ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲಿ ಮನೆ ಖರೀದಿ ಇನ್ನು ಮುಂದೆ ದುಬಾರಿ: ವಸತಿ ಬೆಲೆಗಳು ಶೇಕಡ 5 ರಷ್ಟು ಹೆಚ್ಚಳ

|
Google Oneindia Kannada News

ಕೋವಿಡ್ ಲಾಕ್‌ಡೌನ್ ನಂತರ ದೇಶದ ಪ್ರಮುಖ ವ್ಯವಹಾರ ವಲಯಗಳಲ್ಲಿ ಸುಧಾರಣೆ ಕಂಡುಬಂದಿದೆ. ಕೋವಿಡ್‌ ಹೊಡೆತದಿಂದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಕೂಡ ಹೊಡೆತ ಬಿದ್ದಿತ್ತು. ಈಗ ಎಲ್ಲಾ ವಲಯಗಳು ಸುಧಾರಣೆ ಕಾಣುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮ ಕೂಡ ಸುಧಾರಣೆಯತ್ತ ಮುಖ ಮಾಡಿದೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 8 ನಗರಗಳಲ್ಲಿ ವಸತಿಗಳ ದರದಲ್ಲಿ ಹೆಚ್ಚಳವಾಗಿದೆ. 2022ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ದೆಹಲಿ-ಎನ್‌ಸಿಆರ್, ಎಂಎಂಆರ್, ಕೋಲ್ಕತ್ತಾ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಅಹಮದಾಬಾದ್ ನಗರಗಳಲ್ಲಿ ವಸತಿ ಬೆಲೆಗಳು ಶೇಕಡ 5 ರಷ್ಟು ಏರಿಕೆ ಕಂಡಿವೆ. ದೆಹಲಿ-ಎನ್‌ಸಿಆರ್ ವಸತಿ ಬೆಲೆಗಳಲ್ಲಿ ಗರಿಷ್ಠ ಏರಿಕೆಯಾಗಿದ್ದು, ಶೇಕಡಾ 10 ರಷ್ಟು ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ. ಇನ್ನು ಮುಂದೆ ಈ ಎಂಟು ನಗರಗಳಲ್ಲಿ ಅಪಾರ್ಟ್‌ಮೆಂಟ್, ಮನೆ ಖರೀದಿ ದುಬಾರಿಯಾಗಲಿದ್ದು, ಖರೀದಿದಾರರಿಗೆ ಹೆಚ್ಚಿನ ಹೊರೆ ಬೀಳಲಿದೆ.

ರಿಯಲ್‌ ಎಸ್ಟೇಟ್‌ ಕಂಪೆನಿಗಳ ಅಪೆಕ್ಸ್‌ ಸಂಸ್ಥೆಯಾದ ಕ್ರೆಡಾಯ್‌, ರಿಯಲ್‌ ಎಸ್ಟೇಟ್‌ ಕನ್ಸಲ್ಟೆಂಟ್‌ ಕಂಪನಿ ಕೊಲಿಯರ್ಸ್‌ ಇಂಡಿಯಾ ಮತ್ತು ಡೇಟಾ ಅನಾಲಿಟಿಕ್‌ ಕಂಪನಿ ಲಿಯಾಸ್‌ ಫೋರಾಸ್‌ ಜಂಟಿಯಾಗಿ "ಹೌಸಿಂಗ್‌ ಪ್ರೈಸ್‌ ಟ್ರ್ಯಾಕರ್‌ ರಿಪೋರ್ಟ್‌-2022" ಬಿಡುಗಡೆ ಮಾಡಿವೆ.

ರೆಪೋ ದರ ಹೆಚ್ಚಳ ಪರಿಣಾಮ: ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಳರೆಪೋ ದರ ಹೆಚ್ಚಳ ಪರಿಣಾಮ: ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಳ

1999 ರಲ್ಲಿ ಸ್ಥಾಪಿತವಾದ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಕ್ರೆಡೈ) ಭಾರತದಲ್ಲಿನ ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಉನ್ನತ ಸಂಸ್ಥೆಯಾಗಿದೆ.

 ಬೆಂಗಳೂರಿನ ವಸತಿ ಬೆಲೆಗಳು ಶೇಕಡ 4 ರಷ್ಟು ಏರಿಕೆ

ಬೆಂಗಳೂರಿನ ವಸತಿ ಬೆಲೆಗಳು ಶೇಕಡ 4 ರಷ್ಟು ಏರಿಕೆ

ಕೊರೊನಾ ಸಂಕಷ್ಟದ ನಂತರ ಬೆಂಗಳೂರು ರಿಯಲ್ ಸ್ಟೇಟ್ ಉದ್ಯಮ ಸಾಕಷ್ಟು ಸುಧಾರಣೆ ಕಂಡಿದೆ. ಹೆಚ್ಚಾದ ಬೇಡಿಕೆಯೊಂದಿಗೆ ವಸತಿ, ಅಪಾರ್ಟ್‌ಮೆಂಟ್‌ಗಳು, ಮನೆಗಳ ಬೆಲೆಗಳು ಶೇಕಡ 4 ರಷ್ಟು ಹೆಚ್ಚಳವಾಗಿದೆ. ವರದಿಗಳ ಪ್ರಕಾರ ಬೆಂಗಳೂರಿಲ್ಲಿ ವಸತಿಗಳ ಬೆಲೆ ಪ್ರತಿ ಚದರ ಅಡಿಗೆ ಸರಾಸರಿ 7,848 ರುಪಾಯಿಗಳಿಗೆ ಹೆಚ್ಚಳವಾಗಿದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ.

