ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್‌ಕುಮಾರ್ ಹೆಗಡೆ ಪೋಸ್ಟ್‌ಗೆ ರಾಮಲಿಂಗಾ ರೆಡ್ಡಿ ಕಮೆಂಟ್

By Manjunatha
|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಕೇಂದ್ರ ಅನಂತ್‌ಕುಮಾರ್ ಹೆಗಡೆ ಅವರು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಬರಹ ವಿವಾದ ಹುಟ್ಟುಹಾಕಿದೆ.

ಮಾರಿಹಬ್ಬ' ಎನ್ನುವುದು ಬಲಿ ಪಡೆಯುವುದಾ? ಪ್ರಮೋದ್ ಮಧ್ವರಾಜ್ ಟಾಂಗ್ಮಾರಿಹಬ್ಬ' ಎನ್ನುವುದು ಬಲಿ ಪಡೆಯುವುದಾ? ಪ್ರಮೋದ್ ಮಧ್ವರಾಜ್ ಟಾಂಗ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಕಾ-ಬೇಕಾ ತಪರಾಕಿ ಎಂಬ ವ್ಯಂಗ್ಯದ ಬಾಣದಿಂದಲೇ ಬರಹ ಪ್ರಾರಂಭಿಸಿರುವ ಅನಂತ್‌ಕುಮಾರ್ ಹೆಗಡೆ ತಮ್ಮ ಪೋಸ್ಟ್‌ನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ನಾಲಾಯಕ್ ಎಂದು ಕರೆದಿದ್ದಾರೆ. ಅಷ್ಟೆ ಅಲ್ಲ ಮುಂದಿದೆ ಮಾರಿಹಬ್ಬ ಎಂದು ಬೆದರಿಕೆಯನ್ನೂ ಹಾಕಿದ್ದಾರೆ.

ಶಿರಸಿ ಗಲಭೆ ಪ್ರಕರಣ: 62 ಮಂದಿಗೆ ಮಧ್ಯಂತರ ಜಾಮೀನುಶಿರಸಿ ಗಲಭೆ ಪ್ರಕರಣ: 62 ಮಂದಿಗೆ ಮಧ್ಯಂತರ ಜಾಮೀನು

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಗೃಹಸಚಿವರು 'ಈಗ ಮಾಡಿರುವ ಗಲಭೆ, ಗಲಾಟೆಗಳು ಇಲ್ಲಿಗೆ ನಿಲ್ಲಲ್ಲ ಇನ್ನೂ ಮುಂದುವರೆಯುತ್ತವೆ ಎಂಬುದನ್ನು ಸೂಚ್ಯವಾಗಿ 'ಮುಂದಿದೆ ಮಾರೀಹಬ್ಬ' ಎಂದು ಅನಂತ್‌ ಕುಮಾರ್ ಅವರು ಹೇಳುತ್ತಿದ್ದಾರೆ. ಬಿಜೆಪಿ ಉದ್ದೇಶಪೂರ್ವಕವಾಗಿ ಗಲಭೆ ಮಾಡಿಸುತ್ತಿರುವುದನ್ನು ಅವರೇ ಒಪ್ಪಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ನಾನು ಫಿಟ್ ಆಗಿಯೇ ಇದ್ದೀನಿ

ನಾನು ಫಿಟ್ ಆಗಿಯೇ ಇದ್ದೀನಿ

ಅನಂತ್ ಕುಮಾರ್ ಅವರು ತಮ್ಮ ಫೋಸ್ಟ್‌ನಲ್ಲಿ ಸಚಿವರನ್ನು ನಾಲಾಯಕ್ ಎಂದಿರುವ ಬಗ್ಗೆ ಕೋಪದಿಂದ ಪ್ರತಿಕ್ರಿಯಿಸಿದ ಅವರು, ನಾನು ಫಿಟ್ ಆಗಿಯೇ ಇದ್ದೇನೆ, ಅನಂತ್‌ಕುಮಾರ್ ಹೆಗಡೆ ನಾಲಾಯಕ್ ಆತ ಮೊದಲು ಆತನ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ ಎಂದರು.

ಬೆಂಕಿ ಹಚ್ಚುವ ಮಂತ್ರಿ ಸ್ಥಾನ ನೀಡಿ

ಬೆಂಕಿ ಹಚ್ಚುವ ಮಂತ್ರಿ ಸ್ಥಾನ ನೀಡಿ

ಅನಂತ್‌ಕುಮಾರ್ ಹೆಗಡೆಗೆ ನೀಡಿರುವ ಸಚಿವ ಸ್ಥಾನ ಸರಿಯಿಲ್ಲ ಅವರಿಗೆ 'ಬೆಂಕಿ ಸಚಿವ' 'ಜಗಳ ಸಚಿವ' 'ಸುಳ್ಳು ಸಚಿವ' ಸ್ಥಾನಗಳು ಅವರಿಗೆ ಸೂಕ್ತವಾಗಿ ಹೊಂದಿಕೆ ಆಗುತ್ತವೆ ಎಂದು ರಾಮಲಿಂಗಾರೆಡ್ಡಿ ಅವರು ಅನಂತ್ ಕುಮಾರ್ ಹೆಗಡೆ ಅವರ ಕಾಲೆಳೆದರು.

