ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದೆಹಲಿ,ಗುಜರಾತ್ ನಿಂದ ಕಾಂಗ್ರೆಸ್ ನಾಯಕರ ಫೋನ್ ‌ಕದ್ದಾಲಿಕೆ'

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಕಳೆದ ಹದಿನೈದು ದಿನಗಳಿಂದ ಗುಜರಾತ್ ಹಾಗೂ ದೆಹಲಿಯಿಂದ ಕರ್ನಾಟಕದ ಕಾಂಗ್ರೆಸ್ ನಾಯಕರ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಇದು ಬಿಜೆಪಿ ಕೃತ್ಯ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರ ಪೋನ್ ಕದ್ದಾಲಿಕೆ ನಡೆಯುತ್ತಿದೆ, ಕಳೆದ 15 ದಿನದಿಂದ ಇದು ನಡೆಯುತ್ತಿದೆ, ದೆಹಲಿ,ಗುಜರಾತ್, ಜೈಪುರ ತಂಡದಿಂದ ಪೋನ್ ಕದ್ದಾಲಿಕೆ ನಡೆಯುತ್ತಿದೆ, ನಮ್ಮ ಸ್ಟ್ರಾಟಜಿಗಳನ್ನು ಕದಿಯುತ್ತಿದ್ದಾರೆ ಕನ್ನಡದಲ್ಲಿ ಮಾತನಾಡಿದ್ದನ್ನು ಹಿಂದಿ, ಇಂಗ್ಲಿಷ್ ನಲ್ಲಿ ಅನುವಾದ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರದಿಂದ ಕಾಂಗ್ರೆಸ್ ಮುಖಂಡರ ಫೋನ್ ಕದ್ದಾಲಿಕೆ: ರಾಮಲಿಂಗಾ ರೆಡ್ಡಿ ಕೇಂದ್ರದಿಂದ ಕಾಂಗ್ರೆಸ್ ಮುಖಂಡರ ಫೋನ್ ಕದ್ದಾಲಿಕೆ: ರಾಮಲಿಂಗಾ ರೆಡ್ಡಿ

ಕಳೆದ ಆರು ತಿಂಗಳ ಹಿಂದೆಯೂ ನಾನು ಆರೋಪ ಮಾಡಿದ್ದೆ, ಕಾಂಗ್ರೆಸ್ ನಾಯಕರಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಐಟಿ ರೇಡ್ ಮಾಡಿಸಲಾಗುತ್ತಿದೆ ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಇರುವ ಉದ್ಯಮಿಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ ಬಿಜೆಪಿ ಬೆಂಬಲಿಸಿಬೇಕು ಎಂದು ಪರೋಕ್ಷವಾಗಿ ಬೆದರಿಸಲಾಗುತ್ತಿದೆ.

Home minister Ramalingareddy accuses BJP tapping Cong leaders phone calls

ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ಕೊಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಕಳೆದ 15 ದಿನಗಳಿಂದ 16 ಗಂಟೆ ಫೋನ್ ಕದ್ದಾಲಿಕೆ ನಡೆಯುತ್ತಿದೆ ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪ ಮಾಡಿದರು.

ಮಾಧ್ಯಮಗಳಲ್ಲಿ ಬಿಜೆಪಿ ಜಾಹೀರಾತು ವಿಚಾರ ನೂರಕ್ಕೆ ನೂರರಷ್ಟು ಹಸಿ ಸುಳ್ಳು, ಯಾವುದೇ ಸಾಕ್ಷ್ಯಧಾರವಿಲ್ಲದೇ ಸುಳ್ಳು ಜಾಹೀರಾತು ನೀಡುತ್ತಿದ್ದಾರೆ ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ಜಾಹೀರಾತು ನೀಡಲಿ ಬಿಜೆಪಿ ಸರ್ಕಾರದಲ್ಲಿ ಮೂವರು ಸಿಎಂ ಆಗಿದ್ದ ಬಗ್ಗೆ ಜಾಹೀರಾತು ನೀಡಲಿ ಎಂದರು.

ಸದನದ ಒಳಗಡೆ ಬ್ಲೂ ಫಿಲ್ಮ್ ನೋಡಿದ್ದ ಬಗ್ಗೆ ಜಾಹೀರಾತು ನೀಡಲಿ ಪೆಟ್ರೋಲ್, ಡಿಸೇಲ್ , ಬೆಲೆ ಏರಿಕೆ ಬಗ್ಗೆ ಜಾಹೀರಾತು ನೀಡಲಿ ಕೇಂದ್ರ ಸರ್ಕಾರ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕಿಲ್ಲ ಎಂದು ಜಾಹೀರಾತು ನೀಡಲಿ ಬೆಂಗಳೂರು ಗಾರ್ಬೆಜ್ ಸಿಟಿ ಮಾಡಿದ್ದು ಬಿಜೆಪಿ ಈ ಬಗ್ಗೆ ಜಾಹೀರಾತು ನೀಡಲಿ ಕ್ರೈಂ ರೇಟ್ ಬಿಜೆಪಿ ಅವಧಿಗಿಂತಲೂ ನಮ್ಮ ಸರ್ಕಾರದಲ್ಲಿ ಕಡಿಮೆಯಾಗಿದೆ ಮಾಧ್ಯಮಗಳನ್ನ ಬಿಜೆಪಿ ದುರಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದರು.

English summary
Home minister Ramalingareddy accused the BJP that tapping Congress leaders phone calls from Gujarat and Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X