• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ್ಯುವೆಲರಿ ಶಾಪ್‌ಗೆ ಕನ್ನ ಹಾಕಿದ ಹೋಟೆಲ್ ಉದ್ಯಮಿಗಳಿಗೆ ಮುಳವಾದ ಕಾರು

|
Google Oneindia Kannada News

ಬೆಂಗಳೂರು, ಅ. 21: ಅವರಿಬ್ಬರೂ ಬಾಲ್ಯದ ಗೆಳೆಯರು. ಕಷ್ಟ ಪಟ್ಟು ಮೇಲೆ ಬರಬೇಕು ಎಂದು ಆಸೆ ಪಟ್ಟು ಹೋಟೆಲ್ ಉದ್ಯಮ ಆರಂಭಿಸಿದ್ದರು. ಇನ್ನೇನು ಯಶಸ್ಸು ಗಳಿಸುವ ಸಮಯದಲ್ಲಿ ಕೊರೊನಾ ಎದುರಾಗಿ ನಷ್ಟ ಅನುಭವಿಸಿದರು. ಮಾಡಿರುವ ಸಾಲ ತೀರಿಸಲು ಕಳ್ಳತನ ಮಾಡಲು ಪ್ಲಾನ್ ರೂಪಿಸಿದರು. ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ಜ್ಯುವೆಲರಿ ಶಾಪ್‌ನಲ್ಲೇ ಕಳ್ಳತನ ಮಾಡಿದ್ದರು. ಅವರು ಮಾಡಿದ್ದ ಸಣ್ಣ ಎಡವಿಟ್ಟಿನಿಂದ ಬಾಲ್ಯದ ಗೆಳೆಯರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಇದು ಮಹೇಂದ್ರ, ಸ್ಯಾಮ್ ಹಾಗೂ ನೀಲಕಂಠ ಎಂಬ ಮೂವರು ಗೆಳೆಯರು ಜೈಲು ಸೇರಿದ ಕಥೆ. ಸದ್ಯ ಮೂವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನೀಲಕಂಠ, ಮಹೇಂದ್ರ ಹಾಗೂ ಸ್ಯಾಮ್ ಬಾಲ್ಯದ ಗೆಳೆಯರು. ಕೊರೊನಾ ಮುನ್ನ ಪುಟ್ಟ ಹೋಟೆಲ್ ಉದ್ಯಮ ಆರಂಭಿಸಿದ್ದರು. ಅದು ಇನ್ನೇನು ಕೈ ಹಿಡಿಯುವ ಹಂತದಲ್ಲಿತ್ತು. ಇದಕ್ಕಾಗಿ ಸಾಲ ಮಾಡಿಕೊಂಡಿದ್ದರು. ಇನ್ನೇನು ಲೈಫ್ ನಲ್ಲಿ ಸೆಟ್ಲ್ ಆಗುವ ಹಾದಿ ಯಶಸ್ಸು ಆಯಿತು ಎನ್ನುವಷ್ಟರಲ್ಲಿ ಕೊರೊನಾ ಮಾರಿ ಆರಂಭವಾಗಿತ್ತು. ಲಾಕ್ ಡೌನ್ ಹೊಡೆತಕ್ಕೆ ಹೋಟೆಲ್ ಉದ್ಯಮ ಮುಚ್ಚಿತ್ತು. ನೀಲಕಂಠ ಮತ್ತು ಮಹೇಂದ್ರ ಗೆಳೆಯರು ಕೂಡ ಅನಿವಾರ್ಯವಾಗಿ ಹೋಟೆಲ್ ಗೆ ಬಾಗಿಲು ಹಾಕಬೇಕಾಯಿತು. ಹಾಕಿದ್ದ ಬಂಡವಾಳವೂ ವಾಪಸು ಬರದೇ ಹಣ ಕಳೆದುಕೊಂಡು ಬಾಲ್ಯದ ಗೆಳೆಯರು ಸಂಕಷ್ಟಕ್ಕೆ ಒಳಗಾಗಿದ್ದರು.

ಒಂದು ಐಡಿಯಾ

ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಕಳ್ಳತನ ಮಾಡಲು ಪ್ಲಾನ್ ರೂಪಿಸಿದ್ದಾರೆ. ಪೊಲೀಸರಿಗೆ ಕೈಗೆ ಸಿಗದಂತೆ ಕಳ್ಳತನ ಮಾಡುವುದು ಹೇಗೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಅಧ್ಯಯನ ಮಾಡಿದ್ದಾರೆ. ಸುಳಿವು ಸಿಗದಂತೆ ಕಳ್ಳತನ ಮಾಡುವ ಬಗ್ಗೆ ಟಿಪ್ಸ್ ಪಡೆದುಕೊಂಡಿದ್ದಾರೆ. ಅದರಂತೆ ಪ್ಲಾನ್ ರೂಪಿಸಿ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೀನಾ ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿದ್ದಾರೆ. ಮಹೇಂದ್ರ ಮತ್ತು ನೀಲಕಂಠ ಗೆಳೆಯರು ಮೂರು ದಿನ ಜ್ಯುವೆಲರಿ ಶಾಪ್ ಸುತ್ತ ಮುತ್ತ ಓಡಾಡಿ ಪ್ಲಾನ್ ರೂಪಿಸಿ ಕಾರ್ಯಗತಗೊಳಿಸಿದ್ದಾರೆ.

