ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಮ್ ಮಿನಿಸ್ಟರ್ ವಾರ್ನಿಂಗ್‌ಗೆ ಬೆಂಗಳೂರಿನಲ್ಲಿ ಟೋಯಿಂಗ್ ದಂಧೆ ಬಂದ್

|
Google Oneindia Kannada News

ಬೆಂಗಳೂರು, ಸೆ. 07: ಪಾರ್ಕಿಂಗ್ ವಿಚಾರದಲ್ಲಿ ಪೊಲೀಸರ ಹಾಗೂ ವಾಹನ ಸವಾರರ ನಡುವೆ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿರುವ 'ನೋ ಪಾರ್ಕಿಂಗ್ ಟೋಯಿಂಗ್' ವಸೂಲಿ ಬಾಜಿಗೆ ಬ್ರೇಕ್ ಬೀಳುತ್ತಿದ್ದಂತೆ ರಾಜಧಾನಿಯಲ್ಲಿ ಟೋಯಿಂಗ್ ವಾಹನಗಳು ಕಾರ್ಯ ಸ್ಥಗಿತಗೊಳಿಸಿವೆ. ಕಳೆದ ಎರಡು ದಿನಗಳಿಂದ ಬೆಂಗಳೂರಿಲ್ಲಿ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಟೋಯಿಂಗ್ ವಾಹನಗಳ ಕಾರ್ಯಾಚರಣೆ ನಿಂತು ಹೋಗಿದೆ. ಕಾನೂನು ಬದ್ಧವಾಗಿ ಟೋಯಿಂಗ್ ಮಾಡಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿದೆ.

ಟೋಯಿಂಗ್ ವಾಹನ ಎತ್ತಲ್ಲ ಎಂದ ಮಾಲೀಕರು: ರಾಜಧಾನಿ ಬೆಂಗಳೂರಿನಲ್ಲಿ 40 ಸಂಚಾರ ಪೊಲೀಸ್ ಠಾಣೆಗಳಿಗೆ. ಸುಗಮ ಸಂಚಾರಕ್ಕೆ ಅವಕಾಶ ಕೊಡುವುದು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸಂಚಾರ ಪೊಲೀಸರ ಕರ್ತವ್ಯ. ಬೆಂಗಳೂರಿನಲ್ಲಿ ನೋ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಕ್ಕೆ ಒಂದು ಸಾವಿರ ದಂಡ, ಟೋಯಿಂಗ್ ಶುಲ್ಕ 325 ರೂ. ಸರ್ಕಾರದ ಶುಲ್ಕ 325 ರೂ. ಸೇರಿ ಒಟ್ಟು 1650 ರೂ. ದಂಡ ಪಾವತಿಸಬೇಕು. ಸರ್ಕಾರದ ನಿಯಮದ ಪ್ರಕಾರ ಒಂದು ದ್ವಿಚಕ್ರ ವಾಹನ ಟೋಯಿಂಗ್ ಮಾಡಿದರೆ, ವಾಹನ ಮಾಲೀಕರಿಗೆ 325 ರೂ. ನೀಡಬೇಕು.

 ನೋ ಪಾರ್ಕಿಂಗ್ ವಾಹನ ಟೋಯಿಂಗ್: ಸಂಚಾರ ಪೊಲೀಸರ ಮೇಲೆ ಕಲ್ಲು ತೂರಿ ಫೈಟಿಂಗ್ ! ನೋ ಪಾರ್ಕಿಂಗ್ ವಾಹನ ಟೋಯಿಂಗ್: ಸಂಚಾರ ಪೊಲೀಸರ ಮೇಲೆ ಕಲ್ಲು ತೂರಿ ಫೈಟಿಂಗ್ !

ಆದರೆ ಟೋಯಿಂಗ್ ವಾಹನ ಮಾಲೀಕರ ಒಕ್ಕೂಟ ಮಾಡುವುದೇ ಬೇರೆ. ಟೋಯಿಂಗ್ ವಾಹನ ಸಂಚಾರಕ್ಕೆ ದಿನಕ್ಕೆ ತಗಲುವ ಇಂಧನ ವೆಚ್ಚ, 3 ಸಾವಿರ, ಟೋಯಿಂಗ್ ವಾಹನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವೇತನ ತಲಾ 700 ರೂ. ಮತ್ತು ಊಟದ ವ್ಯವಸ್ಥೆ ಯನ್ನು ಟೋಯಿಂಗ್ ಮಾಡುವ ವಾಹನಗಳಿಂದ ಅಕ್ರಮವಾಗಿ ಟೋಯಿಂಗ್ ಚಾರ್ಜ್ ಹೆಸರಿನಲ್ಲಿ ಪಡೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.

