ಉಗ್ರಗಾಮಿಗಳಿಗೆ ತಕ್ಕುದಾದ ಉತ್ತರ. ಇದು ಕೇವಲ ಸೈಬರ್ ಯುದ್ಧವಲ್ಲ. ಇದರಿಂದ ಪಾಕಿಸ್ತಾನ ಬುದ್ಧಿ ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ.[ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ಪಾಕಿಸ್ತಾನದ ವೆಬ್ ತಾಣಗಳ ಮೇಲೆ ಬ್ಲ್ಯಾಕ್ ಹಾಟ್ಸ್ ಬರೆದಿದ್ದು ಹೀಗೆ....
"ಪಠಾಣ್ ಕೋಟ್ ನಲ್ಲಿ ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಸೈನಿಕರಿಗೆ ನಮನಗಳು. ಇದು ನಾವು ಸಲ್ಲಿಕೆ ಮಾಡುತ್ತಿರುವ ಚಿಕ್ಕ ಗೌರವ. ಅವರು ನಮಗಾಗಿ, ನಮ್ಮ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ್ದಾರೆ... ನಾವು ಇದನ್ನು ಮರೆತುಬಿಡುತ್ತೇವೆ ಎಂದು ಅಂದುಕೊಳ್ಳಬೇಡಿ...ನಮ್ಮಿಂದ ಮುಂದೆ ಏನನ್ನೂ ನಿರೀಕ್ಷೆ ಮಾಡಬೇಡಿ"

English summary
A group of Kerala based hackers defaced seven Pakistani websites including that of Pakistani Bar Council on Wednesday, Jan 6. The group of hackers, who are popularly known as 'Indian Black Hats' have said that the only reason for hacking is to dedicate this hacking to 18-month old daughter of martyr Lt. Col Niranjan of National Security Guards (NSG).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X