ಜ್ಯುವೆಲರಿ ಶಾಪ್ ನ ಲಾಕ್ ಮುರಿಯಲೆಂದು ಮಿಷನ್ ಖರೀದಿಸಿದ್ದರು. ಯಾರಿಗೂ ಸಣ್ಣ ಶಬ್ಧ ಬಾರದಂತೆ ಬೀಗ ಮುರಿದು ಕಳ್ಳತನ ಮಾಡಿದ್ದರು. ಮೀನಾ ಜ್ಯುವೆಲರಿ ಅಂಗಡಿಯಲ್ಲಿದ್ದ ಒಂದೂಕಾಲು ಕೆ.ಜಿ ಚಿನ್ನದ ಆಭರಣ ದೋಚಿದ್ದರು.

ಮುಳುವಾದ ಕಾರು

ಮೂವರು ಸ್ನೇಹಿತರು ಕದ್ದ ಆಭರಣ ಸಮೇತ ಕಾರಿನಲ್ಲಿ ಗೋವಾಗೆ ಹೋರಟಿದ್ದಾರೆ. ಆದರೆ, ಕೊರೊನಾ ಲಾಕ್ ಡೌನ್ ನಿಯಮ ಇರುವ ಕಾರಣ ಕಾರನ್ನು ತಪಾಸಣೆ ಮಾಡುವ ಬಗ್ಗೆ ಭಯಬೀತರಾಗಿದ್ದಾರೆ. ಗೋವಾಗೆ ಹೋದವರು ವಾಪಸು ಬೆಂಗಳೂರಿನತ್ತ ಬಂದಿದ್ದಾರೆ. ಇನ್ನೇನು ಚಿನ್ನವನ್ನು ಮಾರಾಟ ಮಾಡಿ ಎಸ್ಕೇಪ್ ಆಗಲು ಯತ್ನಿಸುವ ವೇಳೆಯೇ ಮೂವರು ಕಳ್ಳ ಗೆಳೆಯರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಯಾವ ಸುಳಿವೂ ಸಿಗದಂತೆ ಜ್ಯುವೆಲರಿ ಶಾಪ್‌ನಲ್ಲಿ ಚಿನ್ನ ದೋಚಿದ್ದ ಕಳ್ಳ ಗೆಳೆಯರಿಗೆ ಕಾರೇ ಮುಳುವಾಗಿತ್ತು. ಅಭರಣ ದೋಚಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ದೃಶ್ಯ ಜ್ಯುವೆಲರಿ ಮುಂಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದ ಇಂದಿರಾನಗರ ಪೊಲೀಸರಿಗೆ ಕಾರಿನ ನಂಬರ್ ಸಿಕ್ಕಿತ್ತು. ಕೃತ್ಯ ನಡೆದ ವೇಳೆ ಸ್ಥಳದಲ್ಲಿ ಪತ್ತೆಯಾಗಿದ್ದ ಮೊಬೈಲ್ ನಂಬರ್ ಜಾಡು ಹಿಡಿದು ಟವರ್ ಡಂಪ್ ಮೂಲಕ ತನಿಖೆ ನಡೆಸಿದಾಗ ಆರೋಪಿತರ ಮೊಬೈಲ್ ಸಂಖ್ಯೆಗಳು ಗೋವಾ ಬಾರ್ಡರ್ ನಲ್ಲಿ ಇರವುದು ಕಾಣಿಸಿಕೊಂಡಿತ್ತು. ತಾಂತ್ರಿಕ ಸುಳಿವಿನ ಮೇರೆಗೆ ಮೂವರು ಅರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನದ ಹಿಂದಿನ ಹೋಟೆಲ್ ಕಹಾನಿ ಗೊತ್ತಾಗಿದೆ. ಮೂವರನ್ನು ಬಂಧಿಸಿರುವ ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಷ್ಟ ಪಟ್ಟು ದುಡಿದು ಬದುಕುವ ಆಸೆ ಇಟ್ಟುಕೊಂಡು ಉದ್ಯಮ ಆರಂಭಿಸಲು ಹೋದ ಬಾಲ್ಯದ ಗೆಳೆಯರು ಸಾಮಾಜಿಕ ಜಾಲ ತಾಣದ ಸಹವಾಸದಿಂದ ಕಳ್ಳತನ ಮಾಡಿ ಜೈಲು ವಾಸ ಅನುಭವಿಸುವಂತಾಗಿದೆ.

   ಅನನ್ಯಾ ಪಾಂಡೆ ಮತ್ತು ಶಾರುಖ್ ಮಗನಿಗೂ ಇತ್ತಾ ಡ್ರಗ್ಸ್ ಲಿಂಕ್?? | Oneindia Kannada
   English summary
   Indira Nagara police arrested three people after steals jewellery.3 accused become thieves after thier hotel business gone to loss. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X