ಕೈ ಬಿಸಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ
ಇದಕ್ಕೆ ಅವಕಾಶ ಕೊಡುವ ಟೋಯಿಂಗ್ ವಾಹನದಲ್ಲಿರುವ ಪೊಲೀಸ್ ಸಿಬ್ಬಂದಿ (ಎಎಸ್ಐ) ಗೆ ದಿನಕ್ಕೆ ಇಂತಿಷ್ಟು ಮಾಮೂಲಿ ಅಂತ ಸಹ ಕೈ ಬಿಸಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ, ಟೋಯಿಂಗ್ ಮಾಡಿದ ದ್ವಿಚಕ್ರ ವಾಹನಗಳಲ್ಲಿ ಅರ್ಧಕ್ಕೆ ಪೊಲೀಸರು ರಶೀದಿ ನೀಡದೇ ನೋ ಪಾರ್ಕಿಂಗ್ ಶುಲ್ಕ , ಟೋಯಿಂಗ್ ಶುಲ್ಕ, ಸರ್ಕಾರದ ಸರ್ ಚಾರ್ಜ್ 1650 ರೂ. ಬದಲಿಗೆ 700 ರೂ. ನಿಂದ 800 ರೂ. ವಾಹನ ಸವಾರರಿಂದ ವಸೂಲಿ ಮಾಡುತ್ತಾರೆ. ಕಾನೂನು ಬದ್ಧವಾಗಿ ಟೋಯಿಂಗ್ ಮಾಡುವುದಕ್ಕಿಂತಲೂ ಅನಧಿಕೃವಾಗಿ ಹಣ ಪಡೆದು ಬಿಟ್ಟು ಕಳಿಸಲು ಟೋಯಿಂಗ್ ವಾಹನದ ಲಾಟ್ ಬಳಿ ಹುಡುಗರನ್ನು ನಿಯೋಜಿಸಲಾಗಿರುತ್ತದೆ.

ಕಾನೂನು ಬದ್ಧವಾಗಿ ಟೋಯಿಂಗ್ ಮಾಡುವುದರಿಂದ ಬರುವ ಹಣವನ್ನು ಟೋಯಿಂಗ್ ಮಾಲೀಕರ ಬ್ಯಾಂಕ್ ಖಾತೆಗೆ ಬೀಳುತ್ತದೆ. ಇನ್ನು ಟೋಯಿಂಗ್ ಮಾಡುವ ಹುಡುಗರ ಹಣ ಗಳಿಕೆ ಆಸೆಗೆ , ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಎಳೆದು ಕನಿಷ್ಠ 700 ರೂ. ಪೀಕುವುದನ್ನು ಕರಗತ ಮಾಡಿಕೊಂಡಿದ್ದಾರೆ. ನೋ ಪಾರ್ಕಿಂಗ್ ನಿಯಮವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಲು ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿ ಸಂಚಾರ ಠಾಣೆಗೆ ಮೂರು ಟೋಯಿಂಗ್ ವಾಹನಗಳನ್ನು ನಿಯೋಜಿಸಲಾಗಿದೆ. ಟೋಯಿಂಗ್ ವಸೂಲಿ ದಂಧೆಯಿಂದ ಬೇಸತ್ತು ಸವಾರರು ನಾನಾ ಕಾರಣದಿಂದ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಗಳು ವರದಿಯಾಗುತ್ತಲೇ ಇವೆ.

