ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ಹೋಟೆಲ್ ಆದಾಯ ಕುಸಿತ: ಆನ್‌ಲೈನ್ ಡೆಲಿವರಿ ಯಥಾಸ್ಥಿತಿ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಕೊರೊನಾ ಭೀತಿಯಿಂದಾಗಿ ಹೋಟೆಲ್ ಆದಾಯ ಶೇ.40 ರಷ್ಟು ಕುಸಿತ ಕಂಡಿದೆ.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರವೇ ಹೆಚ್ಚಿನ ವ್ಯಾಪಾರವಾಗುತ್ತಿದೆ. ಆದರೆ, ಈ ವಾರ ಜನರು ಮನೆಯಿಂದ ಹೊರಗೆ ಬಂದಿರಲಿಲ್ಲ.

ಇನ್ನು ಐಟಿಬಿಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿರುವುದರಿಂದ ಹಾಗೂ ಅನೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಹೋಟೆಲ್ ಉದ್ಯಮ ಶೇ.40 ರಷ್ಟು ಕುಸಿತ ಕಂಡಿದೆ.

Hotel

ಇನ್ನು ಆನ್‌ಲೈನ್ ಫುಡ್ ಡೆಲಿವರಿ ಆಪ್ ಮೂಲಕ ತಿಂಡಿ-ತಿನಿಸುಗಳ ಬೇಡಿಕೆ ಪ್ರಮಾಣ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ. ಎಂದಿನಂತೆಯೇ ಆನ್‌ಲೈನ್ ಫುಡ್ ಡೆಲಿವರಿ ನಡೆಯುತ್ತಿದೆ ಎಂದು ಸ್ವಿಗ್ಗಿ, ಜೊಮ್ಯಾಟೋ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

ವಿಧಾನಸೌಧ, ವಿಕಾಸಸೌಧದಲ್ಲೂ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆವಿಧಾನಸೌಧ, ವಿಕಾಸಸೌಧದಲ್ಲೂ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

ಐಟಿ-ಬಿಟಿ ವಲಯಲ್ಲಿ ಸುಮಾರು 3.40 ಲಕ್ಷ ಉದ್ಯೋಗಿಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಹೋಟೆಲ್, ಕ್ಯಾಟರಿಂಗ್ ಸರ್ವೀಸ್‌ಗಳಿಂದ ಸುಮಾರು ಒಂದು ಲಕ್ಷ ಪ್ಲೇಟ್ ಊಟ, ತಿಂಡಿ ಸರಬರಾಜು ಮಾಡಲಾಗುತ್ತಿದೆ.

ಇದೀಗ ಅನೇಕ ಕಂಪನಿಗಳು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಕೋಟಿ ರೂ. ನಷ್ಟವುಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

English summary
Hotel revenues have fallen by 40 per cent due to Coronavirus fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X