ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಬಡಿದಾಡಿಕೊಂಡ ಮನೆ ಮಾಲೀಕ, ಬಾಡಿಗೆದಾರ!

|
Google Oneindia Kannada News

ಬೆಂಗಳೂರು, ನವೆಂಬರ್ 09: ಮನೆ ಮಾಲೀಕ ಮತ್ತು ಬಾಡಿಗೆದಾರ ಬಡಿದಾಡಿಕೊಂಡ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಿದ್ದು, ಪ್ರಕರಣ ಈಗ ಆರ್. ಟಿ. ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹೆಚ್‌. ಎಂ. ಟಿ. ಲೇಔಟ್‌ನಲ್ಲಿ ಸೋಮವಾರ ಮನೆ ಮಾಲೀಕ ಮೊಹಮದ್ ಇಲಿಯಾಸ್ ಮತ್ತು ಬಾಡಿಗೆದಾರ ಮೊಹಮ್ಮದ್ ನಾದ್ವಿ ನಡುವೆ ಜಗಳ ನಡೆದಿದೆ. ಮನೆ ಬಾಡಿಗೆ ಕೊಡುವ ವಿಚಾರ, ಖಾಲಿ ಮಾಡುವ ವಿಚಾರದಲ್ಲಿ ಇಬ್ಬರು ಬಡಿದಾಡಿಕೊಂಡಿದ್ದಾರೆ.

ಹೊಸ ರಿಯಲ್ ಎಸ್ಟೇಟ್‌ ಯೋಜನೆಗೆ ತಡೆ ಹಾಕಿದ ಕೋವಿಡ್! ಹೊಸ ರಿಯಲ್ ಎಸ್ಟೇಟ್‌ ಯೋಜನೆಗೆ ತಡೆ ಹಾಕಿದ ಕೋವಿಡ್!

ಮೊಹಮದ್ ಇಲಿಯಾಸ್ ಮನೆಯಲ್ಲಿ ಮೊಹಮ್ಮದ್ ನಾದ್ವಿ ನಾಲ್ಕು ವರ್ಷಗಳಿಂದ ಬಾಡಿಗೆಗೆ ಇದ್ದಾರೆ. ಕೋವಿಡ್ ಲಾಕ್ ಡೌನ್ ಪರಿಣಾಮ ಮೊಹಮ್ಮದ್ ನಾದ್ವಿ ಕೆಲಸಕ್ಕೆ ಹೋಗಲಾಗದೆ ಬಾಡಿಗೆ ಕಟ್ಟಿರಲಿಲ್ಲ. ಆದರೆ ಇಲಿಯಾಸ್ ಬಾಡಿಗೆ ಕೊಡುವಂತೆ ಪೀಡಿಸುತ್ತಿದ್ದ.

ಬೆಳಗಾವಿ ವಿಡಿಯೋ; ಬಾಡಿಗೆ ಕೊಡದಿದ್ದಕ್ಕೆ ಗಾಳಿಯಲ್ಲಿ ಗುಂಡು! ಬೆಳಗಾವಿ ವಿಡಿಯೋ; ಬಾಡಿಗೆ ಕೊಡದಿದ್ದಕ್ಕೆ ಗಾಳಿಯಲ್ಲಿ ಗುಂಡು!

 House Owner Tenant Clash Over Rent Complaint Filed

ಬಾಡಿಗೆ ಕೊಡು ಇಲ್ಲವೇ ಮನೆ ಖಾಲಿ ಮಾಡು ಎಂದು ಮೊಹಮದ್ ಇಲಿಯಾಸ್ ಗಲಾಟೆ ಮಾಡಿದ್ದಾನೆ. ಆಗ ಇಬ್ಬರ ನಡುವೆ ಜಗಳ ನಡೆದಿದೆ. ಮೊಹಮ್ಮದ್ ನಾದ್ವಿ ಕೋರ್ಟ್‌ಗೆ ಹೋಗುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಆಗ ಇಲಿಯಾಸ್ ಹಲ್ಲೆ ಮಾಡಿದ್ದಾನೆ.

ವೈದ್ಯರಿಗೆ ಬಾಡಿಗೆ ಮನೆ ತೆರವು ಮಾಡಿ ಎನ್ನುತ್ತಿರುವ ಮನೆ ಮಾಲೀಕರು!ವೈದ್ಯರಿಗೆ ಬಾಡಿಗೆ ಮನೆ ತೆರವು ಮಾಡಿ ಎನ್ನುತ್ತಿರುವ ಮನೆ ಮಾಲೀಕರು!

ಮೊಹಮ್ಮದ್ ನಾದ್ವಿ ಮತ್ತು ಇಲಿಯಾಸ್ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸ್ಥಳೀಯರು ಈ ಕುರಿತು ಆರ್. ಟಿ. ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋದರು.

ಮೊಹಮ್ಮದ್ ನಾದ್ವಿ ಮತ್ತು ಇಲಿಯಾಸ್ ದೂರು ನೀಡಿದ್ದು, ಆರ್. ಟಿ. ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಠಾಣೆಯಲ್ಲಿಯೇ ಇಬ್ಬರ ವಿಚಾರಣೆಯನ್ನು ನಡೆಸುತ್ತಿದ್ದಾರೆ.

Recommended Video

BJP ಸಿಬಿಐ ನಾ miss use ಮಾಡ್ತಿದಾರೆ!! | Oneindia Kannada

ಕೋವಿಡ್ ಲಾಕ್ ಡೌನ್ ಬಳಿಕ ಬೆಂಗಳೂರು ನಗರದಲ್ಲಿ ನೂರಾರು ಮನೆಗಳು ಖಾಲಿ ಇವೆ. ಲಾಕ್ ಡೌನ್ ಬಳಿಕ ಆರ್ಥಿಕ ಸಂಕಷ್ಟ ಉಂಟಾದ ಕಾರಣ ಜನರು ಸಹ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ.

English summary
Bengaluru house owner and tenant tenant were booked after quarrel over payment of rent. Rt Nagar police probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X