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನ ಟೋಯಿಂಗ್ ವಿಚಾರವಾಗಿ ಜಟಾಪಟಿನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನ ಟೋಯಿಂಗ್ ವಿಚಾರವಾಗಿ ಜಟಾಪಟಿ

ನೋ ಪಾರ್ಕಿಂಗ್ ಮತ್ತು ಟೋಯಿಂಗ್ ಸಮರ

ನೋ ಪಾರ್ಕಿಂಗ್ ಮತ್ತು ಟೋಯಿಂಗ್ ಸಮರ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಸಂಚಾರ ಪೊಲೀಸರು ಹಾಕುವ ದಂಡವನ್ನು ಸಾರ್ವಜನಿಕರು ಮುಕ್ತವಾಗಿ ಪಾವತಿಸುತ್ತಾರೆ. ಆದರೆ, ನೋ ಪಾರ್ಕಿಂಗ್ ಹಾಗೂ ಟೋಯಿಂಗ್ ವಿಚಾರ ಬಂದರೆ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಟೋಯಿಂಗ್ ಸಿಬ್ಬಂದಿ ಮೇಲೆ ಕಲ್ಲು ತೂರುತ್ತಾರೆ. ಈ ಸಂಘರ್ಷ ಟೋಯಿಂಗ್ ಪರಿಚಯಿಸಿದ ದಿನಗಳಿಂದಲೂ ನಡೆಯುತ್ತಲೇ ಇದೆ. ಇತ್ತೀಚೆಗೆ ಯಲಹಂಕದಲ್ಲಿ ಟೋಯಿಂಗ್ ಸಿಬ್ಬಂದಿ ಮುಖಕ್ಕೆ ವಾಹನ ಸವಾರರ ಹೆಲ್ಮೆಟ್ ನಿಂದ ಬೀಸಿ ಹಲ್ಲೆ ಮಾಡಿದ್ದರು. ಬಾಣಸವಾಡಿಯಲ್ಲಿ ಟೋಯಿಂಗ್ ವಾಹನ ಚಾಲಕನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದರು. ಇಂತಹ ಘಟನೆಗಳು ಪ್ರತಿ ನಿತ್ಯ ಬೆಂಗಳೂರಿನಲ್ಲಿ ವರದಿಯಾಗುತ್ತಲೇ ಇವೆ.

ಇದರ ಮೂಲ ಕಾರಣ ಸಂಚಾರ ಪೊಲೀಸರು ಅಲ್ಲ. ಟೋಯಿಂಗ್ ವಾಹನ ಮಾಲೀಕರು ಹುಟ್ಟು ಹಾಕಿರುವ ದಂಧೆ ಕಾರಣ. ಕಾನೂನು ಬದ್ಧವಾಗಿ ಟೋಯಿಂಗ್ ಮಾಡುವುದಕ್ಕಿಂತಲೂ ವಾಹನ ಸವಾರರಿಂದ ಅಕ್ರಮವಾಗಿ ಟೋಯಿಂಗ್ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡುವ ದಂಧೆಯ ಬಗ್ಗೆ ಬೆಂಗಳೂರು ಜನ ರೋಸತ್ತು ಹೋಗಿದ್ದಾರೆ. ಶಿಸ್ತು ಬದ್ಧವಾದ ನೋ ಪಾರ್ಕಿಂಗ್, ಪಾರ್ಕಿಂಗ್ ಜಾಗಗಳೇ ಗುರುತಿಸಲ್ಲ. ಪಾರ್ಕಿಂಗ್ ಯಾವುದು, ನೋ ಪಾರ್ಕಿಂಗ್ ಯಾವುದು ಎಂಬ ವಿವರ ಕೂಡ ಕಾಣ ಸಿಗಲ್ಲ. ಟೋಯಿಂಗ್ ವಾಹನಗಳ ಹಣ ದಾಹಕ್ಕೆ ವಾಹನ ಸವಾರರು ದಂಡ ತೆತ್ತಿದ್ದಾರೆ. ಇದನ್ನು ಸಹಿಸದೇ ಸಂಚಾರ ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಟೋಯಿಂಗ್ ಅಕ್ರಮ ಗಳಿಕೆ ಸಂಪೂರ್ಣ ಸ್ಥಗಿತ

