ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೆಸಾರ್ಟ್ ಲೈಸೆನ್ಸ್ ನವೀಕರಿಸದ ಆದಿತ್ಯಾ ಆಳ್ವಾ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15 : ಸಿಸಿಬಿ ಪೊಲೀಸರು ಆದಿತ್ಯ ಆಳ್ವಾ ಒಡೆತನದ ಹೌಸ್ ಆಫ್ ಲೈಫ್ ರೆಸಾರ್ಟ್‌ ಮೇಲೆ ದಾಳಿ ನಡೆಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆದಿತ್ಯ ಆಳ್ವಾ 6ನೇ ಆರೋಪಿ. ಆದರೆ, ಅವರು ತಲೆಮರೆಸಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ ಸಿಸಿಬಿ ಪೊಲೀಸರ ತಂಡ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್ ರೆಸಾರ್ಟ್‌ ಮೇಲೆ ದಾಳಿ ಮಾಡಿದೆ. ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. 2018ರಲ್ಲಿಯೇ 4 ಎಕರೆ ಪ್ರದೇಶದಲ್ಲಿರುವ ಈ ರೆಸಾರ್ಟ್ ಲೈಸೆನ್ಸ್ ಮುಗಿದಿತ್ತು.

ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ ಡ್ರಗ್ ಪ್ರಕರಣ; ಆದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ದಾಳಿ

ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ. ಕಿರಣ್ ಕಾರ್ತಿಕ್ ಎಂಬುವವರ ಹೆಸರಿನಲ್ಲಿ ರೆಸಾರ್ಟ್ ಟ್ರೇಡ್ ಲೈಸೆನ್ಸ್ ಇದೆ. ರೆಸಾರ್ಟ್, ಹೋಟೆಲ್ ಮತ್ತು ರೆಸ್ಟೋರೆಂಟ್ ನಡೆಸಲು ಈ ಪ್ರದೇಶದಕ್ಕೆ ಬಿಬಿಎಂಪಿಯಿಂದ ಲೈಸೆನ್ಸ್ ಪಡೆಯಲಾಗಿತ್ತು.

ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು? ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು?

House of Life License Expired In 2018

2018ರಲ್ಲಿಯೇ ರೆಸಾರ್ಟ್ ಲೈಸೆನ್ಸ್ ಮುಕ್ತಾಯವಾಗಿದೆ. ಆದರೆ, ಲೈಸೆನ್ಸ್ ನವೀಕರಣ ಮಾಡಿರಲಿಲ್ಲ. ಆದರೆ, ಕಳೆದ ವಾರದ ತನಕವೂ ರೆಸಾರ್ಟ್‌ನಲ್ಲಿ ಪಾರ್ಟಿಗಳನ್ನು ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಈಗ ಸ್ಥಳಕ್ಕೆ ಧಾವಿಸಿದ್ದಾರೆ.

ನಟಿ ಸಂಜನಾ ಗಲ್ರಾನಿ ಮತ್ತೆ 3 ದಿನ ಸಿಸಿಬಿ ಪೊಲೀಸ್ ವಶಕ್ಕೆ ನಟಿ ಸಂಜನಾ ಗಲ್ರಾನಿ ಮತ್ತೆ 3 ದಿನ ಸಿಸಿಬಿ ಪೊಲೀಸ್ ವಶಕ್ಕೆ

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆದಿತ್ಯ ಆಳ್ವಾ 6ನೇ ಆರೋಪಿ. ಆದಿತ್ಯ ಆಳ್ವಾ ಸೆಪ್ಟೆಂಬರ್ 4ರಿಂದ ನಾಪತ್ತೆಯಾಗಿದ್ದಾರೆ. ಸಿಸಿಬಿ ಪೊಲೀಸರು ರೆಸಾರ್ಟ್‌ನಲ್ಲಿ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ.

ಮ್ಯಾನೇಜರ್ ವಶಕ್ಕೆ : ಹೌಸ್ ಆಫ್ ಲೈಫ್ ರೆಸಾರ್ಟ್‌ನಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ. ರೆಸಾರ್ಟ್ ಮ್ಯಾನೇಜರ್ ರಾಮದಾಸ್‌ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

English summary
CCB police conducting search at Aditya Alva's House of Life resort near Hebbal, Bengaluru. Aditya Alva is 6th accused in drug case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X