ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Photos: ಹೀಗ್ ಆಗುತ್ತಾ ನಮ್ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ!?

|
Google Oneindia Kannada News

ಬೆಂಗಳೂರು, ಸೆೆಪ್ಟೆಂಬರ್ 26: ಬೆಂಗಳೂರಿನಲ್ಲಿ ಇರುವ ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಮರು ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಸೆಪ್ಟೆಂಬರ್ 24ರ ಶನಿವಾರ ರೈಲ್ವೆ ಸಚಿವಾಲಯವು ಪುನರಾಭಿವೃದ್ಧಿ ಮಾಡಲಿರುವ ನಿಲ್ದಾಣದ ಪ್ರಸ್ತಾವಿತ ವಿನ್ಯಾಸ ಮತ್ತು ನವೀಕರಿಸಿದ ಜಾಗದ ಭವಿಷ್ಯದ ಚಿತ್ರಗಳನ್ನು ಹಂಚಿಕೊಂಡಿದೆ.

"ಬೆಳವಣಿಗೆಯ ಅಂಕಣಗಳು: ಪುನರಾಭಿವೃದ್ಧಿ ಮಾಡಲಿರುವ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪ್ರಸ್ತಾವಿತ ವಿನ್ಯಾಸದ ಒಂದು ನೋಟ. " ಎಂದು ಟ್ವೀಟ್ ಮಾಡಿದೆ. ಈ ಚಿತ್ರಗಳು ರೈಲ್ವೆ ಸಚಿವಾಲಯವು ಹಂಚಿಕೊಂಡ ಚಿತ್ರಗಳು ತುಲನಾತ್ಮಕವಾಗಿ ಸಮಕಾಲೀನ ಕಟ್ಟಡಗಳು ಮತ್ತು ಒಟ್ಟಾರೆ ಕೋಣೆಯ ವಿನ್ಯಾಸವನ್ನು ತೋರಿಸುತ್ತದೆ.

ರೈಲಿನಲ್ಲಿ ವಾಟ್ಸಪ್ ಮೂಲಕ ಆಹಾರ ಬುಕ್ ಮಾಡುವುದು ಹೇಗೆ?ರೈಲಿನಲ್ಲಿ ವಾಟ್ಸಪ್ ಮೂಲಕ ಆಹಾರ ಬುಕ್ ಮಾಡುವುದು ಹೇಗೆ?

ಬೆಂಗಳೂರಿನ ಹೊರವಲಯದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ರೈಲ್ವೆ ನಿಲ್ದಾಣವು ಕಾಮಗಾರಿ ಪೂರ್ಣಗೊಂಡ ನಂತರ ಹೇಗೆ ಕಾಣುತ್ತದೆ ಎಂಬುದರ ಚಿತ್ರಗಳನ್ನು ಸಹ ಹಂಚಿಕೊಳ್ಳಲಾಗಿದೆ.

ರೈಲ್ವೆ ನಿಲ್ದಾಣದ ಪುನರಾಭಿವದ್ಧಿ ಯಾವಾಗ ಪೂರ್ಣ?

ರೈಲ್ವೆ ನಿಲ್ದಾಣದ ಪುನರಾಭಿವದ್ಧಿ ಯಾವಾಗ ಪೂರ್ಣ?

ವರದಿಗಳ ಪ್ರಕಾರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯು ಡಿಸೆಂಬರ್ 2023ರೊಳಗೆ ಪೂರ್ಣಗೊಳ್ಳಲಿದೆ. ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಭಾರತೀಯ ರೈಲ್ವೆಯು ಈಗಾಗಲೇ 1,215 ಆದರ್ಶ್ ನಿಲ್ದಾಣಗಳನ್ನು ಪೂರ್ಣಗೊಳಿಸಿದೆ ಎಂದು ಘೋಷಿಸಿದೆ.

