ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೃಹ ನಿರ್ಮಾಣ ದುಬಾರಿ: ಕಾದ ಕಬ್ಬಿಣ, ಸುಡುವ ಸಿಮೆಂಟ್!

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಮನೆ ಕಟ್ಟಿ ನೋಡಿ ಮದುವೆ ಮಾಡಿ ನೋಡು ಅಂತಾರೆ. ಯಾಕೆಂದರೆ ಮದುವೆ ಮಾಡುವುದು ಮನೆಯನ್ನು ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಮನೆಯನ್ನು ಕಟ್ಟಲು ಬೇಕಾದ ಸಾಮಗ್ರಿಗಳ ಬೆಲೆ ವಿಪರೀತ ಏರುಮುಖದಲ್ಲಿ ಸಾಗುತ್ತಿರುವುದು ಮನೆಕಟ್ಟುವರ ಆಸೆಗೆ ತಣ್ಣೀರು ಎರಚುವಂತಾಗಿದೆ. ಈಗಾಗಲೇ ಮನೆಗೆ ಕಟ್ಟಲು ಶುರುವಿಟ್ಟುಕೊಂಡಿರುವವರು ಹಣವನ್ನು ಹೊಂದಿಸಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವನು ಸೂರು ನಿರ್ಮಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆೆ. ಕಬ್ಬಿಣ ಮತ್ತು ಸಿಮೆಂಟ್ ನ ದರ ಸಾರ್ವಕಾಲಿಕ ದಾಖಲೆಯನ್ನು ಬರೆಯುತ್ತಿದೆ.

ಮನೆಯನ್ನು ಕಟ್ಟಲು ಮುಖ್ಯವಾಗಿ ಬೇಕಾಗಿರುವುದು ಇಟ್ಟಿಗೆೆ ಅಥವಾ ಹಾಲೋಬ್ರಿಕ್ಸ್, ಸಿಮೆಂಟ್ , ಕಬ್ಬಿಣ, ಮರಳು ಅಥವಾ ಎಂಸ್ಯಾಂಡ್. ಆದರೆ ಮನೆ ಕಟ್ಟುಲು ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆಯೇ ವಿಪರೀತವಾಗಿ ಏರಿಕೆಯನ್ನು ಕಾಣುತ್ತಿದೆೆ. ಬೆಲೆ ಏರಿಕೆಗೆ ಹಲವಾರು ಕಾರಣವನ್ನು ಹೇಳುತ್ತಿದ್ದರು ದುಬಾರಿ ದುನಿಯಾದಲ್ಲಿ ಗೃಹನಿರ್ಮಾಣ ಬಲುಕಷ್ಟವಾಗ್ತಿದೆ.

ಬೆಲೆ ಏರಿಕೆಗೆ ಕಾರಣವೇನು..?
*ಪೆಟ್ರೋಲ್ ಡಿಸೇಲ್ ದರ ಗಗನಕ್ಕೇರಿರುವುದು.
*ಸಗಟು ಸಾಗಣೆ ವೆಚ್ಚ ಹೆಚ್ಚಳ.
*ರಷ್ಯಾ ಮತ್ತು ಉಕ್ರೇನ್ ಯುದ್ಧದ ಎಫೆಕ್ಟ್.
*ಬೇರೆ ದೇಶಗಳಿಂದ ರಫ್ತಿನ ಪ್ರಮಾಣ ಇಳಿಕೆ.

House Construction Material Price Hike:in, Cement, Bricks Price in Peak Level

ಪೆಟ್ರೋಲ್ ದರ ಲೀಟರ್‌ಗೆ 113 ರೂಪಾಯಿಗೆ ಏರಿಕೆಯಾಗಿದ್ದರೆ, ಡಿಸೆಲ್ ದರ ಶತಕದ ಅಂಚಿಗೆ ಬಂದ ನಿಂತಿದೆ. ಪೆಟ್ರೋಲ್ ಡಿಸೆಲ್ ದರ ಏರಿಕೆಯಾದ್ರೆ ಅಗತ್ಯ ವಸ್ತುಗಳು ಸೇರಿದಂತೆ ಗೃಹ ನಿರ್ಮಾಣ ಸಾಮಗ್ರಿಗಳು ಏರಿಕೆಯನ್ನು ಕಾಣುತ್ತದೆ. ಇತ್ತಿಚೆಗೆ ದಿನನಿತ್ಯ ತೈಲ ಬೆಲೆ ವಿಪರೀತ ಏರಿಕೆಯನ್ನು ಕಾಣುತ್ತಿದೆ ಇದರಿಂದ ಸಗಟು ಸಾಗಣೆಯ ವೆಚ್ಚವು ದುಬಾರಿಯಾಗುತ್ತಿದೆ. ಇನ್ನು ರಷ್ಯಾ ಮತ್ತು ಉಕ್ರೇನ್ ಯುದ್ದ ಪ್ರಾರಂಭವಾಗಿ ಬರೋಬ್ಬರಿ ಎರಡು ತಿಂಗಳಾಗುತ್ತಿದೆ. ಯುದ್ಧದ ಎಫೆಕ್ಟ್ ಸಹ ಗೃಹ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗಲು ಕಾರಣವಾಗುತ್ತಿದೆ. ಯುದ್ದದ ಕಾರಣದಿಂದಾಗಿ ಕೆಲವು ದೇಶಗಳು ರಫ್ತಿನ ಪ್ರಮಾಣದಲ್ಲೂ ಇಳಿಕೆ ಮಾಡಿರೋದ್ರಿಂದ ಬೆಲೆಏರಿಕೆಯ ಬಿಸಿ ಗೃಹನಿರ್ಮಾಣಕ್ಕೆ ತಗುಲಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 35 ರಿಂದ 45 ರಷ್ಟು ಬೆಲೆ ಏರಿಕೆ

