• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಗೆ ಮತ್ತೆ ಸೆಡ್ಡು ಹೊಡೆದ ಶಾಸಕ ಶರತ್ ಬಚ್ಚೇಗೌಡ

|
   MTB ನಾಗರಾಜ್ ಗೆ ಮತ್ತೆ ತಲೆನೋವು ತಂದಿಟ್ಟ ಶಾಸಕ | BJP | MLA | Karnataka

   ಬೆಂಗಳೂರು, ಫೆಬ್ರವರಿ 07: ಬಿಜೆಪಿ ಯಿಂದ ಟಿಕೆಟ್ ವಂಚಿತರಾಗಿ ಪಕ್ಷೇತರವಾಗಿ ಸ್ಪರ್ಧಿಸಿ ಬಿಜೆಪಿಯ ಪ್ರಮುಖ ಅಭ್ಯರ್ಥಿ ಎಂಟಿಬಿ ನಾಗರಾಜು ಅನ್ನು ಉಪಚುನಾವಣೆಯಲ್ಲಿ ಸೋಲಿಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮತ್ತೆ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.

   ಹೊಸಕೋಟೆ ನಗರಸಭೆ ಚುನಾವಣೆಗಳು ಇದೇ 9 ರಂದು ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲಿಗರು ಎಲ್ಲಾ 31 ವಾರ್ಡ್‌ಗಳಲ್ಲಿಯೂ ಸ್ಪರ್ಧಿಸಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿಗಳಿಗೆ ಮತ್ತು ಕ್ಷೇತ್ರದಲ್ಲಿ ಅಲುಗಾಡುತ್ತಿರುವ ಬಿಜೆಪಿಯನ್ನು ಭದ್ರಗೊಳಿಸಲು ಯತ್ನಿಸುತ್ತಿರುವ ಅನರ್ಹ ಎಂಟಿಬಿ ನಗಾರಾಜು ಅವರಿಗೆ ತಲೆನೋವು ತಂದಿದ್ದಾರೆ.

   ನನ್ನ ಸೋಲಿಗೆ ಬಿಜೆಪಿಯವರೇ ಕಾರಣ: ಮಾತಿನ ಕ್ಷಿಪಣಿ ಎಸೆದ ಎಂ.ಟಿ.ಬಿ ನಾಗರಾಜ್!

   ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಲ್ಲಿ ಎಂಟಿಬಿ ವಿರುದ್ಧ ಸೋತಿದ್ದ ಶರತ್ ಬಚ್ಚೇಗೌಡ, ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದರು. ಆದರೆ ಟಿಕೆಟ್ ನಿರಾಕರಿಸಿದ ಕಾರಣ ಸ್ವಾಭಿಮಾನಿ ಬಳಗ ಕಟ್ಟಿಕೊಂಡು ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿ ಎಂಟಿಬಿ ವಿರುದ್ಧ ಜಯಗಳಿಸಿದರು.

   ಸ್ವಾಭಿಮಾನಿ ಬಳಗಕ್ಕೆ ಪಕ್ಷದ ರೂಪ ಕೊಟ್ಟ ಶರತ್

   ಸ್ವಾಭಿಮಾನಿ ಬಳಗಕ್ಕೆ ಪಕ್ಷದ ರೂಪ ಕೊಟ್ಟ ಶರತ್

   ಚುನಾವಣೆ ಗೆದ್ದ ನಂತರ ಸ್ವಾಭಿಮಾನಿ ಬಳಗಕ್ಕೆ ಪಕ್ಷದ ರೂಪವನ್ನು ಶರತ್ ಬಚ್ಚೇಗೌಡ ಕೊಟ್ಟಿದ್ದಾರೆ. ಶರತ್ ಬಚ್ಚೇಗೌಡ ನೇತೃತ್ವದ 'ಭಾರತೀಯ ಪ್ರಜಾ ಪಕ್ಷ' ವನ್ನು ನೊಂದಾವಣಿ ಆಗದ ರಾಜಕೀಯ ಪಕ್ಷ ಎಂದು ಚುನಾವಣಾಧಿಕಾರಿಗಳು ಗುರುತಿಸಿದ್ದು, ವಾರ್ಡ್‌ ಚುನಾವಣೆ ಅಭ್ಯರ್ಥಿಗಳನ್ನು ಹಾಗೆಯೇ ಗುರುತಿಸಿದ್ದಾರೆ.

