• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಲ್‌ಬಾಗ್: ಜೇನು ದಾಳಿ ಕಡಿವಾಣಕ್ಕೆ ಸಿಬ್ಬಂದಿಗಳಿಗೆ ತರಬೇತಿ

|

ಬೆಂಗಳೂರು, ಮಾರ್ಚ್ 21: ಲಾಲ್ ಬಾಗ್ ನಲ್ಲಿ ಜೇನಿನ ದಾಳಿಗೆ ಸಾಕಷ್ಟು ಮಂದಿ ತುತ್ತಾಗುತ್ತಿದ್ದಾರೆ. ಆದರೆ ಇಷ್ಟು ದಿನ ಜೇನು ಗೂಡುಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿತ್ತೇ ಹೊರತು, ಅವುಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಯಾರೂ ಕೂಡ ಒತ್ತು ನೀಡಿರಲಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ ಇದೀಗ ಲಾಲ್ ಬಾಗ್ ನಲ್ಲಿ ಜೇನುನೊಣಗಳಿಂದ ಪ್ರವಾಸಿಗರಿಗೆ ಹಾಗೂ ಇತರರಿಗೆ ಯಾವುದೇ ರೀತಿ ಹಾನಿ ಸಂಭವಿಸದಂತೆ ತಡೆಯಲು ಲಾಲ್ ಬಾಗ್ ನ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಲಾಲ್ ಬಾಗಿನಲ್ಲಿ ವಿಕ್ರಮ್ ಸಾವು, 5 ಲಕ್ಷ ಪರಿಹಾರ ಘೋಷಣೆ

ಈ ನಿಟ್ಟಿನಲ್ಲಿ ಕೀಟ ಶಾಸ್ತ್ರ ತಜ್ಞರಾದ ಡಾ. ರಾಜಗೋಪಾಲ್ ಹಾಗೂ ಪಾರ್ಕ್ಸ್ ಅಂಡ್ ಗಾರ್ಡನ್ಸ್ ನ ಜಂಟಿ ನಿರ್ದೇಶಕ ಡಾ. ಎಂ ಜಗದೀಶ್ ಅವರ ನೇತೃತ್ವದಲ್ಲಿ ಉದ್ಯಾನದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜೇನು ದಾಳಿ ನಡೆಸಿದರೆ ತಕ್ಷಣ ಏನು ಮಾಡಬೇಕು , ದಾಳಿಗೆ ಒಳಗಾದವರನ್ನು ಯಾವ ರೀತಿ ಪಾರು ಮಾಡಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.

ಮತ್ತೊಂದು ಹಂತದಲ್ಲಿ ಇತರೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಜತೆಗೆ ಜೇನು ದಾಳಿಯಾದರೆ ಅವರನ್ನು ರಕ್ಷಿಸಲು ಸಿಬ್ಬಂದಿಗೆ ಬೇಕಾದ ಗೋಣಿತಾಟು, ಮುಳ್ಳು ತೆರೆಯಲು ಚಿಮುಟಗಳನ್ನು ವಿತರಿಸಲಾಗುತ್ತದೆ. ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ ಒಂದು ಸಿಲ್ಕ್ ಕಾಟನ್ ಮರದಲ್ಲಿ ಸುಮಾರು 15-20ಜೇನುಗೂಡುಗಳಿವೆ.

ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ

ಮುಖ್ಯ ಪ್ರವೇಶ ದ್ವಾರದ ಬಳಿ ಶೌಚಾಲಯದ ಪಕ್ಕದಲ್ಲಿರುವ ಸಿಲ್ಕ್ ಕಾಟನ್ ಮರದಲ್ಲಿ ಸುಮಾರು 20 ಜೇನು ಗೂಡುಗಳಿವೆ. ಜೆಡಿ ಕಚೇರಿ ಹಾದಿಯ ಮರದಲ್ಲಿ ಅಲ್ಲಲ್ಲಿ 5ಮರಗಳಲ್ಲಿ ಜೇನುಗೂಡುಗಳಿವೆ. ಈ ಪೈಕಿ ಅಧಿಕ ಜನಸಂಚಾರವಿರುವ ಬ್ಯಾಂಡ್ ಸ್ಟ್ಯಾಂಡ್, ಮುಖ್ಯದ್ವಾರ, ವೆಸ್ಟ ಗೇಟ್ ಬಳಿ ಜೇನು ಗೂಡುಗಳು ಕಟ್ಟಿರುವ ಮರಗಳಿಗೆ ಸುತ್ತಲೂ ತಾತ್ಕಾಲಿಕವಾಗಿ ದಾರದ ಬ್ಯಾರಿಕೇಡ್ ಅಳವಡಿಸಲಾಗಿದೆ. ಜತೆಗೆ ಒಬ್ಬ ಕಾವಲುಗಾರರನ್ನು ನೇಮಿಸಲಾಗಿದೆ. ಜೇನುಗಳಿರುವ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ.

English summary
Department of Horticulture has conducted a training program for staff and officials in Lalbagh to teach how to control honey bee attack and precautionary meassures should have taken during attack on visitors in the park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X