ಟೋಯಿಂಗ್ ಅಕ್ರಮ ಗಳಿಕೆ ಸಂಪೂರ್ಣ ಸ್ಥಗಿತ

ಟೋಯಿಂಗ್ ದಂಧೆಯ ಬಗ್ಗೆ ಪೂರ್ಣ ಮಾಹಿತಿ ಪಡೆದ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸಿ ಟೋಯಿಂಗ್ ಮಾಡಬೇಡಿ. ನಿಯಮ ಬದ್ಧವಾಗಿ ಸಾರ್ವಜನಿಕರ ಜತೆ ವರ್ತನೆ ಮಾಡಿ. ಸುಖಾ ಸುಮ್ಮನೆ ತೊಂದರೆ ಕೊಡಬೇಡಿ. ನೋ ಪಾರ್ಕಿಂಗ್ ಬಗ್ಗೆ ಇರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಟೋಯಿಂಗ್ ಮಾಡುವ ಪ್ರತಿ ವಾಹನಕ್ಕೂ ಲೆಕ್ಕ ಕೊಡಿ ಎಂದು ಪೊಲಿಸ್ ಅಧಿಕಾರಿಗಳಿಗೆ ಕೆಲ ದಿನಗಳ ಹಿಂದಷ್ಟೇ ತಾಕೀತು ಮಾಡಿದ್ದರು.

ಗೃಹ ಸಚಿವರ ಈ ಮಾತಿನಿಂದ ಎಚ್ಚೆತ್ತ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿಗಳು ಟೋಯಿಂಗ್ ವಾಹನಗಳ ಕಾರ್ಯ ವೈಖರಿ ಪತ್ತೆ ಮಡಲು ದಿಢೀರ್ ಭೇಟಿ ನೀಡಿದ್ದಾರೆ. ಕಳೆದ ನಾಲ್ಕೈದು ದಿನದಿಂದ ಟೋಯಿಂಗ್ ವಾಹನಗಳ ಬಳಿ ಠಿಕಾಣಿ ಹೂಡಿದ ಡಿಸಿಪಿಗಳು ನಿಯಮ ಬದ್ಧವಾಗಿ ರಶೀದಿ ಹರಿಯುವಂತೆ ಸೂಚಿಸಿದ್ದಾರೆ. ಯಾವಾಗ ಡಿಸಿಪಿಗಳೇ ಕಾರ್ಯಚರಣೆಗೆ ಇಳಿದರೂ ಟೋಯಿಂಗ್ ವಾಹನಗಳ ದಿನದ ಅಕ್ರಮ ವಹಿವಾಟು ಸೊನ್ನೆಗೆ ಬಂತು ನಿಂತಿದೆ. ಮಂಗಳವಾರವೂ ಸಂಚಾರ ವಿಭಾಗದ ಡಿಸಿಪಿಗಳು ಕಾರ್ಯಾಚರಣೆಗೆ ಇಳಿದ ಪರಿಣಾಮ ಟೋಯಿಂಗ್ ವಾಹನಗಳು ಅನಧಿಕೃತವಾಗಿ ಮುಷ್ಕರ ಆರಂಭಿಸಿವೆ.

ಅಕ್ರಮ ದಂಧೆಗೆ ಅವಕಾಶ ಕೊಟ್ಟರೆ ಮತ್ತೆ ಟೋಯಿಂಗ್

ಅಕ್ರಮ ದಂಧೆಗೆ ಅವಕಾಶ ಕೊಟ್ಟರೆ ಮತ್ತೆ ಟೋಯಿಂಗ್

ಟೋಯಿಂಗ್ ಮಾಡುವ ಪ್ರತಿ ವಾಹನದಿಂದ ಕೇವಲ 325 ರೂ. ಪಡೆದು ಆರು ಟೋಯಿಂಗ್ ಹುಡುಗರ ಸಂಬಳ, ಅವರ ದಿನದ ಹೆಚ್ಚುವರಿ ಗಳಿಕೆ, ಊಟ, ಟೋಯಿಂಗ್ ವಾಹನದ ಡೀಸೆಲ್ ವೆಚ್ಚ, ಟೋಯಿಂಗ್ ವಾಹನಕ್ಕೆ ನಿಯೋಜನೆಗೊಳ್ಳುವ ಸಂಚಾರ ಅಧಿಕಾರಿಯ ಖರ್ಚು ವೆಚ್ಚ ಎಲ್ಲವನ್ನೂ ರಶೀದಿ ಹರಿಯದೇ ವಾಹನ ಸವಾರರಿಂದ ಪಡೆಯುತ್ತಿದ್ದ ಹಣದಲ್ಲಿ ವೆಚ್ಚ ಮಾಡಲಾಗುತ್ತಿತ್ತು. ನಿಯಮ ಬದ್ಧವಾಗಿ ಕೊಡುವ 325 ರೂ. ನಲ್ಲಿ ಇಷ್ಟೆಲ್ಲಾ ನಿರ್ವಹಣೆ ಮಾಡಿ ವಾಹನ ಬಾಡಿಗೆ ಗಳಿಕೆ ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡಿದ್ದೇ ತಡ , ಸಾಮೂಹಿಕವಾಗಿ ಟೋಯಿಂಗ್ ವಾಹನ ಮಾಲೀಕರು ವಾಹನ ನಿಲ್ಲಿಸಿದ್ದಾರೆ.