ಕೋವಿಡ್ ಲಾಕ್‌ಡೌನ್ ಸಂಕಷ್ಟದಿಂದ ಸುಧಾರಿಸಿಕೊಂಡ ನಂತರ ಬೆಂಗಳೂರಿನಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗುತ್ತಿರುವುದು. ಹೊಸ ಉದ್ಯಮಗಳು ಆರಂಭವಾಗುತ್ತಿರುವುದರಿಂದ ಇಲ್ಲಿ ವಸತಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

 ಬೆಂಗಳೂರಿನಲ್ಲಿ ಮಾರಾಟವಾಗದ ವಸತಿ ಪ್ರಮಾಣ ಕುಸಿತ

ಬೆಂಗಳೂರಿನಲ್ಲಿ ಮಾರಾಟವಾಗದ ವಸತಿ ಪ್ರಮಾಣ ಕುಸಿತ

2022ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಾರಾಟವಾಗದ ವಸತಿ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 2019ರ ಆರಂಭದಿಂದಲೂ ಬೆಂಗಳೂರಿನಲ್ಲಿ ವಸತಿ ದಾಸ್ತಾನು ಪ್ರಮಾಣ ನಿರಂತರವಾಗಿ ಕುಸಿತ ಕಂಡುಬರುತ್ತಿದೆ. ಪ್ರಸ್ತುತ ಕಳೆದ ಮೂರು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. ಬೆಂಗಳೂರಿನ ನಗರ ಭಾಗದ ಬಹುತೇಕ ವಸತಿಗಳು ಮಾರಾಟವಾಗಿವೆ, ಮಾರಾಟ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ.

ಬೆಂಗಳೂರಿನಲ್ಲಿ ಮಾರಾಟವಾಗದ ಬಹುತೇಕ ವಸತಿಗಳು ನಗರ ಪ್ರದೇಶದಿಂದ ದೂರದಲ್ಲಿವೆ. ಉತ್ತಮ ಬೇಡಿಕೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಬೆಂಗಳೂರಿನ ಹೊರ ಭಾಗದಲ್ಲಿ ವಸತಿ ಸಮುಚ್ಛಯ ನಿರ್ಮಾಣಕ್ಕೆ ಹೆಚ್ಚಿನ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

 ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಬೆಲೆ ಹೆಚ್ಚಳ

ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಬೆಲೆ ಹೆಚ್ಚಳ

2022 ರ ಎರಡನೇ ತ್ರೈಮಾಸಿಕದ (ಏಪ್ರಿಲ್-ಜೂನ್) ಅವಧಿಯಲ್ಲಿ, ಭಾರತದಲ್ಲಿ ವಸತಿ ಬೆಲೆಗಳು ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರಿದೆ, ಬೇಡಿಕೆಯೊಂದಿಗೆ ಪೂರೈಕೆಯು ಸಮತೋಳನ ಕಾಯ್ದುಕೊಂಡಿದೆ ಎಂದು ವರದಿ ತಿಳಿಸಿದೆ.

ದೆಹಲಿ-ಎನ್‌ಸಿಆರ್ ಆಸ್ತಿ ಮಾರುಕಟ್ಟೆಯಲ್ಲಿ ವಸತಿ ಬೆಲೆಗಳು ಪ್ರತಿ ಚದರ ಅಡಿಗೆ 7,434 ರುಪಾಯಿಗೆ ಶೇಕಡ 10 ರಷ್ಟು ವಾರ್ಷಿಕ ಹೆಚ್ಚಳ ಕಂಡಿವೆ.

ದೇಶದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿರುವ ಮುಂಬೈ ಮೆಟ್ರೋಪಾಲಿಟನ್ ವಲಯ (ಎಂಎಂಆರ್)ದಲ್ಲಿ ಪ್ರತಿ ಚದರ ಅಡಿಗೆ 19,677 ರುಪಾಯಿ ಬೆಲೆ ಇದ್ದು, ಶೇಕಡ 1ರಷ್ಟು ಮಾತ್ರ ಏರಿಕೆ ಕಂಡಿದೆ.

