ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಕೋಟೆಯಲ್ಲಿ ಸಂಚಲನ ಮೂಡಿಸುತ್ತಿರುವ ಶರತ್ ಬಚ್ಚೇಗೌಡರ ಹೊಸ ಸುದ್ದಿ

|
Google Oneindia Kannada News

ಆಗರ್ಭ ಶ್ರೀಮಂತ ಎಂ.ಟಿ.ಬಿನಾಗರಾಜ್ ಎನ್ನುವ ಎದುರಾಳಿ, ರಾಷ್ಟ್ರೀಯ ಪಕ್ಷದ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತಿರುವಾಗ, ಪಕ್ಷೇತರ ಅಭ್ಯರ್ಥಿಯೊಬ್ಬರು ಪ್ರಬಲ ಪೈಪೋಟಿ ನೀಡಿ, ಅವರನ್ನು ಸೋಲಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದು ಅಪ್ಪ,ಮಗ.

ಅಪ್ಪ, ಮಗ ಅನ್ನುವ ಪದ ಅದು ಬರೀ ಜೆಡಿಎಸ್ಸಿಗೆ ಅನ್ವಯವಾಗಬೇಕಾಗಿಲ್ಲ. ಎಂಟಿಬಿಗೆ ಭರ್ಜರಿ ಶಾಕ್ ನೀಡಿ, ತಾತ್ಕಾಲಿಕವಾಗಿ ಅವರ ಎಲ್ಲಾ ರಾಜಕೀಯ ಕನಸಿಗೆ ಹಿನ್ನಡೆ ನೀಡಿದವರು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಅವರ ಮಗ ಶರತ್ ಬಚ್ಚೇಗೌಡ.

ಕಾಂಗ್ರೆಸ್ ಸೇರುವ ವಿಚಾರ; ಮೌನ ಮುರಿದ ಶರತ್ ಬಚ್ಚೇಗೌಡ!ಕಾಂಗ್ರೆಸ್ ಸೇರುವ ವಿಚಾರ; ಮೌನ ಮುರಿದ ಶರತ್ ಬಚ್ಚೇಗೌಡ!

ಹೊಸಕೋಟೆ ಅಸೆಂಬ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದರೂ, ನೇರ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಕ್ಯಾಂಡಿಡೇಟ್ ಎಂಟಿಬಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡರ ನಡುವೆ. ಜೆಡಿಎಸ್ ಇಲ್ಲಿ ನೇರವಾಗಿ ಶರತ್ ಬಚ್ಚೇಗೌಡ್ರಿಗೆ ತನ್ನ ಬೆಂಬಲವನ್ನು ನೀಡಿತ್ತು.

ಉಪಚುನಾವಣೆಯನ್ನು ನಿರೀಕ್ಷೆಗೂ ಮೀರಿ ಸುಲಭವಾಗಿ ಗೆದ್ದಿದ್ದ ಶರತ್ ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿದ್ದು ರಹಸ್ಯವಾಗಿ ಏನೂ ಉಳಿದಿರಲಿಲ್ಲ. ಈಗ, ಶರತ್, ಜೆಡಿಎಸ್ ವರಿಷ್ಠ ದೇವೇಗೌಡ್ರನ್ನು ಭೇಟಿಯಾಗಿದ್ದಾರೆ.

ಅಖಾಡಕ್ಕಿಳಿದ ಡಿಕೆಶಿ; ಹೊಸಕೋಟೆಯಲ್ಲೊಂದು ಬ್ರೇಕಿಂಗ್ ನ್ಯೂಸ್!ಅಖಾಡಕ್ಕಿಳಿದ ಡಿಕೆಶಿ; ಹೊಸಕೋಟೆಯಲ್ಲೊಂದು ಬ್ರೇಕಿಂಗ್ ನ್ಯೂಸ್!

ಶರತ್ ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಯುವಕರೇ ಹೇಳಿದ್ದರು

ಶರತ್ ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಯುವಕರೇ ಹೇಳಿದ್ದರು

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಿಯೋಜಿತರಾದ ಮೇಲೆ, ಯುವಕರ ಬೆಂಬಲ ಇರುವ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದು ಕ್ಷೇತ್ರದಲ್ಲಿ ಪಕ್ಷ ಕಟ್ಟುವ ತಂತ್ರವನ್ನು ರೂಪಿಸಿದಿದ್ದು ಗೊತ್ತಿರುವ ವಿಚಾರ. ಶರತ್, ಡಿಕೆಶಿ, ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳಿಗೆ, ಶರತ್ ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಯುವಕರೇ ನೀರೆರೆದಿದ್ದರು. ಆದರೆ, ಆ ಸುದ್ದಿ ಆಮೇಲೆ ತಣ್ಣಗಾಗಿತ್ತು.

ದೇವೇಗೌಡ್ರನ್ನು ಭೇಟಿಯಾದ ಶರತ್ ಬಚ್ಚೇಗೌಡ

ದೇವೇಗೌಡ್ರನ್ನು ಭೇಟಿಯಾದ ಶರತ್ ಬಚ್ಚೇಗೌಡ

ಈಗ, ಎರಡು ದಿನದ ಹಿಂದೆ, ಶರತ್ ಬಚ್ಚೇಗೌಡ, ಜೆಡಿಎಸ್ ವರಿಷ್ಠ ದೇವೇಗೌಡ್ರನ್ನು ಭೇಟಿಯಾಗಿದ್ದಾರೆ. ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಗೌಡ್ರ, ಆಶೀರ್ವಾದ ಪಡೆಯಲು, ಶರತ್ ಬಚ್ಚೇಗೌಡ, ಅವರನ್ನು ಭೇಟಿಯಾಗಿದ್ದರು ಎನ್ನುವುದು ಸುದ್ದಿ. "ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಲು ಹೋಗಿದ್ದೆ" ಎಂದು ಶರತ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಆದರೆ..

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ

ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದಿದ್ದ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ 11,486 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಪಕ್ಷೇತರರಾಗಿ ಗೆದ್ದಿದ್ದರಿಂದ ಯಾವ ಪಕ್ಷದ ಶ್ರೀರಕ್ಷೆಯೂ ಶರತ್ ಗೆ ಇಲ್ಲ. ಹಾಗಾಗಿಯೇ, ಡಿಕೆಶಿ, ಯುವ ನಾಯಕ, ಶರತ್ ನನ್ನು ಸೆಳೆಯಲು ಪ್ರಯತ್ನಿಸಿರುವುದು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯಕ್ರಮ

ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯಕ್ರಮ

ಆದರೆ, ಈಗ ಶರತ್, ದೇವೇಗೌಡ್ರನ್ನು ಭೇಟಿಯಾಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯಕ್ರಮದಲ್ಲೂ ಶರತ್, ಗೌಡ್ರನ್ನು ಭೇಟಿಯಾಗಿದ್ದರು. ಆದರೆ, ಗೌಡ್ರ ನಿವಾಸದಲ್ಲಿ, ಶರತ್ ಅವರನ್ನು ಭೇಟಿಯಾಗಿದ್ದು, ಬರೀ ಆಶೀರ್ವಾದ ಪಡೆಯಲಿಕ್ಕಾ, ಅಥವಾ ಅದರ ಹಿಂದೆ ರಾಜಕೀಯ ಇದೆಯಾ ಎನ್ನುವುದು ಗೊತ್ತಾಗಬೇಕಿದೆ.

English summary
Hoskote Independent MLA Sharath Bachegowda Met JDS Supremo Deve Gowda Two Days Back
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X