ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನಿ ಟ್ರಾಪ್ : ಸಿಸಿಬಿ ಇನ್ ಸ್ಪೆಕ್ಟರ್ ಹೆಸರಿನಲ್ಲಿ ಸುಲಿಗೆ

|
Google Oneindia Kannada News

ಬೆಂಗಳೂರು, ನವೆಂಬರ್21: ಸಿಸಿಬಿ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಉದ್ಯಮಿ ಅಕ್ರಮ ಸಂಬಂಧದ ಖಾಸಗಿ ವಿಡಿಯೋ ಬಿಡುಗಡೆ ಮಡುವುದಾಗಿ ಹೆದರಿಸಿ ಸುಲಿಗೆ ಮಾಡಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಕೇಬಲ್ ಆಪರೇಟರ್ ಮಂಜುನಾಥ್ ಹಣ ಕಳೆದುಕೊಂಡಿದ್ದು, ನಾಗಸಂದ್ರ ನಿವಾಸಿ, ಅರುಷ್ ಎಂಟರ್‌ ಪ್ರೈಸಸ್ ಫೈನಾನ್ಸ್ ಕಂಪನಿ ಮಾಲೀಕ ಶ್ರೀನಿವಾಸ್ ಗದ್ದುಗಿ ಬಂಧಿತ ಆರೊಪಿ. ಕೇಬಲ್ ನೆಟ್‌ವರ್ಕ್ ಕಚೇರಿ ಇಟ್ಟಿಕೊಂಡಿರುವ ಮಂಜುನಾಥ್ ಮದುವೆಯಾಗಿದ್ದರೂ ಪಕ್ಕದ ಮನೆಯ ಯುವತಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಯುವತಿ ಜತೆ ಸುಪ್ರೀಂ ಲಾಡ್ಜ್ ಗೆ ಹೋಗಿದ್ದರು. ಮಂಜುನಾಥ್ ಮೊಬೈಲ್ ಗೆ ಅನಾಮಿಕ ವ್ಯಕ್ತಿ ಕರೆ ಮಾಡಿ, ನಾನು ಸಿಸಿಬಿ ಇನ್‌ ಸ್ಪೆಕ್ಟರ್ ರಾಜು, ನೀನು ಯುವತಿ ಜತೆ ಖಾಸಗಿಯಾಗಿ ಕಳೆದ ವಿಡಿಯೋ ನನ್ನ ಬಳಿಯಿದೆ. ನೀನು ನಂಬರ್ ಇಟ್ಟುಕೋ.. ಮತ್ತೆ ನೀನೇ ಕರೆ ಮಾಡಬೇಡ. ನಾವು ಬ್ಯುಸಿಯಿದ್ದೇವೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.

ಹನಿಟ್ರ್ಯಾಪ್ ಜಾಲ; ಹೆದರದೇ ಮಾಹಿತಿ ನೀಡಿ ಎಂದ ಡಿಸಿಪಿಹನಿಟ್ರ್ಯಾಪ್ ಜಾಲ; ಹೆದರದೇ ಮಾಹಿತಿ ನೀಡಿ ಎಂದ ಡಿಸಿಪಿ

ಇದಾದ ಮರು ದಿನವೇ ಜ್ಯೋತಿ ಅವರು ಮಂಜುನಾಥ್ ಅವರನ್ನು ಸಂಪರ್ಕಿಸಿ, ನನಗೆ ಸಿಸಿಬಿ ಇನ್‌ಸ್ಪೆಕ್ಟರ್ ಕರೆ ಮಾಡಿದ್ದರು. ನಮ್ಮ ಕಂಪನಿ ಮಾಲೀಕ ಶ್ರೀನಿವಾಸ್ ಗದ್ದಿಗೆ ಜತೆ ನಮ್ಮಿಬ್ಬರ ಲಾಡ್ಜ್ ವಿಚಾರ ಮಾತನಾಡಿದ್ದಾರೆ. ನೀವು ನಮ್ಮ ಕಚೇರಿಗೆ ಬಂದು ಮಾಲೀಕರ ಬಳಿ ಮಾತನಾಡಲು ಹೇಳಿದ್ದಾರೆ ಎಂದು ತಿಳಿಸಿದ್ದಾಳೆ. ವಿಷಯ ಮನೆಯಲ್ಲಿ ಗೊತ್ತಾದರೆ ಭಯ ಎನ್ನುವ ಕಾರಣಕ್ಕೆ ಮಂಜುನಾಥ್ ಶ್ರೀನಿವಾಸ್ ಗದ್ದುಗೆ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ನಿನ್ನ ಲಾಡ್ಜ್ ವಿಚಾರದ ಬಗ್ಗೆ ಸಿಸಿಬಿ ಇನ್‌ ಸ್ಪೆಕ್ಟರ್ ಮಾತನಾಡಿದ್ದಾರೆ. ಇದು ವಯಸ್ಸಿನಲ್ಲಿ ಸಹಜ. ಪ್ರಕರಣ ಮುಚ್ಚಿ ಹಾಕಬೇಕಾದರೆ ಹತ್ತು ಲಕ್ಷ ರೂ. ಕೊಡಬೇಕು ಎಂದು ಹೇಳಿದ್ದಾರೆ. ಆದರೆ ನಾನು ಮಾತನಾಡಿ ಆರು ಲಕ್ಷ ರೂ.ಗೆ ಒಪ್ಪಿಸಿದ್ದೇನೆ. ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಂಜುನಾಥ್, ಅಷ್ಟು ಹಣ ನನ್ನ ಬಳಿ ಇಲ್ಲ ಎಂದು ಹೇಳಿದ್ದು, ಜ್ಯೋತಿ ಕೈಯಲ್ಲಿ ಐದು ಲಕ್ಷ ರೂ . ಕೊಟ್ಟು ಕಳುಹಿಸಿದ್ದಾರೆ.