 ಟೋಯಿಂಗ್ ವಹಿವಾಟು ನಡೆಸಲು ಅಸಾಧ್ಯ

ಟೋಯಿಂಗ್ ವಹಿವಾಟು ನಡೆಸಲು ಅಸಾಧ್ಯ

ಅಕ್ರಮ ದಂಧೆಗೆ ಅವಕಾಶ ಕೊಡದಿದ್ದರೆ ನಾವು ಟೋಯಿಂಗ್ ವಹಿವಾಟು ನಡೆಸಲು ಅಸಾಧ್ಯ ಎಂಬ ಸಂದೇಶವನ್ನು ಗೃಹ ಸಚಿವರಿಗೆ ರವಾನಿಸಲು ಟೋಯಿಂಗ್ ವಾಹನ ನಿಲ್ಲಿಸಿದಂತೆ ಕಾಣುತ್ತಿದೆ. ಕಳೆದ ಮೂರು ದಿನದಿಂದ ಡಿಸಿಪಿಗಳು ಟೋಯಿಂಗ್ ವಾಹನಗಳ ಕಾರ್ಯ ಶೈಲಿ ತಪಾಸಣೆ ಮಾಡುತ್ತಿದ್ದಾರೆ. ದಿನಕ್ಕೆ 20 ದ್ವಿಚಕ್ರ ವಾಹನಕ್ಕೆ ರಶೀದಿ ಇಲ್ಲದೇ ಬಿಟ್ಟು ಕಳುಹಿಸಲಾಗುತ್ತಿತ್ತು. ಡಿಸಿಪಿಗಳ ಕಾರ್ಯಾಚರಣೆಯಿಂದ ಕಾನೂನು ಬದ್ಧವಾಗಿ ಎಂಟು ವಾಹನ ಕೂಡ ಟೋಯಿಂಗ್ ಮಾಡಲು ಆಗುತ್ತಿಲ್ಲ. ಹೀಗಾಗಿ ಬಹುತೇಕ ಟೋಯಿಂಗ್ ವಾಹನ ನಿಂತು ಹೋಗಿವೆ ಎಂದು ಟೋಯಿಂಗ್ ವಾಹನದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕಾನೂನು ಬದ್ಧ ಟೋಯಿಂಗ್ ಗಿಟ್ಟಲ್ಲವೇ?

ಕಾನೂನು ಬದ್ಧ ಟೋಯಿಂಗ್ ಗಿಟ್ಟಲ್ಲವೇ?

