ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ಸಮಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಜಾಸ್ತಿ

|
Google Oneindia Kannada News

ಬೆಂಗಳೂರು, ಜು. 26 : ಬೆಂಗಳೂರು ನಿವಾಸಿಗಳಿಗೆ ಎಚ್ಚರಿಕೆ ಗಂಟೆ. ಮನೆ ಮುಂದೆ ನಿಲ್ಲಿಸುವ ವಾಹನಗಳ ಬಗ್ಗೆ ಎಚ್ಚರಿಕೆ ವಹಿಸಿ. ಮನೆಗೆ ಬೀಗ ಹಾಕಿಕೊಂಡು ಹೋಗುವ ಮುನ್ನ ಮುಂಜಾಗ್ರತಾ ಕ್ರಮ ವಹಿಸಿ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಮನೆಗಳ್ಳರು ಹಾಗೂ ವಾಹನ ಕಳ್ಳರು ಪೊಲೀಸರ ಕೈಗೆ ಸಿಗುತ್ತಿಲ್ಲ. ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ವರದಿಯಾಗಿರುವ ಮನೆ ಕಳ್ಳತನ ಹಾಗೂ ವಾಹನ ಕಳುವು ಪ್ರಕರಣ ಪತ್ತೆ ಮಾಡಲಾಗದೇ ಪೊಲೀಸರೇ ಕಂಗಾಲಾಗಿದ್ದಾರೆ.

ಬೈಕ್ ಚೋರರ ತಲೆನೋವು

ಬೈಕ್ ಚೋರರ ತಲೆನೋವು

ಕೊರೊನಾ ಲಾಕ್ ಡೌನ್ ಇದ್ದರೂ ಬೆಂಗಳೂರಿನಲ್ಲಿ 777 ಮನೆ ಕಳವು ವರದಿಯಾಗಿವೆ. ಅದರಲ್ಲಿ ಕೇವಲ 251 ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ 526 ಮನೆ ಕಳ್ಳತನ ಪ್ರಕರಣ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅದೇ ರೀತಿ ಬೆಂಗಳೂರಿನಲ್ಲಿ ಕಳೆದ ಏಳು ತಿಂಗಳಲ್ಲಿ 2098 ವಾಹನ ಕಳುವು ವರದಿಯಾಗಿದ್ದು, ಕೇವಲ 346 ಪ್ರಕರಣ ಪತ್ತೆ ಮಾಡಲಾಗಿದೆ. ಸುಮಾರು 1752 ವಾಹನ ಕಳುವು ಪ್ರಕರಣ ಬಾಕಿ ಉಳಿದುಕೊಂಡಿವೆ. ಹೀಗಾಗಿ ಬೆಂಗಳೂರು ಜನ ಮನೆ ಬಿಟ್ಟು ಹೋಗುವ ಮುನ್ನ ಎಚ್ಚರಕೆ ವಹಿಸಿ. ಮನೆ ಕಳ್ಳತನ ಆಗದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಒಳಿತು.

 ಸೈಬರ್ ಕ್ರೈಂ ರಾಜಧಾನಿ ಆಯ್ತು

ಸೈಬರ್ ಕ್ರೈಂ ರಾಜಧಾನಿ ಆಯ್ತು

ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಮುಗ್ಧ ಜನರನ್ನು ಟಾರ್ಗೆಟ್ ಮಾಡಿ ನಾನಾ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ವಿವಿಧ ಅಮಿಷಗಳನ್ನು ಒಡ್ಡಿ ವಂಚನೆ ಮಾಡುತ್ತಿದ್ದು, ಕಳೆದ 7 ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 10,544 ಕೇಸು ದಾಖಲಾಗಿವೆ. ಇನ್ನು ಹಣ ಕಳೆದುಕೊಂಡ ಎಷ್ಟೋ ಮಂದಿ ದೂರು ದಾಖಲಿಸುವುದಿಲ್ಲ. ಹೀಗಾಗಿ ಪೊಲೀಸರ ಅಂಕಿಗಳಿಗಿಂತ ಹೆಚ್ಚು ಸೈಬರ್ ವಂಚನೆ ಪ್ರಕರಣ ದಾಖಲಾಗಿವೆ. ಅದರಲ್ಲಿ ಬಹುಏಕ 5580 ಸೈಬರ್ ಅಪರಾಧ ಪ್ರಕರಣ ಪತ್ತೆ ಮಾಡಿದ್ದಾರೆ.

