ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಮುಂದೆ ದೇವರ ಪ್ರಸಾದ ವಿನಿಯೋಗಕ್ಕೂ ಪರವಾನಗಿ!

|
Google Oneindia Kannada News

ಬೆಂಗಳೂರು, ಫೆಬ್ರವರಿ07 : ಇನ್ನುಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲ ಪ್ರಸಾದ ಎಂದು ಹಂಚುವ ಹಾಗಿಲ್ಲ, ಮಂದಿರ, ಮಸೀದಿ ಮತ್ತು ಚರ್ಚ್ ಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ಸಲುವಾಗಿ ಆಯಾ ಧಾರ್ಮಿಕ ಸ್ಥಳಗಳ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪರವಾನಗಿ ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಆಹಾರ ಸುರಕ್ಷತಾ ಇಲಾಖೆಯು ಹೊಸ ನಿಯಮವನ್ನು ಜಾರಿ ಮಾಡಿದೆ, ಮುಜರಾಯಿ ಇಲಾಖೆ ದೇಗುಲ ಸೇರಿದಮತೆ ರಾಜ್ಯದ ಎಲ್ಲಾ ದೇಗುಲಗಳಿಗೆ ಚರ್ಚ್ ಹಾಗೂ ಮಸೀದಿಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿಮಾಡಿದ್ದು ಪ್ರಸಾದ ವಿನಿಯೋಗಕ್ಕೆ ಲೈಸನ್ಸ್ ಪಡೆಯುವಂತೆ ಸೂಚಿಸಿದೆ.

Holy places to take license for Prasadam distribution

ಭಕ್ತರಿಗೆ ಪ್ರಸಾದ ರೂಪದಲ್ಲಿ ಯಾವುದೇ ಆಹಾರ ಪದಾರ್ಥ ನೀಡಿದರೂ ಅದನ್ನು ಆಹಾರ ಸುರಕ್ಷತೆ ಇಲಾಖೆಯ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿದೆ. ದೇಗುಲದಲ್ಲಿ ವಿತರಣೆ ಮಾಡುವ ಪ್ರಸಾದದಲ್ಲಿ ಗುಣಮಟ್ಟ ಕಾಪಾಡುವುದಿಲ್ಲ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮೂರು ಬಾರಿ ನೋಟಿಸ್ ನೀಡಿದ ನಂತರವೂ ಲೈಸೆನ್ಸ್ ಪಡೆಯದೇ, ಪ್ರಸಾದ ಪರೀಕ್ಷೆಗೆ ಒಳಪಡಿಸದೇ ವಿತರಣೆ ಮಾಡಿದರೆ ದಂಡ ವಿಧಿಸಲು ಆಹಾರ ಇಲಾಖೆ ನಿರ್ಧರಿಸಿದೆ.

English summary
Holy and religious institutions henceforth should take license for distribution of Prasadam to devotees in temple, Mosque and Churches. The Food security issued circular on this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X