ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಎಚ್‌.ಎಂ.ರೇವಣ್ಣ

|
Google Oneindia Kannada News

ಬೆಂಗಳೂರು, ಜನವರಿ 26: ನಾನು ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅವರು ಲೋಕಸಭೆ ಟಿಕೆಟ್‌ಗಾಗಿ ಕಾಂಗ್ರೆಸ್‌ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ.

ಲೋಕಸಭಾ ಚುನಾವಣೆ :ದ.ಕ.ಕಾಂಗ್ರೆಸ್ ನಿಂದ ಮಿಥುನ್ ರೈಗೆ ಟಿಕೆಟ್ ?ಲೋಕಸಭಾ ಚುನಾವಣೆ :ದ.ಕ.ಕಾಂಗ್ರೆಸ್ ನಿಂದ ಮಿಥುನ್ ರೈಗೆ ಟಿಕೆಟ್ ?

'ನಾನು ಬಹು ವರ್ಷಗಳಿಂದ ಕಾಂಗ್ರೆಸ್‌ನ ಕಾರ್ಯಕರ್ತನಾಗಿದ್ದು, ಯೂತ್ ಕಾಂಗ್ರೆಸ್‌ ನಿಂದ ರಾಜಕೀಯ ಪ್ರಾರಂಭಿಸಿ, 12 ವರ್ಷಗಳ ಕಾಲ ಜಿಲ್ಲಾ ಅಧ್ಯಕ್ಷನಾಗಿ ದುಡಿದಿದ್ದೇನೆ ಎಂದು ಅವರು ಹೇಳಿದ್ದಾರೆ.

HM revanna aspirant of Lok Sabha election ticket from Bengaluru north constituency

ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಬೇಕು ಎಂಬುದು ನನ್ನ ಅಭಿಲಾಷೆ ಆದರೆ ಪಕ್ಷ ಎಲ್ಲಿಂದ ಟಿಕೆಟ್ ನೀಡಿದರೂ ಅಲ್ಲಿ ಸ್ಪರ್ಧಿಸುತ್ತೇನೆ ಎಂದರು.

ಜಯಪ್ರಕಾಶ್ ಹೆಗ್ಡೆ ಪರ ಟ್ವಿಟರ್ ಅಭಿಯಾನ:ಚಿಂತೆಗೀಡಾದ ಶೋಭಾ ಕರಂದ್ಲಾಜೆ ಜಯಪ್ರಕಾಶ್ ಹೆಗ್ಡೆ ಪರ ಟ್ವಿಟರ್ ಅಭಿಯಾನ:ಚಿಂತೆಗೀಡಾದ ಶೋಭಾ ಕರಂದ್ಲಾಜೆ

ದಾವಣಗೆರೆಯಿಂದ ಟಿಕೆಟ್ ನೀಡಬೇಕು ಎಂಬ ಚರ್ಚೆ ಆಗಿದೆಯೆಂದು ಗೊತ್ತಾಗಿದೆ. ನಾನು ಎಲ್ಲದಕ್ಕೂ ತಯಾರಾಗಿದ್ದೇನೆ. ಪಕ್ಷದ ಆಜ್ಞೆಯನ್ನು ಪಾಲಿಸುತ್ತೇನೆ. ಟಿಕೆಟ್ ಹಂಚಲು ಇನ್ನೂ ಸಮಯ ಇದೆ ಎಂದು ಅವರು ಹೇಳಿದ್ದಾರೆ.

ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಬೇಡ, ಅಂಬರೀಶ್ ಮಗ ಸ್ಪರ್ಧಿಸಲಿ: ಬೇಡಿಕೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಬೇಡ, ಅಂಬರೀಶ್ ಮಗ ಸ್ಪರ್ಧಿಸಲಿ: ಬೇಡಿಕೆ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಸ್ತುತ ಸದಾನಂದ ಗೌಡ ಅವರು ಸಂಸದರಾಗಿದ್ದಾರೆ. ಅದೇ ಕ್ಷೇತ್ರದಿಂದ ನಟಿ ರಮ್ಯಾ ಅವರು ಟಿಕೆಟ್ ಕೇಳಿದ್ದು, ಯಾರಿಗೆ ಟಿಕೆಟ್ ದೊರಕುತ್ತದೆ ಎಂಬುದು ಅನುಮಾನ. ದಾವಣಗೆರೆಯಿಂದ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಕೆಲವು ಶಾಸಕರು ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಸಹ ಮಾಡಿದ್ದಾರೆ.

English summary
Former minister HM Revanna is Lok Sabha elections 2019 ticket aspirant from Bengaluru north constituency. He said i am ready to contest any where but my first preference would be Bengaluru north.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X