ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದ ಹೋಟೆಲ್ ಮಾಲೀಕರ ಸಂಘ

|
Google Oneindia Kannada News

ಬೆಂಗಳೂರು, ಮಾರ್ಚ್ 20: ನರೇಂದ್ರ ಮೋದಿರ 'ಜನತಾ ಕರ್ಫ್ಯೂ'ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿದೆ. ಹೀಗಾಗಿ, ಭಾನುವಾರ ಒಂದು ದಿನ ಹೋಟೆಲ್‌ಗಳು ಬಂದ್ ಆಗಲಿದೆ.

ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಹೋಟೆಲ್‌ಗಳನ್ನು ಬಂದ್ ಆಗಲಿದೆ. ಸಂಜೆ 5 ಚಪ್ಪಾಳೆ ತಟ್ಟುವ ಮೂಲಕ 'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಲಾಗುವುದು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಬಿ ಚಂದ್ರಶೇಖರ ಹೆಬ್ಬಾರ್ ಎಂದು ಹೇಳಿದ್ದಾರೆ.

ನರೇಂದ್ರ ಮೋದಿರ 'ಜನತಾ ಕರ್ಫ್ಯೂ' ಮೆಚ್ಚಿದ ವಿಶ್ಚ ಆರೋಗ್ಯ ಸಂಸ್ಥೆನರೇಂದ್ರ ಮೋದಿರ 'ಜನತಾ ಕರ್ಫ್ಯೂ' ಮೆಚ್ಚಿದ ವಿಶ್ಚ ಆರೋಗ್ಯ ಸಂಸ್ಥೆ

ತಮ್ಮ ಹೋಟೆಲ್ ಮಾಲೀಕರ ಸಂಘಕ್ಕೆ 25 ಸಾವಿರ ಹೋಟೆಲ್ ಗಳು ಸೇರುತ್ತದೆ. ಆ ಎಲ್ಲ ಹೋಟೆಲ್‌ಗಳು ಅಂದು ಬಂದ್ ಆಗಲಿದೆ. ಸಂಘಕ್ಕೆ ಸೇರದ ಹೋಟೆಲ್‌ಗಳು ಸಹ 'ಜನತಾ ಕರ್ಫ್ಯೂ'ಗೆ ಸಾಥ್ ನೀಡುವುದಾಗಿ ತಿಳಿಸಿದ್ದಾರಂತೆ.

Hotel Owners Association Supports Modis Janatha Curfew

ಹೋಟೆಲ್, ಬೋರ್ಡಿಂಗ್, ಲಾಡ್ಜ್, ಸ್ಟಾರ್ ಹೋಟೆಲ್‌ಗಳು ಸಹ ಅಂದು ಬಂದ್ ಆಗಲಿದೆಯಂತೆ. ಕೊರೊನಾ ವೈರಸ್‌ನಿಂದ ಹೋಟೆಲ್ ಉದ್ಯಮಕ್ಕೆ ಹಾನಿ ಆಗಿದ್ದು, ನರೇಂದ್ರ ಮೋದಿ ಸೂಚನೆ ಪಾಲಿಸುತ್ತೇವೆ ಎಂದು ಸಂಘದ ಅಧ್ಯಕ್ಷ ತಿಳಿಸಿದ್ದಾರೆ.

ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?

ಜನತಾ ಕರ್ಫ್ಯೂ ಅಂದರೆ ಏನು?

ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ ನಿವಾಸಿಗಳು ಮನೆಯಲ್ಲೇ ಉಳಿದು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಕೋರಿದ್ದಾರೆ. ಅಂದು ಮನೆಯಿಂದ ಹೊರಕ್ಕೆ ಬರಬೇಡಿ, ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಕರೆ ನೀಡಿದರು.

English summary
Hotel owners association supports PM Narendra Modi's janatha curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X