ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರ ಜೇಬಿಗೆ ಕತ್ತರಿ; ಊಟ, ಉಪಹಾರದ ದರ ಏರಿಸಿದ ಹೋಟೆಲ್‌ಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ ಎಂದು ಗೊಣಗುತ್ತಿದ್ದ ಜನರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ ಕಾಫಿ, ಟೀ, ಉಪಹಾರ ಮತ್ತು ಊಟದ ದರವನ್ನು ಏರಿಕೆ ಮಾಡಲಾಗಿದೆ.

ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ರಿ.) ಊಟ, ಉಪಹಾರ ಮತ್ತು ಕಾಫಿ, ಟೀ ದರಗಳಲ್ಲಿ ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಗುರುವಾರದಿಂದಲೇ ಜಾರಿಗೆ ಬರುವಂತೆ ದರ ಹೆಚ್ಚಳವಾಗಿದೆ.

ಮಟನ್ ಖಾದ್ಯಗಳನ್ನು ಆರ್ಡರ್ ಮಾಡುವ ಮುನ್ನ ಎಚ್ಚರಮಟನ್ ಖಾದ್ಯಗಳನ್ನು ಆರ್ಡರ್ ಮಾಡುವ ಮುನ್ನ ಎಚ್ಚರ

ದಿನದಿನವೂ ಹೋಟೆಲ್‌ಗಳ ಅವಶ್ಯಕ ವಸ್ತುಗಳ ಬೆಲೆ ನಿಯಂತ್ರಣವಿಲ್ಲದೇ ಏರಿಕೆಯಾಗುತ್ತಿದೆ. ಹಾಲು, ಮೊಸರು, ತರಕಾರಿ, ಎಣ್ಣೆ, ಬೇಳೆಕಾಳು, ಗ್ಯಾಸ್ ಇತ್ಯಾದಿಗಳ ಬೆಲೆಗಳು ಅನಿಯಂತ್ರಿತವಾಗಿ ಏರಿಕೆ ಕಂಡಿವೆ ಎಂದು ಪ್ರಕಟಣೆ ಹೇಳಿದೆ.

ಹುಬ್ಬಳ್ಳಿ ಹೋಟೆಲ್ ನಲ್ಲಿ 60ರೂ ಬಿಲ್ ಗೆ ನಡೆಯಿತು ಮಾರಾಮಾರಿಹುಬ್ಬಳ್ಳಿ ಹೋಟೆಲ್ ನಲ್ಲಿ 60ರೂ ಬಿಲ್ ಗೆ ನಡೆಯಿತು ಮಾರಾಮಾರಿ

ಇತ್ತೀಚಿನ ದಿನಗಳಲ್ಲಿ ಹೋಟೆಲ್ ಉದ್ಯಮ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೋಟೆಲ್‌ಗಳಲ್ಲಿ ಊಟ, ಉಪಹಾರದ ದರ ಏರಿಕೆ ಮಾಡುವುದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಆದರೆ, ಇದು ಅನಿವಾರ್ಯವಾಗಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಬಂಡೀಪುರದಲ್ಲಿ ಪ್ರವಾಸಿಗರ ಹಸಿವು ತಣಿಸಲು ಕಾಡಿನ ಮಧ್ಯೆ ಹಾಡಿ ಕ್ಯಾಂಟೀನ್ಬಂಡೀಪುರದಲ್ಲಿ ಪ್ರವಾಸಿಗರ ಹಸಿವು ತಣಿಸಲು ಕಾಡಿನ ಮಧ್ಯೆ ಹಾಡಿ ಕ್ಯಾಂಟೀನ್

ಎಷ್ಟು ಬೆಲೆ ಏರಿಕೆಗೆ ಅನುಮತಿ?

ಎಷ್ಟು ಬೆಲೆ ಏರಿಕೆಗೆ ಅನುಮತಿ?

ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ರಿ.) ತನ್ನ ವ್ಯಾಪ್ತಿಗೆ ಒಳಪಡುವ ಹೋಟೆಲ್‌ಗಳಲ್ಲಿ ಗುರುವಾರದಿಂದಲೇ ಜಾರಿಗೆ ಬರುವಂತೆ ಶೇ 5 ರಿಂದ 10ರಷ್ಟು ದರಗಳನ್ನು ಏರಿಕೆ ಮಾಡಲು ಒಪ್ಪಿಗೆ ಕೊಟ್ಟಿದೆ. ಕೆಲವು ಹೋಟೆಲ್‌ಗಳು ದರವನ್ನು ಏರಿಕೆ ಸಹ ಮಾಡಿವೆ.

ಮೂರು ಬಗೆಯ ಹೋಟೆಲ್‌ಗಳು

ಮೂರು ಬಗೆಯ ಹೋಟೆಲ್‌ಗಳು

ಬೆಂಗಳೂರು ನಗರದಲ್ಲಿ ಸುಮಾರು 17 ಸಾವಿರ ಹೋಟೆಲ್‌ಗಳಿವೆ. ಇವುಗಳಲ್ಲಿ ಸಣ್ಣ, ದರ್ಶನಿ ಹಾಗೂ ದೊಡ್ಡದು ಎಂದು ಮೂರು ವಿಭಾಗಗಳಿವೆ. ಆಯಾ ಹೋಟೆಲ್‌ಗಳು ದರವನ್ನು ಎಷ್ಟು ಏರಿಕೆ ಮಾಡಬೇಕು ಎಂದು ತೀರ್ಮಾನವನ್ನು ಕೈಗೊಳ್ಳಲಿವೆ.

ಗ್ರಾಹಕರಲ್ಲಿ ವಿನಂತಿ

ಗ್ರಾಹಕರಲ್ಲಿ ವಿನಂತಿ

ಕಟ್ಟಡ ಬಾಡಿಗೆ, ವಿದ್ಯುತ್, ನೀರಿನ ದರಗಳು ಏರಿಕೆಯಾಗಿವೆ. ಇವೆಲ್ಲ ಕಾರಣಗಳಿಂದ ಹತ್ತಾರು ವರ್ಷಗಳಿಂದಲೂ ಸ್ಥಿರವಾಗಿರುವ ತಿಂಡಿತಿನಿಸುಗಳ ದರಗಳನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ತಿಂಡಿತಿನಿಸುಗಳ ಬೆಲೆ ಏರಿಕೆ ಮಾಡುವುದರಿಂದ ಗ್ರಾಹಕರಿಗೆ ಸಣ್ಣ ಪ್ರಮಾಣದ ಹೊರೆಯಾದರೂ ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಾಗಿದೆ. ಗ್ರಾಹಕರು ಸಹಕಾರ ನೀಡಬೇಕು ಎಂದು ಹೋಟೆಲುಗಳ ಸಂಘ ಮನವಿ ಮಾಡಿದೆ.

ಕಾಫಿ, ಟೀ ಸಹ ದುಬಾರಿ

ಕಾಫಿ, ಟೀ ಸಹ ದುಬಾರಿ

ಕೇವಲ ಊಟ, ಉಪಹಾರದ ದರಗಳು ಮಾತ್ರ ಏರಿಕೆಯಾಗಿಲ್ಲ. ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಕಾಫಿ, ಟೀ, ಬಾದಾಮಿ ಹಾಲು ಸೇರಿದಂತೆ ಪಾನೀಯಗಳ ದರವನ್ನು ಏರಿಕೆ ಮಾಡಲಾಗಿದೆ. ಚಿಕ್ಕ ಹೋಟೆಲ್, ದರ್ಶನಿಗಳು ಇಂದಿನಿಂದಲೇ ದರವನ್ನು ಏರಿಕೆ ಮಾಡಿವೆ.

English summary
Bangalore Hotelugala Sanga approved for the price hike of items in the hotel. Price may hike 5 to 10 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X