ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ವಿನಿ ಅಂಗಡಿ, ತಿಮ್ಮಕ್ಕ, ನಾಗತಿಹಳ್ಳಿ ರಮೇಶ್ ಗೆ ಸನ್ಮಾನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಹೂವಿನಹೊಳೆ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಅನಿಕೇತನ ಕನ್ನಡ ಬಳಗ ಮತ್ತು ಕುವೆಂಪು ಕಲಾ ನಿಕೇತನ ಸಹಯೋಗದಲ್ಲಿ ಮೂವರು ಸಾಧಕರಿಗೆ ವಿಶ್ವಾತ್ಮ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.

ಹೂವಿನ ಹೊಳೆ ಪ್ರತಿಷ್ಠಾನ, ಸರ್ಕಾರಿ ನೌಕರರ ಸಂಘ, ಅನಿಕೇತನ ಕನ್ನಡ ಬಳಗ ಮತ್ತು ಕುವೆಂಪು ಕಲಾ ನಿಕೇತನ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಮಾರಂಭ ಯಶಸ್ವಿಯಾಗಿ ನಡೆಯಿತು.

ವಿಶ್ವಾತ್ಮಕ ನೆಲೆಯಲ್ಲಿ ಬದುಕಿನ ಉದ್ದಕ್ಕೂ ಯಾವುದೇ ಜಾತಿ -ಧರ್ಮ - ಮತಕ್ಕೆ ಸೀಮಿತ ವಾಗದೆ ಜಗವೆಲ್ಲ ಒಂದೇ - ಮನುಕುಲವೆಲ್ಲ ಒಂದೇ ಎನ್ನುವ ರೀತಿ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾನವೀಯ ಕಳಕಳಿಯ ಸೇವೆಯನ್ನು ಮಾಡುತ್ತಿರುವ ಮೂರು ಜನ ಸಾಧಕರನ್ನು ''ವಿಶ್ವಾತ್ಮ'' ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

Hoovina hole Trust Vishwathma Award Presentation Ceremony

2015ನೇ ಸಾಲಿನ ಪ್ರಶಸ್ತಿಯನ್ನು ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕ, ಕವಿ ನಾಗತಿಹಳ್ಳಿ ರಮೇಶ್ ಹಾಗು ವಿಶಿಷ್ಟ ಚೇತನಗಳ ಸ್ಪೂರ್ತಿ ಸಂಕೇತ ಕುಮಾರಿ ಅಶ್ವಿನಿ ಅಂಗಡಿ ಅವರುಗಳಿಗೆ ಪ್ರದಾನ ಮಾಡಲಾಗಿದೆ, ಪ್ರಶಸ್ತಿಯು ತಲಾ 25 ಸಾವಿರ ನಗದು, ಸ್ಮರಣಿಕೆ , ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಮೂರ್ತಿ ಎ. ಜೆ ಸದಾಶಿವ ಅವರು ನೆರವೇರಿಸಿದರು ,ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಪಿ. ರಾಮಯ್ಯಅವರು ವಹಿಸಿದ್ದರು, ಪ್ರಶಸ್ತಿ ಪ್ರದಾನವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ . ಎಸ್. ದೊರೆಸ್ವಾಮಿ ಅವರು ಮಾಡಿದರು.

ಮುಖ್ಯ ಅತಿಥಿಗಳಾಗಿ ಪ್ರೊ. ಚಂಪಾ ಅವರು, ಡಾ. ನಲ್ಲೂರು ಪ್ರಸಾದ್ ಅವರು, ವೇದಿಕೆಯಲ್ಲಿ ಜೊತೆಯಾದರು. ವಿಶೇಷ ಆಹ್ವಾನಿತರಾಗಿ ರಾಕೇಶ್ ಅಗರ್ ವಾಲ್, ಸರ್ಕಾರಿ ನೌಕರರ ಸಂಘದ ಪುಟ್ಟಸ್ವಾಮಿ, ಅನಿಕೇತನ ಮಾಯಣ್ಣ , ಕುವೆಂಪು ಕಲಾ ನಿಕೇತನದ ಡಿ . ಪ್ರಕಾಶ್ , ಹಾಗೂ ಪ್ರಶಾಂತ್ ಕಲ್ಲೂರು ಅವರುಗಳು ಸಹ ಉಪಸ್ಥಿತರಿದ್ದರು.

Hoovina hole Trust Vishwathma Award Presentation Ceremony

ಈ ಪ್ರಶಸ್ತಿಯನ್ನು ನಾಡಿನ ಹಿರಿಯ ಚೇತನಗಳಾದ ನ್ಯಾಯಮೂರ್ತಿ ಡಾ . ಎಂ . ಎನ್. ವೆಂಕಟಾಚಲಯ್ಯ , ನ್ಯಾಯಮೂರ್ತಿ ಎ. ಜೆ ಸದಾಶಿವ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ . ಎಸ್. ದೊರೆಸ್ವಾಮಿ ,ಹಿರಿಯ ಪತ್ರಕರ್ತರಾದ ಪಿ. ರಾಮಯ್ಯ , ಹಿರಿಯ ಸಾಹಿತಿಗಳಾದ ಪ್ರೊ.ಚಂಪಾ, ಡಾ. ಆರ್. ಕೆ ನಲ್ಲೂರು ಪ್ರಸಾದ್, ಹೀಗೆ ವಿವಿಧ ರಂಗದ ಹಿರಿಯ - ಕಿರಿಯ ತಲೆಮಾರಿನ 50 ಕ್ಕೂ ಹೆಚ್ಚು ಗಣ್ಯರ ಸಲಹೆ ಸೂಚನೆಯನ್ನು ಪಡೆದು ಪ್ರತಿ ವರ್ಷ ಇಲ್ಲವೇ ಮೂರು ವರ್ಷಕ್ಕೆ ಒಮ್ಮೆ ಈ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದೆ.

ಮುಂದಿನ ದಿನಗಳಲ್ಲಿ ಹೂವಿನಹೊಳೆ ಪ್ರತಿಷ್ಠಾನ ಇನ್ನು ಅನೇಕ ಅನೇಕ ಸಾಮಾಜಿಕ - ಶೈಕ್ಷಣಿಕ - ಸಾಹಿತ್ಯಿಕ - ಸಾಂಸ್ಕೃತಿಕ ಸೇವೆಗಳನ್ನು - ಕೆಲಸಗಳನ್ನು ಮಾಡುವ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಹೂವಿನಹೊಳೆ ಪ್ರತಿಷ್ಠಾನದ ಮುಖ್ಯಸ್ಥ ನಂದಿ ಜೆ ಹೂವಿನಹೊಳೆ ತಿಳಿಸಿದರು.

ನಂದಿ ಜೆ. ಹೂವಿನಹೊಳೆ ಸ್ಥಾಪಕ- ಅಧ್ಯಕ್ಷ : ಹೂವಿನಹೊಳೆ ಪ್ರತಿಷ್ಠಾನ
ನಾಯ್ಕಲ್ ದೊಡ್ಡಿ ಚಂದ್ರು , ಮಂಜು ಎಂ . ದೊಡ್ಡಮನಿ
ದೂ : 8088081008, 9008666668, 7353434040
E-MAIL: [email protected]
BLOG: nimmanandi.blogspot.in

English summary
Hoovina hole Trust led By Nandi J Hoovinahole in association with Anikethana, Kuvempu kala Niketan presented Vishwathma Award to three eminent persons Ashwini Angadi, Salumarada Thimmakka and Nagathihalli Ramesh. The event held at Kannada Sahithya Parishath, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X