ಇನ್ನು ಬೆಂಗಳೂರಿನಲ್ಲಿ ಟೋಯಿಂಗ್ ಹಾಟ್ ಫೆವರೀಟ್ ಅಂತಲೇ ಕೆಲವು ಪೊಲೀಸ್ ಠಾಣೆಗಳಿವೆ. ಹಲಸೂರು ಹಲಸೂರು ಗೇಟ್, ಅಶೋಕ್ ನಗರ, ಬಾಣಸವಾಡಿ, ಬಸವನಗುಡಿ, ಮಾಗಡಿ ರೋಡ್, ಮಲ್ಲೇಶ್ವರ. ಈ ಠಾಣೆಗಳಲ್ಲಿ ಒಂದು ಠಾಣೆ ಸಿಕ್ಕೂ ಸಾಕು ಕನಿಷ್ಠ ತಿಂಗಳಿಗೆ ಟೋಯಿಂಗ್ ವಾಹನ ಮಾಲೀಕರಿಗೆ ಎರಡ ರಿಂದ ಮೂರು ಲಕ್ಷ ರೂ. ಆದಾಯ ಹೋಗುತ್ತದೆ. ಇನ್ನು ಇಂಧನಕ್ಕಾಗಿ, ಸಿಬ್ಬಂದಿಗಾಗಿ, ವಾಹನ ನಿರ್ವಹಣೆಗೆ ಎಲ್ಲವನ್ನೂ ಅನಧಿಕೃತವಾಗಿ ಬಿಡುವ ವಾಹನಗಳಿಂದ ಬರುವ ಹಣದಲ್ಲೇ ನಿರ್ವಹಣೆ ಮಾಡುವ ಪದ್ಧತಿ ಮೊದಲಿನಿಂದಲೂ ಇದೆ. ನೂತನ ಗೃಹ ಸಚಿವರು ಇದಕ್ಕೆ ಕಡಿವಾಣ ಹಾಕುತ್ತಿದ್ದಂತೆ ಕಾನೂನು ಬದ್ಧವಾಗಿ ಟೋಯಿಂಗ್ ಮಾಡಲು ವಾಹನ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿರುವ 100 ಟೋಯಿಂಗ್ ವಾಹನಗಳ ಪೈಕಿ 20 ಕೂಡ ಬೀದಿಗೆ ಇಳಿದಿಲ್ಲ. ಕೆಲವು ವಾಹನ ಬೆಳಗ್ಗೆ ಟೋಯಿಂಗ್ ಆರಂಭಿಸಿದರೂ, ನಾಲ್ಕೈದು ವಾಹನ ಟೋಯಿಂಗ್ ಮಾಡಿ ವಾಹನ ನಿಲ್ಲಿಸಿದ್ದಾರೆ ಎಂದು ಟೋಯಿಂಗ್ ವಾಹನದ ಸಿಬ್ಬಂದಿ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಒನ್ಇಂಡಿಯಾ ಕನ್ನಡಕ್ಕೆ ವಿವರ ನೀಡಿದ್ದಾರೆ.

Recommended Video

ಹಬ್ಬ ಹೇಗೆ ಮಾಡಬೇಕು ಅಂತ ತಿಳಿ ಹೇಳಿದ ಬಿಬಿಎಂಪಿ ಕಮಿಷನರ್!! | Oneindia Kannada
ಗಣೇಶ ಹಬ್ಬದ ದಿನಕ್ಕೆ ಸುಮ್ಮನಿರುವುದು ನೋಡಿದ್ದುಂಟೇ?

ಗಣೇಶ ಹಬ್ಬದ ದಿನಕ್ಕೆ ಸುಮ್ಮನಿರುವುದು ನೋಡಿದ್ದುಂಟೇ?

ಹಬ್ಬಗಳು ಬಂದರೆ ಸಾಕು ಟೋಯಿಂಗ್ ವಾಹನಗಳಿಗೆ ಹಬ್ಬಕ್ಕೂ ಮುನ್ನವೇ ದೊಡ್ಡ ಹಬ್ಬ. ಮಾರುಕಟ್ಟೆಗಳಿಗೆ ಬರುವರು ಆಕಸ್ಮಿಕ ವಾಹನ ನಿಲ್ಲಿಸಿದ ಕೂಡಲೇ ಟೋಯಿಂಗ್ ಪಾಲಾಗುತ್ತಿತ್ತು. ಹಿಡಿ ಶಾಪ ಹಾಕಿ ಅರ್ಧವಾದರೂ ಉಳಿಸಿಕೊಳ್ಳುವ ಆಸೆಗೆ ಬಿದ್ದು ಜನರು ಕೂಡ ರಶೀದಿ ಬೇಡ ಎಂದು ಐದು ನೂರು ರೂ ನಿಂದ 700 ರೂ. ವರೆಗೂ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗುತ್ತಿದ್ದರು. ಸದ್ಯ ಗಣೇಶ ಚತುರ್ಥಿ ಹಬ್ಬ ಸಮೀಪಿಸಿದೆ. ಆದರೆ ಎಲ್ಲೂ ಟೋಯಿಂಗ್ ವಾಹನಗಳ ಸೈರನ್ ಕಾಣಿಸುತ್ತಿಲ್ಲ. ಇದರ ಜಾಡು ಹುಡುಕಿದಾಗಲೇ ಇಷ್ಟೆಲ್ಲಾ ವೃತ್ತಾಂತ ಹೊರಗೆ ಬಂದಿದೆ.

English summary
Why the Towing vehicles operation in Bengaluru was halted ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X