ಬೆಲೆ ಏರಿಕೆ ಎಷ್ಟೆಷ್ಟು? ಮೂರು ತಿಂಗಳ ಅವಧಿಯಲ್ಲಿ ಭಾರೀ ಏರಿಕೆ..!
*ಕಬ್ಬಿಣ : ಟನ್ ಗೆ 65,000 ಇತ್ತು, ಇದೀಗ 90,000 ರೂ.ಗೆ ಏರಿಕೆ.
*ಸಿಮೆಂಟ್ : ಚೀಲಕ್ಕೆ 270 ಇತ್ತು, ಇದೀಗ 480-550 ರೂ.ಗೆ ಏರಿಕೆ.
*ಮಣ್ಣಿನ ಇಟ್ಟಿಗೆ : 6 ರಿಂದ 8 ರೂ ಇತ್ತು. ಇದೀಗ 10 ರೂ.ಗೆ ಏರಿಕೆ.
*ಸಿಮೆಂಟ್ ಇಟ್ಟಿಗೆ : 35 ರಿಂದ 48 ರೂ. ಏರಿಕೆ.

House Construction Material Price Hike:in, Cement, Bricks Price in Peak Level

*ಮರಳು : ಲೋಡ್ ಗೆ 75,000 ಇತ್ತು, ಇದೀಗ 90,000 ರೂ.ಗೆ ಏರಿಕೆ.

*ಎಂಸ್ಯಾಂಡ್ :ಟನ್ ಗೆ 600ರೂ ಇತ್ತು, ಇದೀಗ 650 ರಿಂದ 750ರೂ.ಗೆ ಏರಿಕೆ.

ಗೃಹ ನಿರ್ಮಾಣಕ್ಕೆ ಬೇಕಾಗಿರುವ ಕಬ್ಬಿಣ ನಿಜಕ್ಕೂ ಕಾದು ಬಡವರ ಕೈಯನ್ನು ಸುಡುತ್ತಿದೆ. ಸಿಮೆಂಟ್ ಬೆಲೆಯು ವಿಪರೀತ ಏರಿಕೆಯನ್ನು ಕಂಡಿದೆ. ಮಣ್ಣಿನ ಇಟ್ಟಿಗೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ಸಿಮೆಂಟ್ ಇಟ್ಟಿಗೆಯನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಸಿಮೆಂಟ್ ಇಟ್ಟಿಗೆಯು ತುಸು ಏರಿಕೆಯನ್ನು ಕಂಡಿದೆ. ಇನ್ನು ಮರಳನ್ನು ಜನ ಮರೆತೆಬಿಟ್ಟಿದ್ದಾರೆ. ಯಾಕೆಂದರೆ ಮರಳು ಬೆಲೆ ಕೈಗೆಟುಕದ ರೀತಿಯಲ್ಲಿ ಏರಿಕೆಯಾಗಿದೆ. ಹಣಕೊಟ್ಟರು ಉತ್ತದ ಗುಣಮಟ್ಟದ ಮರಳು ಸಿಗುತ್ತಿಲ್ಲ. ಫಿಲ್ಟರ್ ಮರಳು ಮಾಫಿಯಾಗೆ ಬೆದರಿ ಜನ ಎಂಸ್ಯಾಂಡ್ ಖರೀದಿಸುತ್ತಿದ್ದಾರೆ. ಎಂಸ್ಯಾಂಡ್ ಸಹ ತುಸು ಏರಿಕೆಯನ್ನು ಕಂಡಿದೆ. ಈ ಎಲ್ಲಾ ವಸ್ತುಗಳ ಏರಿಕೆಯಿಂದ ಮನೆಕಟ್ಟುವನ ಜೇಬು ಖಾಲಿಯಾಗುತ್ತಿದೆ.

House Construction Material Price Hike:in, Cement, Bricks Price in Peak Level

ಗೃಹ ನಿರ್ಮಾಣ ವಸ್ತುಗಲ ಬೆಲೆಏರಿಕೆಗೆ ಕುರಿತು ಪೀಣ್ಯ ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶಿವಕುಮಾರ್. ಆರ್ ರವರು ""ಭಾರತದಿಂದ ಕಂಪನಿಗಳು ವಿದೇಶಕ್ಕೆ ಹೆಚ್ಚು ಕಬ್ಬಿಣವನ್ನು ರಫ್ತು ಮಾಡುತ್ತಿದೆ. ದೇಶದಲ್ಲಿ ಉತ್ಪಾದನೆಯಾಗುವ ಸರಕುಗಳು ಜನಸಂಖ್ಯಾ ಆಧಾರದಲ್ಲಿ ಮೂರನೇ ಒಂದು ಭಾಗ ಇಲ್ಲಿಯವರಿಗೆ ಸಿಗಬೇಕು. ಈ ಕುರಿತು ಕೇಂದ್ರ ಸರ್ಕಾರ ಕ್ರಮವನ್ನು ವಹಿಸಬೇಕು. ಹಾಗೂ ಬೆಲೆ ಏರಿಕೆಗೆ ಯುದ್ದದ ಕಾರಣ ಮತ್ತು ಪೆಟ್ರೋಲ್ ಡಿಸೆಲ್ ನ ಬೆಲೆ ನಿರಂತರವಾಗಿ ಏರಿಕೆಯಾಗ್ತಿರುವುದು ಕಾರಣವಾಗಿದೆ,'' ಎಂದು ತಿಳಿಸಿದ್ದಾರೆ.

English summary
Build a house is not easy. The cost of iron, cement, brick and sand is very high. There are many reasons for the price rise. Now common peoples are facing trouble to build home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X