 ಹಲವು ಪ್ರಮುಖ ನಗರಗಳಲ್ಲಿ ವಸತಿ ಬೆಲೆಗಳು

ಹಲವು ಪ್ರಮುಖ ನಗರಗಳಲ್ಲಿ ವಸತಿ ಬೆಲೆಗಳು

ಮಾಹಿತಿಯ ಪ್ರಕಾರ, ಈ ಕ್ಯಾಲೆಂಡರ್ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅಹಮದಾಬಾದ್‌ನಲ್ಲಿನ ವಸತಿ ಬೆಲೆಗಳು ವರ್ಷದಿಂದ ವರ್ಷಕ್ಕೆ ಪ್ರತಿ ಚದರ ಅಡಿಗೆ 5,927 ರುಪಾಯಿಗೆ ಏರಿಕೆಯಾಗಿದೆ.

ಚೆನ್ನೈ ನಗರದಲ್ಲಿ ಒಂದು ಪ್ರತಿ ಚದರ ಅಡಿಗೆ 7,129 ರುಪಾಯಿಗೆ ಏರಿಕೆ ಕಂಡಿದೆ. ಐಟಿ ವಲಯದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿರುವ ಹೈದರಾಬಾದ್‌ನಲ್ಲಿ ವಸತಿ ದರಗಳು ಶೇಕಡಾ 8 ರಷ್ಟು ಹೆಚ್ಚಾಗಿದೆ. ಪ್ರಸ್ತುತ ನಗರದಲ್ಲಿ ಪ್ರತಿ ಚದರ ಅಡಿಗೆ 9,218 ರುಪಾಯಿಗಳಿದೆ.

ಕೋಲ್ಕತ್ತಾದಲ್ಲಿ ಕೂಡ ವಸತಿ ಬೆಲೆಗಳು ಶೇಕಡಾ 8 ರಷ್ಟು ಏರಿಕೆಯಾಗಿದ್ದು ಏರಿಕೆಯ ನಂತರ ಪ್ರಸ್ತುತ ವಸತಿ ಬೆಲೆ 6,362 ರುಪಾಯಿಗಳಾಗಿದೆ.

 ಬ್ಯಾಂಕ್‌ ಬಡ್ಡಿದರ ಹೆಚ್ಚಳ

ಬ್ಯಾಂಕ್‌ ಬಡ್ಡಿದರ ಹೆಚ್ಚಳ

ಕ್ರೆಡೈ ರಾಷ್ಟ್ರೀಯ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಮಾತನಾಡಿ, ಕೆಲವು ಬಲವಾದ ಮೂಲಭೂತ ಅಂಶಗಳನ್ನು ಮಾತ್ರವಲ್ಲದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ಮತ್ತು ಕಾರ್ಮಿಕರ ವೇತನಗಳ ಹೆಚ್ಚಳದಿಂದ ವಸತಿ ಬೆಲೆಗಳ ಏರಿಕೆಗೆ ಕಾರಣವಾಗಿದೆ.

ಗೃಹ ಸಾಲಗಳ ಮೇಲಿನ ಬಡ್ಡಿದರಗಳ ಹೆಚ್ಚಳದಿಂದ ವಸತಿಗಳ ಬೇಡಿಕೆ ಮೇಲೆ ಪರಿಣಾಮ ಬೀರಿಲ್ಲ. ಪರಿಣಾಮ ಕನಿಷ್ಠವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಮಾರಾಟ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

"ಕಳೆದ ಒಂದು ದಶಕದಲ್ಲಿ ವಸತಿ ಬೆಲೆಗಳು ಹೆಚ್ಚು ಏರಿಕೆ ಕಂಡಿಲ್ಲ. ಬಿಲ್ಡರ್‌ಗಳು ಅತ್ಯಂತ ಕಡಿಮೆ ಮಾರ್ಜಿನ್‌ನಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು, ಮನೆಗಳ ಬೆಲೆ ಹೆಚ್ಚಳ ಮಾಡುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಬೇರೆ ದಾರಿಯಿಲ್ಲ. ಆದರೆ, ದೊಡ್ಡ ಮತ್ತು ವಿಶ್ವಾಸಾರ್ಹ ಬಿಲ್ಡರ್ ಕಂಪನಿಗಳು ಇತರರಿಗಿಂತ ಉತ್ತಮ ಬೇಡಿಕೆ ಹೊಂದಿದ್ದಾರೆ," ಎಂದು ಎಐಪಿಎಲ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪಂಕಜ್ ಪಾಲ್ ಹೇಳಿದ್ದಾರೆ.

Recommended Video

ಮೆಟ್ರೋ ರೈಲಿನಲ್ಲಿ ಸೀಟ್ ಬಿಡ್ಲಿಲ್ಲ ಅಂತ ಮಹಿಳೆಯರ ಕಿತ್ತಾಟದ ವಿಡಿಯೋ ವೈರಲ್ | Oneindia Kannada

English summary
During the April-June quarter 2022, housing prices in India have surpassed pre-pandemic levels, indicating robust demand and supply that is well-aligned with the demand. Revival in housing demand and rise in construction cost have led to a 5 per cent average annual increase in residential property prices across eight major cities Including Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X