ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಾಯ್ಲೆಟ್ ನಲ್ಲಿ ಮಹಿಳಾ ಸಿಬ್ಬಂದಿಗಳ ಚಿತ್ರ ತೆಗೆದವನ ಬಂಧನ

|
Google Oneindia Kannada News

ಬೆಂಗಳೂರು, ಜನವರಿ 23: ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳ ಫೋಟೋಗಳನ್ನು ಮೊಬೈಲ್ ನಲ್ಲಿ ತೆಗೆಯುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.

24 ವರ್ಷ ವಯಸ್ಸಿ ಧರ್ಮೇಂದ್ರ ಕುಮಾರ್ ಯಾದವ್ ಬಂಧಿತ ಆರೋಪಿ. ಉತ್ತರ ಪ್ರದೇಶ ಮೂಲದ ಈತ ಇಂದಿರಾನಗರದಲ್ಲಿ ವಾಸವಾಗಿದ್ದ, ಇಂದಿರಾನಗರದ ೮೦ ಅಡಿ ರಸ್ತೆಯಲ್ಲಿರುವ ಪ್ರತಿಷ್ಠಿತ ಕಂಪನಿಗೆ ಈತ ಮೂರು ವರ್ಷದ ಹಿಂದೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ. ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿರುವ ವೇಳೆ ಮಹಿಳಾ ಟೆಕ್ಕಿಗಳು ನಾನಾ ಭಂಗಿಯಲ್ಲಿ ಕುಳಿತುಕೊಳ್ಳುತ್ತಿದ್ದರು.

ಇದನ್ನು ಮರೆಯಲ್ಲಿ ನಿಂತು ಧರ್ಮೇಂದ್ರ ಫೋಟೊ ತೆಗೆಯುತ್ತಿದ್ದ. ಈ ರೀತಿ ಮಾಡುವಾಗ ಮಹಿಳೆಯೊಬ್ಬರು ಗಮನಿಸಿದ್ದು, ಆತನ ಕೈಯಿಂದ ಮೊಬೈಲ್ ಕಿತ್ತು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವಾರು ಫೋಟೋಗಳು ಮೊಬೈಲ್ ನಲ್ಲಿ ಪತ್ತೆಯಾಗಿದೆ. ತಕ್ಚಣ ಆತನನ್ನು ಹಿಡಿದು ಕಂಪನಿಯ ಮ್ಯಾನೇಜರ್ ಮತ್ತು ಟೆಕ್ಕಿಯೊಬ್ಬರು ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಅತನನ್ನು ಬಂಧಿಸಿದ್ದಾರೆ.

House keeping staffer arrested for taking women's photos in toilet

ಸ್ವಚ್ಛತಾ ಸಿಬ್ಬಂದಿ ಆಗಿದ್ದ ಕಾರಣ ಮಹಿಳೆಯರ ಶೌಚಾಲಯಕ್ಕೂ ಆತನು ಹೋಗುತ್ತಿದ್ದ, ಅಲ್ಲಿಯೂ ಮೊಬೈಲ್ ಇಟ್ಟು, ಚಿತ್ರೀಕರಣ ಮಾಡಿರುವುದು ಮೊಬೈಲ್ ಪರಿಶೀಲನೆಗೆ ಒಳಪಡಿಸಿದಾಗ ತಿಳಿದಿದೆ. ಮೊಬೈಲ್ ನ್ನು ಫರೆನ್ಸಿಕ್ ಲ್ಯಾಭ್ ಗೆ ಕಳುಹಿಸಲಾಗಿದ್ದು, ಡಿಲೀಟ್ ಆಗಿರುವ ದೃಶ್ಯಗಳನ್ನೂ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
A- 24 year old house keeping staff of a private software firm in Indiranagar has been arrested for allegedly taking photos and videos of women workers on his mobile. Dharmendra kumar Yadav from Uttar Pradesh, was caught red-handed by a staff when he was clicking a picture of another woman employee busy at work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X