ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಷಕರೇ ಎಚ್ಚರ: ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಶ್ವಾಸನಾಳ ಉರಿಯೂತದ ರೋಗ!?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದೆ ಎಂದು ನಿರಾಳರಾದ ಸಿಲಿಕಾನ್ ಸಿಟಿ ಜನರಲ್ಲಿ ಹೊಸ ಬಗೆಯ ಆರೋಗ್ಯ ಸಮಸ್ಯೆಗಳು ಗೋಚರಿಸುತ್ತಿವೆ. ಬೆಂಗಳೂರಿನ ಬಹುಪಾಲು ಆಸ್ಪತ್ರೆಗಳು ಶ್ವಾಸಕೋಶ ಸಂಬಂಧಿ ತೊಂದರೆ ಎದುರಿಸುತ್ತಿರುವ ರೋಗಿಗಳಿಂದಲೇ ತುಂಬಿ ಹೋಗುತ್ತಿದೆ.

ಉಸಿರಾಟ ಸಮಸ್ಯೆ, ಎದೆನೋವು ಮತ್ತು ಶ್ವಾಸನಾಳ ಉರಿಯೂತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೋಗದ ಲಕ್ಷಣಗಳು ಕೊರೊನಾವೈರಸ್ ಸೋಂಕಿನ ಮೂರನೇ ಅಲೆಯ ಮುನ್ಸೂಚನೆಯೇ ಎಂಬ ಅನುಮಾನವನ್ನು ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ.

ಸಿಹಿಸುದ್ದಿ: ಡಿಸೆಂಬರ್ ಹೊತ್ತಿಗೆ ಮಕ್ಕಳಿಗಾಗಿ ಬಯೋಲಾಜಿಕಲ್-ಇ ಕಂಪನಿಯ ಕೊವಿಡ್-19 ಲಸಿಕೆಸಿಹಿಸುದ್ದಿ: ಡಿಸೆಂಬರ್ ಹೊತ್ತಿಗೆ ಮಕ್ಕಳಿಗಾಗಿ ಬಯೋಲಾಜಿಕಲ್-ಇ ಕಂಪನಿಯ ಕೊವಿಡ್-19 ಲಸಿಕೆ

ಎರಡು ತಿಂಗಳಿಂದ ಎರಡು ವರ್ಷದೊಳಗಿನ ಮಕ್ಕಳಲ್ಲಿ ವೈರಸ್‌ಗಳಿಂದ ಉಂಟಾಗುವ ಎದೆಯ ನೋವು, ವೇಗವಾದ ಉಸಿರಾಟ, ಒಂದು ರೀತಿಯ ವೈರಲ್ ನ್ಯುಮೋನಿಯಾ ಸಮಸ್ಯೆಗಳು ಗೋಚರಿಸುತ್ತಿದ್ದು, ಈ ರೋಗಗಳಿಗೆ ಯಾವುದೇ ನಿರ್ದಿಷ್ಟ ಔಷಧಿಗಳಿಲ್ಲ. ಆದರೆ ವೆಂಟಿಲೇಟರ್ ಅಥವಾ ಐಸಿಯು ಪ್ರವೇಶದ ಅಗತ್ಯವಾಗಿರುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಅನಾರೋಗ್ಯ ಪೀಡಿತ ಮಕ್ಕಳು ಸಂಖ್ಯೆ ಹೆಚ್ಚಳ!

ಸಿಲಿಕಾನ್ ಸಿಟಿಯಲ್ಲಿ ಅನಾರೋಗ್ಯ ಪೀಡಿತ ಮಕ್ಕಳು ಸಂಖ್ಯೆ ಹೆಚ್ಚಳ!

"2 ತಿಂಗಳಿನಿಂದ 2 ವರ್ಷದೊಳಿಗಿನ ಮಕ್ಕಳು ಪರಿಣಾಮಕಾರಿಯಾಗಿ ಮಾಸ್ಕ್ ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ವಯಸ್ಸಿನ ಮಕ್ಕಳನ್ನು COVID-19 ನಿಂದ ತಡೆಗಟ್ಟಲು ಮಾತ್ರವಲ್ಲದೆ ಇತರ ರೋಗಗಳು ಅಂಟಿಕೊಳ್ಳದಂತೆ ತಡೆಯಲು ಸಹಾಯವಾಗುತ್ತದೆ. ನಮ್ಮ ತುರ್ತು ನಿಗಾ ಘಟಕಗಳು ತುಂಬಿ ಹೋಗುತ್ತಿವೆ. ಮಕ್ಕಳಿಗೆ ನಾನ್-ಇನ್ವೆನ್ಸಿವ್ ವೆಂಟಿಲೇಟರ್ ಅಥವಾ HFNC ಅಗತ್ಯವಿರುತ್ತದೆ. ಸಾಮಾನ್ಯ ಶೀತ ಕೆಮ್ಮಿನ ಹೊರತಾಗಿ ಶ್ವಾಸಕೋಶ ಉರಿಯೂತದಿಂದ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ," ಎಂದು ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಸುಪ್ರಜಾ ಚಂದ್ರಶೇಖರ್ ಹೇಳಿದ್ದಾರೆ.

ಯಾವ ವಯಸ್ಸಿನ ಮಕ್ಕಳಲ್ಲಿ ಎಷ್ಟು ಉಸಿರಾಟ ಪ್ರಮಾಣ?

