ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಗಡಿಪಾರು ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ನಿಯಂತ್ರಿಸುವ ಸಲುವಾಗಿ ಗಡಿಪಾರು ಕೇಂದ್ರವನ್ನು ತೆರೆಯಬೇಕೆಂಬ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.

ಕೂಡಲೇ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜು.31ರಂದು ಸಂಸದ ಪಿಸಿ ಮೋಹನ್‌ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲೇ ಬೇಕಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಹಾಗಾಗಿ ಗಡಿಪಾರು ಕೇಂದ್ರವನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಲ್ಲಿ ಅಕ್ರಮ ವಲಸಿಗರು: 117 ಜನರಿಗೆ ನೋಟಿಸ್‌ ಜಾರಿಬೆಂಗಳೂರಲ್ಲಿ ಅಕ್ರಮ ವಲಸಿಗರು: 117 ಜನರಿಗೆ ನೋಟಿಸ್‌ ಜಾರಿ

ಕೂಡಲೇ ಇವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ನಗರದಲ್ಲಿ ಗಡಿಪಾರು ಕೇಂದ್ರ ತೆರಿಯಲು ಸಮ್ಮತಿ ಸೂಚಿಸಿದೆ. ಬೆಂಗಳೂರಲ್ಲಿ ಬಾಂಗ್ಲಾದೇಶಿ ಮತ್ತು ಆಫ್ರಿಕಾ ರಾಷ್ಟ್ರಗಳಿಂದ ವಲಸೆ ಬಂದು ಅಕ್ರಮವಾಗಿ ನೆಲೆಸಿದ್ದಾರೆ ಅಷ್ಟೇ ಅಲ್ಲದೆ ಕಾನೂನು ಬಾಹಿರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Home ministry directs Karnataka to open deportionate center in Bengaluru

ದಿನೇದಿನೇ ಆನ್‌ಲೈನ್ ವಂಚನೆ, ವೇಶ್ಯಾವಾಟಿಕೆ, ಮನೆ ದರೋಡೆ, ಕಳ್ಳತನ, ಡ್ರಗ್ಸ್‌ ಸಪ್ಲೈ ಇನ್ನಿತರ ಪ್ರಕರಣಗಳಲ್ಲಿ ತೊಡಗಿದ್ದು, ಬೆಂಗಳೂರಿನ ಜನತೆಯ ಸ್ವಾಸ್ತ್ಯವನ್ನು ಹಾಳುಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದೊಂದು ದೊಡ್ಡ ಸವಾಲಾಗಿದೆ ಹಾಗಾಗಿ ಗಡಿಪಾರು ಕೇಂದ್ರವನ್ನು ತೆರಿಯಲು ಒತ್ತಡ ಹೇರಲಾಗುತ್ತಿದೆ.

English summary
Union home ministry has given a direction to open deportionate center in Bengaluru to evacuate illegal migrants from African countries and Bangladesh as soon as possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X