ಏಳು ತಿಂಗಳಲ್ಲಿ 82 ಕೊಲೆ ವರದಿ

ಏಳು ತಿಂಗಳಲ್ಲಿ 82 ಕೊಲೆ ವರದಿ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಏಳ ತಿಂಗಳಲ್ಲಿ 82 ಕೊಲೆ ಪ್ರಕರಣ ದಾಖಲಾಗಿದ್ದು, 80 ಕೇಸು ಪತ್ತೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ವರದಿಯಾಗುತ್ತಿರುವ ಅಷ್ಟು ಕೊಲೆ ಪ್ರಕರಣ ಪತ್ತೆ ಮಾಡುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ಅವಧಿಯಲ್ಲಿ ದಾಖಲಾಗಿರುವ 21 ಡಕಾಯಿತಿ ಪ್ರಕರಣಗಳಲ್ಲಿ 21 ನ್ನು ಬೇಧಿಸಿದ್ದಾರೆ. ಅಷ್ಟು ಆರೋಪಿಗಳನ್ನು ಎಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅವಧಿಯಲ್ಲಿ ವರದಿಯಾದ 87 ಸರಗಳ್ಳತನ ಪ್ರಕರಣಲ್ಲಿ 64 ಪತ್ತೆ ಮಾಡಿದ್ದಾರೆ.

Recommended Video

BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada
ಏಳು ತಿಂಗಳಲ್ಲಿ 300 ಲೈಂಗಿಕ ಕಿರುಕುಳ

ಏಳು ತಿಂಗಳಲ್ಲಿ 300 ಲೈಂಗಿಕ ಕಿರುಕುಳ

ಕೊರೊನಾ ಲಾಕ್ ಡೌನ್ ವೇಳೆ ಮಹಿಳೆ ಮೇಲಿನ ದೌರ್ಜನ್ಯ ಹಾಗೂ ಅಪರಾಧಗಳು ಹೆಚ್ಚಾಗಿವೆ. ಮಹಿಳೆಯರ ಮೇಲೆ ಹಲ್ಲೆ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 207 ಕೇಸು ದಾಖಲಾಗಿವೆ. ಅದರಲ್ಲಿ 178 ಕೇಸು ಪತ್ತೆ ಮಾಡಿದ್ದು 29 ಪ್ರಕರಣ ಬಾಕಿ ಉಳಿದುಕೊಂಡಿವೆ. ಇನ್ನು 304 ಮಂದಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, 189 ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಇನ್ನೂ 115 ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಬೇಕಿದೆ.

ಅಂಕಿ ಅಂಶಗಳು:

ಸರಗಳವು

ವರದಿ 87 ಪತ್ತೆ : 64 ಕೇಸ್ ಬಾಕಿ 23

ರಾಬರಿ

ವರದಿ 219 ಪತ್ತೆ 162 ಬಾಕಿ 57

ಕಿಡ್ನಾಪ್ & ಮಿಸ್ಸಿಂಗ್

ವರದಿ 413 ಪತ್ತೆ 244 ಬಾಕಿ 169


ಲೈಂಗಿಕ ಕಿರುಕುಳ

ವರದಿ 304 ಪತ್ತೆ 189 ಬಾಕಿ 115

ಅತ್ಯಾಚಾರ

ವರದಿ 59 ಪತ್ತೆ53 ಬಾಕಿ 3

ಮಹಿಳೆ ಮೇಲೆ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳ

ವರದಿ 207 ಪತ್ತೆ 178 ಬಾಕಿ 29

ಸಾಮಾನ್ಯ ಕಳವು

ವರದಿ 521 ಪತ್ತೆ 147 ಬಾಕಿ 374


ಮನೆಗಳವು

ವರದಿ 777 ಪತ್ತೆ 251 ಬಾಕಿ 526

ವಾಹನ ಕಳವು

ವರದಿ 2098 ಪತ್ತೆ 346 ಬಾಕಿ 1752

English summary
Bengaluru police fail to track down vehicle thieves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X