ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುರಂತ ಸೋಲು; ಶತಕೋಟಿ ಒಡೆಯ ಎಂಟಿಬಿ ಹೇಳಿದ್ದೇನು?

|
Google Oneindia Kannada News

Recommended Video

MTB ನಾಗರಾಜ್ ಸೋಲೋಕೆ ಇವರಿಬ್ಬರೇ ಕಾರಣ..? | Oneindia Kannada

ಬೆಂಗಳೂರು, ಡಿಸೆಂಬರ್ 9: ಉಪ ಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಿದ್ದ ಎಂ.ಟಿ.ಬಿ.ನಾಗರಾಜ್ ಅವರು ದುರಂತ ಸೋಲು ಖಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರು ನಾಗರಾಜ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?

ಸೋಲಿನ ಬಳಿಕ ಬಚ್ಚೇಗೌಡ ಕುಟುಂಬದ ಮೇಲೆ ಸುದ್ದಿಗೋಷ್ಟಿ ನಡೆಸಿ ತಮ್ಮ ವ್ರ ಅಸಮಾಧಾನ ತೋಡಿಕೊಂಡಿರುವ ಎಂಟಿಬಿ ಅವರು, ಬಚ್ಚೇಗೌಡ ಹಾಗೂ ಅವರ ಮಗ ಶರತ್ ಬಚ್ಚೇಗೌಡ ಅವರೇ ನನ್ನ ಸೋಲಿಗೆ ಕಾರಣ. ಅವರು ನನಗೆ ಮೋಸ ಮಾಡಿದರು. ಬಿಜೆಪಿಯಲ್ಲಿದ್ದೂ, ಪಕ್ಷದ ಸಿದ್ದಾಂತಕ್ಕೆ ತಕ್ಕ ಹಾಗೇ ನಡೆಯದೇ ಅವರು ಮಗನ ಪರವಾಗಿ ಕೆಲಸ ಮಾಡಿ ನನಗೆ ಅವಮಾನ ಮಾಡಿದ್ದಾರೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರುಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರು

ಬಿ ಎನ್ ಬಚ್ಚೇಗೌಡ ಅವರಿಗೆ ಪುತ್ರ ವ್ಯಾಮೋಹ ಜಾಸ್ತಿ. ಒಕ್ಕಲಿಗರ ಮತಗಳು ತಮ್ಮ ಕೈ ಬಿಟ್ಟು ಹೋಗದಂತೆ ನೋಡಿಕೊಂಡರು. ನನ್ನ ಮೇಲೆ ನಿಜವಾದ ಕನಿಕರ ಇದ್ದರೆ ಬಿಜೆಪಿ ಮುಖಂಡರು ಆ ಇಬ್ಬರ ಮೇಲೂ ಶಿಸ್ತು ಕ್ರಮ ಕೈಗೊಳ್ಳಬೇಕು. ಶರತ್ ಬಚ್ಚೇಗೌಡನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

Hosakote defeated BJP Candidate reaction on bypoll result

ಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲ

ಉಪ ಚುನಾವಣೆಯಲ್ಲಿ ಹೊಸಕೋಟೆ ರಾಜ್ಯದ ಗಮನ ಸೆಳೆದಿತ್ತು. ಶತಕೋಟಿ ಒಡೆಯರಾದ ಎಂಟಿಬಿ ಹಾಗೂ ತಮ್ಮ ಹಿಂದಿನ ಎದುರಾಳಿ ಶರತ್ ನನ್ನು ಪಕ್ಷೇತರವಾಗಿ ಎದುರಿಸಲು ಆಗದೇ ಬಿದ್ದು ಹೋಗಿದ್ದಾರೆ. ಅವರು 11 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಶರತ್ ಬಚ್ಚೇಗೌಡ ಅವರು ಸ್ವಾಭಿಮಾನಿ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಎಂಟಿಬಿ ನಾಗರಾಜ ಅವರ ಮುಂದಿನ ನಡೆ ಇನ್ನೂ ನಿರ್ಧಾರವಾಗಿಲ್ಲ. ಮತದಾರರ ತೀರ್ಪು ಒಪ್ಪಿಕೊಂಡಿದ್ದು, ಬಿಜೆಪಿಯಲ್ಲಿ ನನ್ನ ಮುಂದಿನ ಭವಿಷ್ಯವನ್ನು ಕಾಯ್ದು ನೋಡುವುದಾಗಿ ಹೇಳಿದ್ದಾರೆ.

English summary
Hosakote defeat BJP Candidate MTB Nagaraj reaction on bypoll result. he said, B N Bacchegouda cheated me. bjp tops takes action againest bacchegouda. he demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X