ಹೆಣದ ಸುತ್ತ ರಾಜಕೀಯ

ಹೆಣದ ಸುತ್ತ ರಾಜಕೀಯ

ಗಲಭೆ ಮಾಡಿದವರನ್ನು ಹಿಂದೂ ಕಾರ್ಯಕರ್ತರು ಎನ್ನಬೇಡಿ, ಬಿಜೆಪಿ ಕಾರ್ಯಕರ್ತರು ಎನ್ನಿ, ಬಿಜೆಪಿ ತನ್ನ ಕಾರ್ಯಕರ್ತರನ್ನು ಬಳಸಿ ಬೇಕೆಂದೇ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ತಂತ್ರ ಮಾಡುತ್ತಿದೆ, ಚುನಾವಣೆಗೆ ಓಟು ಗಳಿಸಲು ಬಿಜೆಪಿಯ ಹೆಣೆದಿರುವ ತಂತ್ರ ಇದು, ಸತ್ತ ಹೆಣದ ಸುತ್ತ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.

ಪೊಲೀಸರು ಕೈಕಟ್ಟಿ ಕೂತಿಲ್ಲ

ಪೊಲೀಸರು ಕೈಕಟ್ಟಿ ಕೂತಿಲ್ಲ

ಹಿಂದೂ ಕಾರ್ಯಕರ್ತರ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸಿದುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು 'ಕಲ್ಲು ತೂರಾಟ ಮಾಡಿ, ಬಸ್ಸುಗಳಿಗೆ, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ ಪುಂಢರನ್ನು ಜೈಲಿಗೆ ಕಳಿಸದೆ ಹಾರ ಹಾಕಬೇಕಿತ್ತಾ, ಪೊಲೀಸರು ಕೈಕಟ್ಟಿ ಕೂತಿದ್ದಾರೆ ಎಂದು ಕೊಂಡಿದ್ದಾರಾ ಅವರು ಎಂದು ಪ್ರಶ್ನಿಸಿದರು.

ಕ್ರಿಯಾತ್ಮಕ ಚರ್ಚೆ ಮಾಡಿ

ಕ್ರಿಯಾತ್ಮಕ ಚರ್ಚೆ ಮಾಡಿ

ಸಾಕ್ಷ್ಯ ನಾಶ ಮಾಡಿದ ನಂತರ ಪರೇಶ ಮೇಸ್ತ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ ಎಂಬ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು ಸಾಕ್ಷ್ಯ ನಾಶ ಮಾಡಿದ್ದರೆ ಆ ಬಗ್ಗೆಯೂ ಸಿಬಿಐ ಅವರೇ ಪ್ರತ್ಯೇಕ ತನಿಖೆ ಮಾಡಿಬಿಡಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದರು. ಬಿಜೆಪಿಯವರು ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುವುದು ಬಿಟ್ಟು ಕ್ರಿಯಾತ್ಮಕ ಚರ್ಚೆ ಮಾಡಬೇಕು.

ರವಿ, ನಂದಿನಿ ಪ್ರಕರಣ ಏನಾಯಿತು?

ರವಿ, ನಂದಿನಿ ಪ್ರಕರಣ ಏನಾಯಿತು?

ಪ್ರತಿ ಕೇಸನ್ನೂ ಸಿಬಿಐಗೆ ಒಪ್ಪಿಸುವಂತೆ ಕೇಳುವುದು ಬಿಜೆಪಿಯ ನಿತ್ಯದ ಕೆಲಸವಾಗಿದೆ, ಡಿಕೆ ರವಿ ಪ್ರಕರಣ, ಶಿವಮೊಗ್ಗದ ನಂದಿನಿ ಪ್ರಕರಣಗಳಲ್ಲಿ ಕೂಡಾ ಹೀಗೆ ಸುಳ್ಳು ಹೇಳಿ ಹಠ ಮಾಡಿ ಸಿಬಿಐಗೆ ಒಪ್ಪಿಸುವಂತೆ ಮಾಡಿದರು ಆದರೆ ಆದದ್ದೇನು ಸಿಬಿಐ ಅವುಗಳನ್ನು ಸಹಜ ಸಾವೆಂದು ವರದಿ ನೀಡಿತು, ಬಿಜೆಪಿ ನೂರು ಬಾರಿ ಸುಳ್ಳನ್ನು ಹೇಳಿ ಅದನ್ನೇ ಸತ್ಯ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

English summary
Home minister Ramalinga reddy reacted to central minister Ananthkumar Hegde facebook post in witch he Home minister is useless. Ramalinga reddy says Anathkumar is unfit to central minister post, central should change his portfolio to quarrel minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X