   ಎಲ್ಲಾ ವಾರ್ಡ್‌ಗಳಲ್ಲಿಯೂ ಶರತ್ ಬೆಂಬಲಿತ ಅಭ್ಯರ್ಥಿ ಕಣಕ್ಕೆ

   ಎಲ್ಲಾ ವಾರ್ಡ್‌ಗಳಲ್ಲಿಯೂ ಶರತ್ ಬೆಂಬಲಿತ ಅಭ್ಯರ್ಥಿ ಕಣಕ್ಕೆ

   ಹೊಸಕೋಟೆ ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿದ್ದು ಎಲ್ಲ ವಾರ್ಡ್‌ಗಳಲ್ಲಿ ಶರತ್ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಶರತ್ ಬಚ್ಚೇಗೌಡ ಅವರು ಹಸಿರು ಶಾಲು ಹೊದ್ದು ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಮಾಡುತ್ತಿದ್ದು, ಎಂಟಿಬಿ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳಿಗೆ ಭಾರಿ ಪೈಪೋಟಿ ನೀಡುತ್ತಿದ್ದಾರೆ.

   ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಎಎಪಿ ಕಣಕ್ಕೆ

   ಕುಕ್ಕರ್ ಚಿಹ್ನೆಯನ್ನು ಪಡೆಯಲು ಯಶಸ್ವಿ

   ಕುಕ್ಕರ್ ಚಿಹ್ನೆಯನ್ನು ಪಡೆಯಲು ಯಶಸ್ವಿ

   ಶರತ್ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳು ಕುಕ್ಕರ್ ಚಿಹ್ನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಂತರದ ಸ್ಥಾನವನ್ನು ಮತದಾನ ಪಟ್ಟಿಯಲ್ಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕುಕ್ಕರ್ ಚಿಹ್ನೆ ಶರತ್ ಬಚ್ಚೇಗೌಡ ಅವರು ಚುನಾಚಣೆಗೆ ನಿಂತಾಗ ಸಿಕ್ಕಿದ್ದ ಚಿಹ್ನೆಯಾಗಿದ್ದು ಕುಕ್ಕರ್ ಚಿಹ್ನೆ ಕ್ಷೇತ್ರದಲ್ಲಿ ಪರಿಚಿತ ಚುನಾವಣಾ ಚಿಹ್ನೆಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ತಲೆನೋವು ತಂದಿದೆ.

   ಎಂಟಿಬಿ ನಾಗರಾಜ್ ಮತ್ತು ಬಿಜೆಪಿ ಗೆ ಸವಾಲು ಹಾಕಿದ ಸಂಸದ ಬಿ.ಎನ್.ಬಚ್ಚೇಗೌಡ

   ಸಚಿವ ಸ್ಥಾನ ಸಿಗದ ನಿರಾಸೆಯಲ್ಲಿರುವ ಎಂಟಿಬಿ ನಾಗರಾಜು

   ಸಚಿವ ಸ್ಥಾನ ಸಿಗದ ನಿರಾಸೆಯಲ್ಲಿರುವ ಎಂಟಿಬಿ ನಾಗರಾಜು

   ಇತ್ತ ಎಂಟಿಬಿ ನಾಗರಾಜು ಅವರಿಗೆ ಉಪಚುನಾವಣೆಯಲ್ಲಿ ಸೋತದ್ದಷ್ಟೆ ಅಲ್ಲದೆ ಸಚಿವ ಸ್ಥಾನ ಕೈತಪ್ಪಿದ ನಿರಾಸೆ ಮತ್ತೊಂದೆಡೆಯಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಅಷ್ಟೆ ಅಲ್ಲದೆ ಬಿಜೆಪಿ ಪರ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕರಪತ್ರಗಳಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಚಿತ್ರವನ್ನು ಕೈಬಿಟ್ಟಿರುವುದು ಸಹ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

   ಫೆಬ್ರವರಿ 9 ರಂದು ನಗರಸಭೆ ಚುನಾವಣೆ

   ಫೆಬ್ರವರಿ 9 ರಂದು ನಗರಸಭೆ ಚುನಾವಣೆ

   ಹೊಸಕೋಟೆ ಚುನಾವಣೆ ದಿನಾಂಕ 9 ನೇ ತಾರೀಖು ನಡೆಯಲಿದೆ. ಕಳೆದ ವಾರ್ಡ್‌ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ನಗರಸಭೆ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಭಾರಿ ಪೈಪೋಟಿ ಎದುರಾಗಿದೆ.

   English summary
   Hosakote independent MLA Sharath Bache Gowda challenged BJP again in Hosakote municipality elections.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X