ಯಾವ ವಯಸ್ಸಿನ ಮಕ್ಕಳಲ್ಲಿ ಎಷ್ಟು ಉಸಿರಾಟ ಪ್ರಮಾಣ?

ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ನಿಮಿಷಕ್ಕೆ 60ಕ್ಕಿಂತ ಹೆಚ್ಚು ಬಾರಿ ಉಸಿರಾಡುವುದು. 5 ವರ್ಷದೊಳಗಿನ ಮಕ್ಕಳು ನಿಮಿಷಕ್ಕೆ 40ಕ್ಕಿಂತ ಹೆಚ್ಚು ಬಾರಿ ಉಸಿರಾಡುವುದು. 5 ವರ್ಷ ಮೇಲ್ಪಟ್ಟ ಮಕ್ಕಳು ಒಂದು ನಿಮಿಷಕ್ಕೆ 30ಕ್ಕಿಂತ ಹೆಚ್ಚು ಬಾರಿ ಉಸಿರಾಟ ಮಾಡುತ್ತಿದ್ದರೆ ಒಂದು ಬಾರಿ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಪರೀಕ್ಷಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದರ ಜೊತೆಗೆ ಮಕ್ಕಳಲ್ಲಿ ಮೂರು ದಿನಕ್ಕಿಂತ ಹೆಚ್ಚು ಜ್ವರ ಕಾಣಿಸಿಕೊಂಡರೆ, ಮಕ್ಕಳು ನೀರು ಕುಡಿಯುವುದನ್ನು ಕಡಿಮೆ ಮಾಡಿದ್ದರೆ ಹಾಗೂ ದಿನಕ್ಕೆ ಎರಡು ಬಾರಿ ವಾಂತಿ ಮಾಡಿಕೊಳ್ಳುತ್ತಿದ್ದರೆ ಇವು ರೋಗದ ಲಕ್ಷಣ ಆಗಿರುತ್ತವೆ.

ಪುಟ್ಟ ಶಿಶುಗಳಲ್ಲೂ ಶ್ವಾಸನಾಳ ಉರಿಯೂತ

ಪುಟ್ಟ ಶಿಶುಗಳಲ್ಲೂ ಶ್ವಾಸನಾಳ ಉರಿಯೂತ

ಬೆಂಗಳೂರಿನಲ್ಲಿ 2 ತಿಂಗಳಿನಿಂದ 2 ವರ್ಷದೊಳಗಿನ ಮಕ್ಕಳಲ್ಲಿ ಶ್ವಾಸನಾಳ ಉರಿಯೂತ ಸಮಸ್ಯೆಗಳಿಂದ ತುರ್ತು ನಿಗಾ ಘಟಕಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಎಲ್ಲ ರೋಗಿಗಳಲ್ಲಿ ಉಸಿರಾಟ ಸಮಸ್ಯೆಯು ಸಾಮಾನ್ಯ ಮತ್ತು ವೈರಲ್ ಲಕ್ಷಣವಾಗಿದೆ. ಇದು ಸಾಮಾನ್ಯವಾಗಿ ಕಾಲೋಚಿತ ಮತ್ತು ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಮಕ್ಕಳ ನಿಯಮಿತ ಲಸಿಕೆಗಳನ್ನು ಮುಂದೂಡಿರುವುದು ಒಂದು ಕಾರಣವಾಗಿರಬಹುದು," ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಮಕ್ಕಳ ಮಧ್ಯಸ್ಥಿಕೆಯ ಶ್ವಾಸಕೋಶಶಾಸ್ತ್ರಜ್ಞ ಡಾ.ಶ್ರೀಕಾಂತ್ ಜಿ ಟಿ ಹೇಳಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

ಕಳೆದ ಬಾರಿಗಿಂತ ಈ ಬಾರಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ

"ಹಿಂದಿನ ವರ್ಷಕ್ಕಿಂತ ಈ ವರ್ಷ ಅನಾರೋಗ್ಯಪೀಡಿತ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆಮ್ಲಜನಕ, HFNC ಮತ್ತು CPAP ಅಗತ್ಯವಿರುವ ಕುಟುಂಬಗಳು ತಡವಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿವೆ. ಶ್ವಾಸನಾಳ ಉರಿಯೂತ ಸಮಸ್ಯೆ ಹೊಂದಿರುವ ಮಕ್ಕಳು ಅಕಾಲಿಕ ಅವಧಿಯಲ್ಲಿ ಜನಿಸುತ್ತಿವೆ. ನವಜಾತ ಅವಧಿಯಲ್ಲಿ ವೆಂಟಿಲೇಟರ್ ಅಗತ್ಯವಿರುವವರಿಗೆ ದೀರ್ಘಕಾಲದ ಶ್ವಾಸಕೋಶ ರೋಗ, ಹೃದಯ ಸಂಬಂಧಿ ಕಾಯಿಲೆಗಳು ಗೋಚರಿಸುತ್ತಿವೆ," ಎಂದು ಡಾ ಅನಿಲ್ ಕುಮಾರ್ ಸಪಾರೆ ಹೇಳಿದ್ದಾರೆ.

Recommended Video

Glenn Maxwell ಅವರು RCBಯಲ್ಲಿನ ತಮ್ಮ ಅನುಭವ ಹಂಚಿಕೊಂಡರು | Oneindia Kannada

English summary
Bengaluru Hospitals witnessing a spike in cases of Bronchiolitis. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X