ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.12ರಿಂದ ಹಾಪ್‌ಕಾಮ್ಸ್‌ನಲ್ಲಿ ದ್ರಾಕ್ಷಿ, ಕಲ್ಲಂಗಡಿ ಮೇಳ

|
Google Oneindia Kannada News

ಬೆಂಗಳೂರು, ಫೆ. 11 : ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣು ಪ್ರಿಯರಿಗೆ ಸಿಹಿ ಸುದ್ದಿ. ಹಾಪ್‌ಕಾಮ್ಸ್ ಫೆ.12ರಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳವನ್ನು ಆಯೋಜಿಸಿದೆ. ನಗರದ ಎಲ್ಲಾ ಮಳಿಗೆಗಳಲ್ಲಿ ವಿವಿಧ ಬಗೆಯ ಹಣ್ಣುಗಳು ಲಭ್ಯವಿರಲಿವೆ.

ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಫೆ.12ರಂದು ಆರಂಭಗೊಳ್ಳಲಿದ್ದು ಬೆಂಗಳೂರಿನ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲ್ಲಂಗಡಿ ಮತ್ತು ದ್ರಾಕ್ಷಿ ಹಣ್ಣುಗಳು ದೊರೆಯಲಿವೆ. ಶೇ.10ರ ರಿಯಾಯಿತಿ ದರದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣು ಮಾರಾಟವಾಗಲಿದೆ. [ಲಾಲ್ ಬಾಗ್ ಕೆಂಪುಕೋಟೆ ವಿಶೇಷತೆಗಳೇನು?]

hop coms

ಕೇವಲ ಹಾಪ್‌ಕಾಮ್ಸ್‌ಗಳಲ್ಲಿ ಮಾತ್ರವಲ್ಲದೇ ಅಧಿಕ ಜನಸಂಚಾರ ಇರುವ ಕಡೆ ಮತ್ತು ಸಾಫ್ಟ್‌ವೇರ್ ಕಂಪನಿಗಳು, ವಿವಿಧ ಕಾರ್ಖನೆಗಳ ಮುಂಭಾಗದಲ್ಲಿ ಸಂಚಾರಿ ವಾಹನಗಳ ಮೂಲಕ ಹಣ್ಣುಗಳನ್ನು ಮಾರಾಟ ಮಾಡಲು ಹಾಪ್‌ಕಾಮ್ಸ್ ಸಿದ್ಧತೆ ನಡೆಸಿದೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]

ಈ ಮೇಳಕ್ಕಾಗಿಯೇ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್, ಫ್ಲೇಂ, ಗ್ಲೋಬ್ ಮುಂತಾದ ತಳಿಯ ದ್ರಾಕ್ಷಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮುಂತಾದ ಜಿಲ್ಲೆಗಳಿಂದ ಬೆಂಗಳೂರಿಗೆ ಆಮಿಸುತ್ತಿದೆ. ದ್ರಾಕ್ಷಿ ಮತ್ತು ಕಲ್ಲಂಗಡಿಯ ಜೊತೆಗೆ ಒಣ ದ್ರಾಕ್ಷಿಯೂ ಹಾಪ್‌ಕಾಮ್ಸ್‌ನಲ್ಲಿ ದೊರೆಯಲಿದೆ.

ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಮತ್ತು ಜನರ ನಡುವೆ ಮಾರಾಟಕ್ಕೆ ವೇದಿಕೆ ಕಲ್ಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 800 ಟನ್ ದ್ರಾಕ್ಷಿ ಹಾಗೂ 1 ಸಾವಿರ ಟನ್ ಕಲ್ಲಂಗಡಿ ಹಣ್ಣಿನ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ.

English summary
Horticultural Producers' Cooperative Marketing and Processing Society (HOPCOMS) will host grapes and watermelon mela form February 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X