ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ನಿರ್ವಹಣೆಗೆ ಮನೆ -ಮನೆ ಸಮೀಕ್ಷೆ; ಎಲ್ಲಿವರೆಗೂ ಬಂದಿದೆ ಮಾಹಿತಿ ಸಂಗ್ರಹಣೆ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೆಂಗಳೂರು, ಆಗಸ್ಟ್‌ 21: ರಾಜ್ಯದಲ್ಲಿ ಕೊರೊನಾ ಸೋಂಕಿನ ಸೂಕ್ತ ನಿರ್ವಹಣೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ ಮನೆ ಮನೆ ಸಮೀಕ್ಷೆಯೂ ಒಂದಾಗಿದೆ. ಆಗಸ್ಟ್‌ 16ರಂದು ಆರಂಭವಾದ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಇದುವರೆಗೆ 29 ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿ ಸಮೀಕ್ಷೆಯು ಭಾರತದಲ್ಲೇ ಮೊದಲ ಬಾರಿ ನಡೆದಿದ್ದು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರು 54 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ನಾಗರಿಕರ ಆರೋಗ್ಯ, ಲಸಿಕೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿಕೊಂಡಿದ್ದಾರೆ.

Household Health Survey In Slowdown As Citizens Decline Information

ಆದರೆ ಬಹುಸಂಖ್ಯಾತ ನಗರದಲ್ಲಿ ಸಮೀಕ್ಷೆ ನಡೆಸುವುದು ಅಷ್ಟು ಸರಳವಾಗಿರಲಿಲ್ಲ. ಎಷ್ಟೋ ಮಂದಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರೆ ಆರೋಗ್ಯ ವಿಷಯಗಳನ್ನು ಹಂಚಿಕೊಳ್ಳಲು ನಿರಾಕರಿಸಿರುವುದು ಕಂಡುಬಂದಿದೆ. ಸಮೀಕ್ಷೆ ಸಂದರ್ಭ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಮೀಕ್ಷೆ ಕುರಿತು ಜನರಿಗೆ, ಕುಟುಂಬದವರಿಗೆ, ಅವರ ಮಾಹಿತಿ ಸಂಗ್ರಹಣೆ ಕುರಿತು ಅವರನ್ನು ಮನವೊಲಿಸಲು ಸಮೀಕ್ಷೆ ಕೈಗೊಂಡಿರುವವರಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಡಿ ತಿಳಿಸಿದ್ದಾರೆ. ಸಮೀಕ್ಷೆ ನಡೆಸುವವರಿಗೆ ಜನರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದು ನಗರದಲ್ಲಿ ಕೊರೊನಾ ನಿರ್ವಹಣೆಗೆ ಬಹಳಷ್ಟು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಲಸಿಕೆ ತೆಗೆದುಕೊಂಡ್ರಾ?; ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆಕೋವಿಡ್ ಲಸಿಕೆ ತೆಗೆದುಕೊಂಡ್ರಾ?; ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆ

ಕಾಗದರಹಿತವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸರ್ವೇ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

50 ಮನೆಗಳಲ್ಲಿ ಸಮೀಕ್ಷೆ ನಡೆಸಬೇಕೆಂದು ಗುರಿ ಹಾಕಿದ್ದಲ್ಲಿ ಕೇವಲ 35-40 ಮನೆಗಳ ಸಮೀಕ್ಷೆ ನಡೆಯುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ಹೀಗಾಗಿ ಸಮಯ ಹಿಡಿಯುತ್ತಿದೆ ಎಂದು ರಣದೀಪ್ ಮಾಹಿತಿ ನೀಡಿದ್ದಾರೆ.

ಯಲಹಂಕ, ಆರ್ ಆರ್ ನಗರ, ಮಹದೇವಪುರ, ದಾಸರಹಳ್ಳಿ, ಬೊಮ್ಮನಹಳ್ಳಿಯಲ್ಲಿ ಸರ್ವೇ ನಡೆಸಲಾಗಿದೆ. ಒಟ್ಟಾರೆ 84% ಸರ್ವೇ ಫಲಿತಾಂಶ ದೊರೆತಿದೆ.

ಕೊರೊನಾ ಲಸಿಕೆ ಸಂಬಂಧ ಬಿಬಿಎಂಪಿಯಿಂದ ಮನೆ ಮನೆ ಸಮೀಕ್ಷೆ
ಕೊರೊನಾ ಲಸಿಕೆ ಜುಲೈ ತಿಂಗಳಿನಲ್ಲಿ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಅಭಿಯಾನ ಆರಂಭಿಸಿದೆ. ನಗರದಲ್ಲಿ ಯಾರು ಲಸಿಕೆ ಪಡೆದಿದ್ದಾರೆ, ಯಾರು ಪಡೆದಿಲ್ಲ? ಎಂಬ ಮಾಹಿತಿ ಸಂಗ್ರಹ ಮಾಡಲು ಬಿಬಿಎಂಪಿ ಮನೆ-ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45+ ವಯೋಮಿತಿಯ ಜನರಿಗೆ ಲಸಿಕೆ ನೀಡಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಪಿಎಚ್‌ಸಿಯಲ್ಲಿ ದಿನಕ್ಕೆ 200 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದನ್ನು 300ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿಯೇ ಲಸಿಕೆ ನೀಡಲಾಗುತ್ತಿದೆ. ಇದುವರೆಗೂ 1.8 ಲಕ್ಷ ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಮಾಹಿತಿ ನೀಡಿದ್ದರು.

Household Health Survey In Slowdown As Citizens Decline Information

Recommended Video

ಈತನ ಎಂಟ್ರಿಯಿಂದ ಪವರ್ಫುಲ್ ಆಗಲಿದೆ ಟೀಮ್ ಇಂಡಿಯಾ ಬ್ಯಾಟಿಂಗ್ | Oneindia Kannada

ಚಿಕಿತ್ಸೆಗೆ ಹೊಸ ಯೋಜನೆ: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಕೊರೊನಾ ನಿಯಂತ್ರಿಸುವ ಗುರಿಯೊಂದಿಗೆ ದೇಶದಲ್ಲೇ ಮೊದಲ ಬಾರಿಗೆ 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಎಲ್ಲರಿಗೂ ಆಸ್ಪತ್ರೆಗೆ ಹೋಗುವುದು ಸಾಧ್ಯವಾಗುವುದಿಲ್ಲ. ಆದರೆ ಈ ಪ್ರಯತ್ನದ ಮೂಲಕ ಅವರೆಲ್ಲರನ್ನು ತಲುಪುವ ಕೆಲಸವಾಗಲಿದೆ. ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದರು.

English summary
More than 29,000 households have been covered so far in the door-to-door health survey which began in the city on August 16, a BBMP official said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X