1253 ನಿಲ್ದಾಣಗಳು ಆದರ್ಶ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿ

1253 ನಿಲ್ದಾಣಗಳು ಆದರ್ಶ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿ

ಆದರ್ಶ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿಗಾಗಿ ಗುರುತಿಸಲಾದ 1,253 ನಿಲ್ದಾಣಗಳಲ್ಲಿ ಇದುವರೆಗೆ 1,215 ಈಗಾಗಲೇ ಪೂರ್ಣಗೊಂಡಿದೆ. ಆದರ್ಶ್ ಸ್ಟೇಷನ್ ಯೋಜನೆಯಡಿಯಲ್ಲಿರುವ ಇತರ ನಿಲ್ದಾಣಗಳನ್ನು 2022-2023 ರ ಆರ್ಥಿಕ ವರ್ಷದಲ್ಲಿ ನಿರ್ಮಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

2009-10ರಲ್ಲಿ ಪ್ರಾರಂಭಿಸಲಾದ ಆದರ್ಶ್ ಯೋಜನೆ

2009-10ರಲ್ಲಿ ಪ್ರಾರಂಭಿಸಲಾದ ಆದರ್ಶ್ ಯೋಜನೆ

ಭಾರತದಲ್ಲಿನ ಉಪನಗರ ರೈಲು ನಿಲ್ದಾಣಗಳನ್ನು ನವೀಕರಿಸುವ ಗುರಿಯೊಂದಿಗೆ ಆದರ್ಶ್ ಯೋಜನೆಯನ್ನು 2009-10ರಲ್ಲಿ ಪ್ರಾರಂಭಿಸಲಾಯಿತು. "ಮಾದರಿ, ಆಧುನಿಕ ಮತ್ತು ಆದರ್ಶ್ ನಿಲ್ದಾಣ ಯೋಜನೆಯು ಭಾರತೀಯ ರೈಲ್ವೆ ನಿಲ್ದಾಣಗಳ ವರ್ಧನೆಗಾಗಿ ರೈಲ್ವೆ ಸಚಿವಾಲಯವು ರೂಪಿಸಿದ ಕೆಲವು ಉಪಕ್ರಮ," ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಆಗಸ್ಟ್ 5ರಂದು ತಿಳಿಸಿದ್ದರು.

ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಉದ್ಘಾಟನೆ

ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಉದ್ಘಾಟನೆ

ನೈಋತ್ಯ ರೈಲ್ವೆಯು ಬೆಂಗಳೂರಿನಲ್ಲಿ ಹೊಸ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅನ್ನು ಇತ್ತೀಚೆಗೆಷ್ಟೇ ಉದ್ಘಾಟಿಸಿತು. ಈ ಟರ್ಮಿನಲ್ ಅನ್ನು ಬೆಂಗಳೂರು ವಿಮಾನ ನಿಲ್ದಾಣದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ. ಏಳು ಪ್ಲಾಟ್‌ಫಾರ್ಮ್‌ಗಳು, ವಿಐಪಿ ಲಾಂಜ್, ಫುಡ್ ಕೋರ್ಟ್, ವಿಶಾಲವಾದ ಪಾರ್ಕಿಂಗ್ ಸ್ಥಳವನ್ನು ಒಳಗೊಂಡಂತೆ ಹಲವಾರು ಸೌಕರ್ಯಗಳನ್ನು ಈ ಟರ್ಮಿನಲ್ ಹೊಂದಿದೆ.

ಕಳೆದ 2021ರಲ್ಲಿ ಪೂರ್ಣಗೊಂಡ ಟರ್ಮಿನಲ್ ಅನ್ನು ಈ ವರ್ಷ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಔಪಚಾರಿಕವಾಗಿ ಉದ್ಘಾಟಿಸಿದರು. ನೈಋತ್ಯ ರೈಲ್ವೆಯು ಇಲ್ಲಿಂದ 30 ಜೋಡಿ ದೂರದ ರೈಲುಗಳನ್ನು ಸ್ಥಳಾಂತರಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
How Bengaluru Cantonment Railway Station will be redesigned; Look here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X