ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಲಬ್ ಗಳಲ್ಲಿ ಡ್ರೆಸ್ ಕೋಡ್ ಗೆ ಹೊಡೆತ, ಪಂಚೆ ಜುಬ್ಬಾಕ್ಕೆ ಓಕೆ!

ಪ್ರತಿಷ್ಠಿತ ಕ್ಲಬ್ ಗಳಲ್ಲಿರುವ ವಸ್ತ್ರ ಸಂಹಿತೆಯನ್ನು ತೆರವುಗೊಳಿಸಬೇಕು, ಶಾಸಕರಿಗಾಗಿ ಸಾಂವಿಧಾನಿಕ ಕ್ಲಬ್ ಈ ವರ್ಷವೇ ಕಾರ್ಯಾರಂಭ ಮಾಡುವಂತಾಗಬೇಕು ಎಂದು ಶಿಫಾರಸ್ಸನ್ನು ಸದನ ಸಮಿತಿ ನೀಡಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 07: ಪ್ರತಿಷ್ಠಿತ ಕ್ಲಬ್ ಗಳಲ್ಲಿರುವ ವಸ್ತ್ರ ಸಂಹಿತೆಯನ್ನು ತೆರವುಗೊಳಿಸಬೇಕು, ಶಾಸಕರಿಗಾಗಿ ಸಾಂವಿಧಾನಿಕ ಕ್ಲಬ್ ಈ ವರ್ಷವೇ ಕಾರ್ಯಾರಂಭ ಮಾಡುವಂತಾಗಬೇಕು ಎಂದು ಶಿಫಾರಸ್ಸನ್ನು ಸದನ ಸಮಿತಿ ಮಂಗಳವಾರ ಸರ್ಕಾರಕ್ಕೆ ನೀಡಿದೆ.[2014: ಪಂಚೆ ಪ್ರಕರಣ: ಕ್ರಿಕೆಟ್ ಕ್ಲಬ್ಬಿಗೆ ಸಿಎಂ ಜಯಾ ಪಂಚ್]

ಕ್ಲಬ್ ಗಳಲ್ಲಿ ಪಂಚೆ, ಜುಬ್ಬಾ ಧರಿಸಿ ಹೋಗುವುದನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಜನಪ್ರತಿನಿಧಿಗಳು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸಿ ವರ ನೀಡುವಂತೆ ಸಚಿವ ಎ. ಮಂಜು ನೇತೃತ್ವದ ಸಮಿತಿಗೆ ಸೂಚಿಸಿದ್ದರು.[ವಸ್ತ್ರ ಸಂಹಿತೆ ಸಮರ್ಥಿಸಿಕೊಂಡ ಸಿಎಂ ಸಿದ್ದು]

ರಾಜ್ಯದ ಕ್ಲಬ್ ಗಳ ಕುರಿತಾಗಿನ ವರದಿಯನ್ನು ವಿಧಾನ ಸಭೆಯಲ್ಲಿ ಶಾಸಕ ಹ್ಯಾರಿಸ್ ಮಂಡಿಸಿದರು. ಸರ್ಕಾರದ ಸವಲತ್ತು ಜಾಗ ಪಡೆದು ಕ್ಲಬ್ ಕಟ್ಟಿರುತ್ತಾರೆ. ಆದರೆ, ಅಲ್ಲಿ ಜನಪ್ರತಿನಿಧಿಗಳಿಗೆ ಸದಸ್ಯತ್ವ ಕೊಡಬೇಕು. ಕ್ಲಬ್ ಗಳಲ್ಲಿ ಇನ್ನೂ ಬ್ರಿಟಿಷ್ ಕಾಲದ ಕಾನೂನು ಪಾಲಿಸುತ್ತಿದ್ದಾರೆ . ಅದು ಬದಲಾಗಬೇಕು, ಕ್ಲಬ್ ಸಲುವಾಗಿ ಒಂದು ಕಾನೂನು ತರಬೇಕು ಎಂದು ಹೇಳಿದರು.