Honey trap extortion: Financiar arrested By police

ಇದಾದ ಬಳಿಕ ಶ್ರೀನಿವಾಸ್ ನನ್ನು ಪ್ರಕರಣದ ಬಗ್ಗೆ ವಿಚಾರಸಿದಾಗ, ಯುವತಿಯನ್ನು ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ. ಚಾಮರಾಜಪೇಟೆ ಸಿಸಿಬಿ ಕಚೇರಿ ಬಳಿ ಕರೆದುಕೊಂಡು ಹೋಗಿದ್ದು, ಕರೋನಾ ಕಾರಣದಿಂದ ಕಚೇರಿ ಒಳಗೆ ಬಿಟ್ಟುಕೊಂಡಿಲ್ಲ. ಬದಲಿಗೆ ಚಾಮರಾಜಪೇಟೆಯಲ್ಲಿ ಅಪಾರ್ಟ್ ಮೆಂಟ್‌ನಲ್ಲಿ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಮಂಜುನಾಥ್ ಭಯಗೊಂಡಿದ್ದು, ವಿಷಯವನ್ನು ಮನೆಯಲ್ಲಿ ತಿಳಿಸಿದ್ದಾರೆ. ಪತ್ನಿ ಜತೆ ರಂಪಾಟವಾಗಿದೆ. ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲು 9 ಲಕ್ಷ ರೂ. ನೀಡುವಂತೆ ಶ್ರೀನಿವಾಸ್ ತಿಳಿಸಿದ್ದಾರೆ. ವಿಡಿಯೋ ನೋಡಿದ್ದಾಗಿ ಯುವತಿ ಹೇಳಿದ್ದರಿಂದ ಭಯಗೊಂಡ ಮಂಜುನಾಥ್ ಅಷ್ಟು ದುಡ್ಡು ಕೊಡಲು ಸಾಧ್ಯವಿಲ್ಲ ಎಂದು ಮಂಜುನಾಥ್ ಕೇಳಿಕೊಂಡರೂ ಬಿಟ್ಟಿಲ್ಲ.

Recommended Video

ಮನ್ಸೂರ್ ವಿಡಿಯೋ ಅಲ್ಲಿ ಹೇಳಿರೋದಾದ್ರು ಏನು? | Oneindia Kannada

ತನ್ನ ಸ್ನೇಹಿತರೊಂದಿಗೆ ವಿಷಯ ಹಂಚಿಕೊಂಡಾಗ, ಶ್ರೀನಿವಾಸ್ ನಡುವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಬಗ್ಗೆ ಮಂಜುನಾಥ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯಾ ಪೊಲೀಸರು, ಶ್ರೀನಿವಾಸ್ ಗದ್ದುಗೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಿಸಿಬಿ ಪೊಲೀಸರ ಹೆಸರಿನಲ್ಲಿ ನಾಟಕವಾಡಿರುವ ಸಂಗತಿ ಗೊತ್ತಾಗಿದ್ದು ಶ್ರೀನಿವಾಸ್ ಗದ್ದುಗೆ ಎಂಬುವನನ್ನು ಬಂಧಿಸಿದ್ದಾರೆ. ಯುವತಿಯನ್ನೂ ಸಹ ಹೆದರಿಸಿ ನನಗೆ ವಂಚನೆ ಮಾಡಿದ್ದಾರೆ. ನಾನು ಕೊಟ್ಟಿರುವ ಹಣ ಇನ್ನೂ ವಾಪಸು ಬಂಧಿಲ್ಲ. ಪೊಲೀಸರು ಪೋನ್ ಮಾಡುವುದಾಗಿ ತಿಳಿಸಿದ್ದಾರೆ ಎಂದು ದೂರುದಾರ ಮಂಜುನಾಥ್ ಒನ್ ಇಂಡಿಯಾ ಕನ್ನಡ ಗೆ ತಿಳಿಸಿದ್ದಾರೆ.

English summary
Peenya police arrested Financier for extortion through honey trapping in the name of CCB Police inspector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X