ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರು ಹೊಸ ವರ್ಷಾಚರಣೆ ಮಾಡಿದ್ದು ಹೀಗೆ

|
Google Oneindia Kannada News

ಬೆಂಗಳೂರು, ಜನವರಿ 01 : ಹೊಸವರ್ಷಾಚರಣೆಯಲ್ಲಿ ಜನರು ತೊಡಗಿದ್ದರೆ ಪೊಲೀಸರು ಅವರ ರಕ್ಷಣೆಗೆ ನಿಂತಿದ್ದರು. ಅದರಲ್ಲೂ ಬೆಂಗಳೂರಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಪೊಲೀಸರು ಹೊಸ ವರ್ಷಾಚರಣೆ ಹೇಗೆ ಮಾಡಿದರು ಗೊತ್ತಾ?.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ದಕ್ಷಿಣ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ಮುಂತಾದ ಅಧಿಕಾರಿಗಳು ಜನರ ಜೊತೆ ಹೊಸ ವರ್ಷ ಆಚರಿಸಿದ್ದಾರೆ. ಹೊಸ ವರ್ಷದಂದು ಪೊಲೀಸರು ಮನೆ ಬಾಗಿಲಿಗೆ ಬಂದಾಗ ಜನರ ಸಂತಸ ಇಮ್ಮಡಿಯಾಗಿತ್ತು.

ಎಟಿಎಂನಲ್ಲಿ ಜ್ಯೋತಿ ಉದಯ್‌ ಮೇಲೆ ಹಲ್ಲೆ, ತಪ್ಪೊಪ್ಪಿಕೊಂಡ ಆರೋಪಿಎಟಿಎಂನಲ್ಲಿ ಜ್ಯೋತಿ ಉದಯ್‌ ಮೇಲೆ ಹಲ್ಲೆ, ತಪ್ಪೊಪ್ಪಿಕೊಂಡ ಆರೋಪಿ

ಬೆಂಗಳೂರು ನಗರ ಪೊಲೀಸರು ಟ್ವಿಟರ್‌ನಲ್ಲಿ ಹೊಸ ವರ್ಷಾಚರಣೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಧ್ಯರಾತ್ರಿ ಜನರ ಮನೆ ಬಾಗಿಲು ತಟ್ಟಿದ ಪೊಲೀಸರು ಅವರ ಮನೆಯಲ್ಲಿ ಕಳ್ಳತನವಾಗಿದ್ದ ವಸ್ತುಗಳನ್ನು ವಾಪಸ್ ನೀಡಿದರು.

50 ಲಕ್ಷ ಡಕಾಯಿತಿ ಪ್ರಕರಣ, ರೌಡಿ ಶೀಟರ್‌ಗೆ ಪೊಲೀಸರ ಗುಂಡೇಟು50 ಲಕ್ಷ ಡಕಾಯಿತಿ ಪ್ರಕರಣ, ರೌಡಿ ಶೀಟರ್‌ಗೆ ಪೊಲೀಸರ ಗುಂಡೇಟು

How Bengaluru city police win hearts at midnight

ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ್ದ ಪೊಲೀಸರು ಕಳುವಾದ ವಸ್ತುಗಳನ್ನು ಜನರಿಗೆ ಹೊಸ ವರ್ಷದ ದಿನ ನೀಡಿದರು. ಪೊಲೀಸರು ಮನೆ ಬಾಗಿಲಿಗೆ ಹೋಗಿ ವಸ್ತುಗಳನ್ನು ನೀಡಿದ್ದು ವಿಶೇಷವಾಗಿತ್ತು. ಚಿನ್ನದ ಆಭರಣದಿಂದ ಹಿಡಿದು ದುಬಾರಿ ಕ್ಯಾಮರಾ ತನಕ ಹಲವು ವಸ್ತುಗಳಿದ್ದವು.

ಬೆಂಗಳೂರು : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ಬೆಂಗಳೂರು : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

'ತಡರಾತ್ರಿ ಜನರ ಮನೆಗೆ ಹೋಗಿ ಕಳುವಾದ ವಸ್ತುಗಳನ್ನು ನೀಡಿದಾಗ ಅವರ ಮುಖದಲ್ಲಿ ಕಾಣುವ ಮಂದಹಾಸವನ್ನು ನೋಡವುದೇ ಸಂತಸದ ವಿಚಾರ' ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧ ಕಡೆ ಹೊಸ ವರ್ಷಾಚರಣೆಗೆ ಪೊಲೀಸರು ಭದ್ರತೆ ಒದಗಿಸುವ ಜೊತೆಗೆ ಜನರನ್ನು ಮಧ್ಯರಾತ್ರಿ ಭೇಟಿಯಾಗಿ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ.

English summary
Bengaluru City Police celebrated the new year in a unique way which was heartwarming and brought a smile on the faces of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X