House committee recommendations relaxation of dress code in Club

ಸದನ ಸಮಿತಿಯ ಶಿಫಾರಸ್ಸುಗಳು:

1. ಜುಬ್ಬಾ, ಪೈಜಾಮ, ಪಂಜೆ ಸೇರಿದಂತೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಕ್ಲಬ್ ಗಳಿಗೆ ಪ್ರವೇಶ ಅವಕಾಶ ಕೊಡಬೇಕು.
2. ಎಲ್ಲಾ ಕ್ಲಬ್‌ ಗಳಿಗೂ ಸೂಕ್ತ ಮಾನದಂಡ ಅಳವಡಿಕೆ. ಏಕರೂಪ ಸದಸ್ಯತ್ವ ಶುಲ್ಕ.
3. ಸರ್ಕಾರ ದಿಂದ ಸವಲತ್ತು ಪಡೆದಿರುವ ಕ್ಲಬ್‌ ಗಳಿಗೆ ಶಾಸಕರು ಬಯಸುವ ಎರಡು ಕ್ಲಬ್ ಗಳಿಗೆ ಸದಸ್ಯತ್ವ ಕೊಡಬೇಕು.
4 ಕ್ರೀಡಾ ಸಾಧಕರಿಗೆ ಹಾಗೂ ಶೌರ್ಯ ಪ್ರಶಸ್ತಿ ಪಡೆದವರಿಗೆ ಕ್ಲಬ್ಗಳಿಗೆ ಪ್ರವೇಶ ಅವಕಾಶ ಕೊಡಬೇಕು.

5. ಕರ್ನಾಟಕ ಸಾಂವಿಧಾನಿಕ ಕ್ಲಬ್‌ ಸ್ಥಾಪಿಸಿ ಭಾರತದ ಸಾಂವಿಧಾನಿಕ ಕ್ಲಬ್‌ ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು.
6 ಎಲ್ಲಾ ಕ್ಲಬ್ ಗಳೂ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು.
7. ಹೊಸ ಬಡಾವಣೆ ನಿರ್ಮಾಣ ಮಾಡುವ ವೇಳೆಯಲ್ಲಿಯೇ ಕ್ಲಬ್ ನಿರ್ಮಾಣ ಹಾಗೂ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಅನುಕೂಲವಾಗುವಂತೆ ಸ್ಥಳ ನಿಗದಿ ಪಡಿಸಬೇಕು.
8. ಇಪ್ಪತ್ತೈದು ಎಕರೆ ಮೇಲ್ಪಟ್ಟ ಜಮೀನಿನಲ್ಲಿ ಮುಂದೆ ರಚಿಸಲಾಗುವ ಬಡಾವಣೆಗಳಲ್ಲಿ, ಬಡಾವಣೆಯ ನಿವಾಸಿಗಳಿಗೆ ಅನುಕೂಲ ವಾಗುವಂತೆ ಕ್ಲಬ್ ಸ್ಥಾಪನೆಗೆ ಸ್ಥಳಾವಕಾಶ ಮಿಸಲಿಡಬೇಕು.
9. ಶಾಸಕರಿಗಾಗಿ ಸಾಂವಿಧಾನಿಕ ಕ್ಲಬ್ ಈ ವರ್ಷವೇ ಕಾರ್ಯಾರಂಭ ಮಾಡುವಂತಾಗಬೇಕು.
10. ಪ್ರತಿ ತಾಲೂಕಿನಲ್ಲೂ ಕ್ಲಬ್ ನಿರ್ಮಾಣಕ್ಕೆ ಸರ್ಕಾರ ಜಮೀನು ಕೊಡಬೇಕು.

English summary
House committee on functioning of clubs across the state today submitted its recommendations which include relaxation of dress code, a cap on membership fee and mandatory infrastructure and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X