ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಬೆಂಗಳೂರಿಗರ ಬಾಯಿ ಸುಡಲಿದೆ ಕಾಫಿ-ಟೀ, ತಿಂಡಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಇನ್ನುಮುಂದೆ ಹೋಟೆಲ್ ಕಾಫಿ-ಟೀ ತಿಂಡಿ ಬೆಲೆ ದುಬಾರಿಯಾಗಿದೆ.

ಅಗತ್ಯ ವಸ್ತುಗಳಾದ ಹಾಲು, ಗ್ಯಾಸ್ , ತರಕಾರಿ ಹಾಗೂ ಕಾರ್ಮಿಕರ ಕೂಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋಟೆಲ್‌ಗಳ ಕಾಫಿ-ಟೀ 2 ರೂ. ಹಾಗೂ ತಿಂಡಿ-ತಿನಿಸುಗಳಿಗೆ ಶೇ. 10-12ರಷ್ಟು ಹೆಚ್ಚಳವಾಗಿದೆ.

 ಹೋಟೆಲ್ ಮಾಲಿಕರ ಸಭೆಯಲ್ಲಿ ತೀರ್ಮಾನ

ಹೋಟೆಲ್ ಮಾಲಿಕರ ಸಭೆಯಲ್ಲಿ ತೀರ್ಮಾನ

ಈ ಕುರಿತು ಹೋಟೆಲ್ ಮಾಲಿಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ರಾಜ್ಯಾದ್ಯಂತ ಒಮ್ಮತದ ನಿರ್ಧಾರ ಕೈಗೊಂಡು ಬೆಲೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರಿಗರ ಜೇಬಿಗೆ ಕತ್ತರಿ; ಊಟ, ಉಪಹಾರದ ದರ ಏರಿಸಿದ ಹೋಟೆಲ್‌ಗಳುಬೆಂಗಳೂರಿಗರ ಜೇಬಿಗೆ ಕತ್ತರಿ; ಊಟ, ಉಪಹಾರದ ದರ ಏರಿಸಿದ ಹೋಟೆಲ್‌ಗಳು

 ಗ್ರಾಹಕರಿಗೂ ಹೊರೆಯಾಗದಂತೆ ದರ ಹೆಚ್ಚಳ

ಗ್ರಾಹಕರಿಗೂ ಹೊರೆಯಾಗದಂತೆ ದರ ಹೆಚ್ಚಳ

ಗ್ರಾಹಕರಿಗೂ ಹೊರೆಯಾಗದಂತೆ ಶೇ.10 ರಿಂದ 12ರಷ್ಟು ಬೆಲೆ ಹೆಚ್ಚಿಸಲಾಗಿದೆ. ಕೆಲ ಹೋಟೆಲ್ ಮಾಲಿಕರು ಗ್ರಾಹಕರ ಹಿತದೃಷ್ಟಿಯಿಂದ ಬೆಲೆ ಹೆಚ್ಚಿಸಿಲ್ಲ. ಆದರೆ, ಬಹುತೇಕ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆಯಾಗಿದೆ ಎಂದು ರಾಜ್ಯ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.

 ಸೊಪ್ಪು-ತರಕಾರಿಗಳ ಬೆಲೆ ಏರಿಕೆ

ಸೊಪ್ಪು-ತರಕಾರಿಗಳ ಬೆಲೆ ಏರಿಕೆ

ದಿನದಿಂದ ದಿನಕ್ಕೆ ಸೊಪ್ಪು-ತರಕಾರಿಗಳ ಬೆಲೆ ಏರಿಎಯಾಗುತ್ತಿದೆ. ಇತ್ತೀಚೆಗೆ ಹಾಲು, ಮೊಸರು ಎರಡು ರೂ ಹೆಚ್ಚಿಸಲಾಗಿತ್ತು. ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಹೆಚ್ಚಳವಾಗಿದೆ. ಹೋಟೆಲ್‌ಗಳ ಬಾಡಿಗೆ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಿದೆ.

 ರಾಜ್ಯದಲ್ಲಿವೆ 30 ಸಾವಿರಕ್ಕೂ ಹೆಚ್ಚು ಹೋಟೆಲ್

ರಾಜ್ಯದಲ್ಲಿವೆ 30 ಸಾವಿರಕ್ಕೂ ಹೆಚ್ಚು ಹೋಟೆಲ್

ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ . ಬೆಂಗಳೂರಿನಲ್ಲಿ 5 ಸಾವಿರ ಹೋಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಹೋಟೆಲ್‌ಗಳಲ್ಲಿ ದಿನಕ್ಕೆ 10 ಸಿಲಿಂಡರ್ ಬಳಕೆ ಮಾಡುತ್ತೇವೆ. ಈಗ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿರುವುದು ದೊಡ್ಡ ಹೊಡೆತವೇ ಎಂದು ಹೇಳಲಾಗಿದೆ.

English summary
Hotel and Restaurant Hike the Prices of Food Coffee And Tea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X